ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂರಾರು ಪುರಾತನ ಕಟ್ಟಡಗಳ ರಕ್ಷಣೆಗೆ ತೋರುತ್ತಿರುವ ನಿರ್ಲಕ್ಷ್ಯ ನಿನ್ನೆ ಮೊನ್ನೆಯದಲ್ಲ. ನಗರದ ಸುಲ್ತಾನ್ ಬತ್ತೇರಿ ಟಿಪ್ಪು ಸುಲ್ತಾನ್ ಅಧಿಕಾರ ಅವಧಿಯ ಕುರುಹಾಗಿದ್ದರೂ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ.
ಇದನ್ನೂ ಓದಿ...ಶಾಲೆಗಳಿಲ್ಲದ ಹೊತ್ತಲ್ಲಿ ಬಾಲ್ಯ ವಿವಾಹ ಅವ್ಯಾಹತ
ಜಲಮಾರ್ಗವಾಗಿ ಬರುವ ಹೊರ ರಾಜ್ಯದವರ ಮೇಲೆ ಕಣ್ಣಿಡಲು ಟಿಪ್ಪು ಸುಲ್ತಾನ್ ಕಾಲದಲ್ಲಿ ಸುಲ್ತಾನ್ ಬತ್ತೇರಿ ಕೋಟೆ ನಿರ್ಮಿಸಲಾಗಿತ್ತು. ಅಂದಿನ ಕಾಲದಲ್ಲಿ ಅಳಿವೆ ಬಾಗಿಲು ಆಗಿದ್ದ ಈ ಪ್ರದೇಶದಲ್ಲಿ ಜಲಮಾರ್ಗವಾಗಿ ಬರುತ್ತಿದ್ದರು. ಸುಲ್ತಾನ್ ಬತ್ತೇರಿಯ ಸುತ್ತಮುತ್ತ ಪ್ರದೇಶವನ್ನು ಸುಂದರಗೊಳಿಸುವ, ಹಸಿರೀಕರಣಗೊಳಿಸಿ ಪ್ರವಾಸಿಗರನ್ನು ಆಕರ್ಷಿಸುವ ತಾಣವನ್ನಾಗಿ ರೂಪಿಸಬೇಕಿತ್ತು.
ಈ ಕೋಟೆ ಪುರಾತತ್ವ ಇಲಾಖೆಯ ಅಧೀನಕ್ಕೆ ಒಳಪಟ್ಟಿದ್ದರೂ ಅದನ್ನು ಉಳಿಸುವ ಪ್ರಯತ್ನಗಳು ಅಷ್ಟಾಗಿ ನಡೆದಿಲ್ಲ. ಪುರಾತನ ಕಟ್ಟಡಗಳು ಚರಿತ್ರೆಯ ಸಾಕ್ಷ್ಯಗಳು. ಅವುಗಳನ್ನು ಇದ್ದಂತೆಯೆ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ, ಇಲಾಖೆ ಆ ಕ್ರಮಕ್ಕೆ ಮುಂದಾಗಬೇಕಿದೆ.