ETV Bharat / state

ಪ್ರವಾಹದ ನೀರಲ್ಲಿ ಸಿಲುಕಿದ ಜಾನುವಾರು: ಗೃಹಪ್ರವೇಶಕ್ಕೆ ಬಂದ ಯುವಕರಿಂದ ರಕ್ಷಣೆ - Bantwal cow rescue news

ಪ್ರವಾಹದ ನೀರಿನಲ್ಲಿ ಸಿಲುಕಿದ್ದ ದನವನ್ನು ಯುವಕರ ತಂಡವೊಂದು ರಕ್ಷಣೆ ಮಾಡಿದೆ. ಈ ಘಟನೆ ಬಂಟ್ವಾಳ ತಾಲೂಕಿನ ನಾವೂರಿನಲ್ಲಿ ನಡೆದಿದೆ.

bantwal
ಜಾನುವಾರು ರಕ್ಷಣೆ ಮಾಡಿದ ಯುವಕರು
author img

By

Published : Aug 23, 2021, 11:03 AM IST

ಬಂಟ್ವಾಳ: ನಾವೂರು ಗ್ರಾಮದ ಬಡಗುಂಡಿಯ ಬಳಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ದನವೊಂದನ್ನು ಇಲ್ಲಿನ ಯುವಕರು ರಕ್ಷಿಸಿದ್ದು, ಮೆಚ್ಚುಗೆ ಗಳಿಸಿದರು. ಗ್ರಾಮದ ಯುವಕರಾದ ರಕ್ಷಿತ್ ಮೈಂದಾಳ ಹಾಗೂ ಲೋಕೇಶ್ ನಾವೂರು ತಮ್ಮ ಸ್ನೇಹಿತರ ಸಹಾಯದೊಂದಿಗೆ ಮೂಕಪ್ರಾಣಿಯ ಪ್ರಾಣ ಉಳಿಸಿದರು.

ಜಾನುವಾರು ರಕ್ಷಣೆ ಮಾಡಿದ ಯುವಕರು

ಸ್ಥಳೀಯ ನಿವಾಸಿ ಉಮೇಶ್​ ಎಂಬವರು ತಮ್ಮ ಜಾನುವಾರುಗಳನ್ನು ಹೊಳೆಯ ಇನ್ನೊಂದು ಬದಿಗೆ ಮೇಯಲು ಬಿಟ್ಟಿದ್ದರು. ಈ ಸಂದರ್ಭದಲ್ಲಿ ಮಳೆಯಿಂದಾಗಿ ಹೊಳೆಯಲ್ಲಿ ಹೆಚ್ಚಿನ ನೀರು ಹರಿದುಬಂದಿತ್ತು. ಆಗ ದನವೊಂದು ನೀರಿನ ಮಧ್ಯೆ ಸಿಲುಕಿಕೊಂಡಿದೆ. ಈ ದೃಶ್ಯ ಅಲ್ಲೇ ಸಮೀಪದ ಗೃಹಪ್ರವೇಶ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಯುವಕರ ಕಣ್ಣಿಗೆ ಬಿದ್ದಿದ್ದು, ತಕ್ಷಣ ಎಚ್ಚೆತ್ತ ಅವರು ನೀರಿಗಿಳಿದು ಜಾನುವಾರು ರಕ್ಷಿಸಿದರು.

ಈ ಕಾರ್ಯಕ್ಕೆ ವಿನಯ್ ಸೂರ, ಹೇಮಂತ್ ಸೂರ, ನಿಶಾಂತ್ ನಾವೂರು, ರಂಜಿತ್, ಪ್ರಜ್ವಲ್, ಸುಮಂತ್ ಸಹಕರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.