ETV Bharat / state

ತೌಕ್ತೆ ಚಂಡಮಾರುತದಿಂದ ಮರವಂತೆ, ಉಳ್ಳಾಲದಲ್ಲಿ ಕಡಲ್ಕೊರೆತ.. ಭಾರಿ ಹಾನಿ

ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮ ಉಳ್ಳಾಲ ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು, ಅನೇಕ ಮನೆಗಳು ಸಮುದ್ರ ಪಾಲಾಗುವ ಭೀತಿ ತಲೆದೋರಿದೆ.

hurricane-taukta-started-in-udupi
ಉಡುಪಿಯಲ್ಲಿ ತೌಕ್ತೆ ಚಂಡಮಾರುತ ಆರಂಭ
author img

By

Published : May 14, 2021, 7:39 PM IST

ಉಡುಪಿ: ತೌಕ್ತೆ ಚಂಡಮಾರುತದಿಂದ ಮರವಂತೆಯಲ್ಲಿ ಭಾರಿ ಹಾನಿ ಸಂಭವಿಸಿದೆ. ಇಲ್ಲಿನ ಕಡಲ ತಡಿಯಲ್ಲಿ ಭಾರೀ ಕಡಲ್ಕೊರೆತ ಶುರುವಾಗಿದ್ದು, ಅಲೆಗಳ ಹೊಡೆತಕ್ಕೆ ಹಲವಾರು ತೆಂಗಿನ ಮರಗಳು ಸಮುದ್ರ ಪಾಲಾಗಿವೆ.

30 ಮೀಟರ್​ನಷ್ಟು ಮುಂದೆ ಬಂದಿರುವ ಕಡಲ ಅಲೆಗಳು ಮನೆ, ಮರಗಳನ್ನು ಆಹುತಿ ಪಡೆಯಲಾರಂಭಿಸಿವೆ. ಕಡಲಿನ ರೌದ್ರಾವತಾರ ಕಂಡು ತೀರ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅಲೆಗಳ ತೀವ್ರತೆ ಹೀಗೆಯೇ ಮುಂದುವರೆದರೆ ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಮರವಂತೆ ಕಡಲತೀರದಲ್ಲಿ ಭಾರಿ ಹಾನಿ

ಉಳ್ಳಾಲದಲ್ಲಿಯೂ ಕಡಲ್ಕೊರೆತ: ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮ ಉಳ್ಳಾಲ ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ಹೆಚ್ಚಾಗಿದೆ.

ಉಚ್ಚಿಲ ಸೋಮೇಶ್ವರದಲ್ಲಿ ಕಡಲು ಪ್ರಕುಬ್ದಗೊಂಡಿದ್ದು, ಸೋಮೇಶ್ವರ ಹಿಂದೂ ರುದ್ರ ಭೂಮಿಯ ಆವರಣ ಗೋಡೆ ಇನ್ನು ಕೆಲವೇ ಕ್ಷಣಗಳಲ್ಲಿ ಸಮುದ್ರ ಪಾಲಾಗುವುದರಲ್ಲಿದೆ. ಸಮುದ್ರದ ಅಲೆಗಳ ರೌದ್ರನರ್ತನಕ್ಕೆ ಸಾಲು ಸಾಲು ತೆಂಗಿನಮರಗಳು ಕಡಲು ಸೇರಲಿವೆ.

ರಾಜ್ಯದಲ್ಲಿ ಇನ್ನೂ ಐದು ದಿನಗಳ ಕಾಲ ಚಂಡಮಾರುತದ ಪರಿಣಾಮ ಇರುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ರೆಡ್ ಅಲರ್ಟ್​ ಘೋಷಿಸಿದೆ. ಕರಾವಳಿ ಭಾಗದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದ ಮೀನುಗಾರರ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಓದಿ: ಚಂಡಮಾರುತ ಎಫೆಕ್ಟ್​: ಬೆಂಗಳೂರಿನಲ್ಲಿ ರಾತ್ರಿ ಗುಡುಗು ಸಹಿತ ಮಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.