ETV Bharat / state

ಕಠಿಣವಾದ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಲೆಂದು ಸಿಎಂಗೆ ಪೋಸ್ಟ್ ಕಾರ್ಡ್ ಅಭಿಯಾನ - ಮಂಗಳೂರಿನಲ್ಲಿ ವಿಶ್ವಹಿಂದು ಪರಿಷತ್ ಬಜರಂಗದಳದ ಛತ್ರಪತಿ‌ ಶಾಖೆಯಿಂದ ಗೋಪೂಜೆ

ಕಠಿಣವಾದ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಬೇಕೆಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೋಸ್ಟ್ ಕಾರ್ಡ್ ಅಭಿಯಾನ ನಡೆಯಿತು. ಈ ಮೂಲಕ ಸಿಎಂಗೆ ಪತ್ರಗಳನ್ನು ರವಾನಿಸಲಾಯಿತು.

Gopuja program in Mangalore
ವಿಶ್ವಹಿಂದು ಪರಿಷತ್ ಬಜರಂಗದಳದ ಛತ್ರಪತಿ‌ ಶಾಖೆಯಿಂದ ಗೋಪೂಜೆ
author img

By

Published : Nov 15, 2020, 11:18 AM IST

ಮಂಗಳೂರು: ನಗರದ ಮರೋಳಿ ಶ್ರೀ ಸೂರ್ಯನಾರಾಯಣ ದೇವಳದಲ್ಲಿ ವಿಶ್ವಹಿಂದು ಪರಿಷತ್ ಬಜರಂಗದಳದ ಛತ್ರಪತಿ‌ ಶಾಖೆಯಿಂದ ಗೋಪೂಜೆ ಕಾರ್ಯಕ್ರಮ ಜರುಗಿತು.

ಈ‌ ಸಂದರ್ಭ ಕಠಿಣವಾದ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಯವರಿಗೆ ಪೋಸ್ಟ್ ಕಾರ್ಡ್​ಗಳನ್ನು ಕಳಿಸಲಾಯಿತು.

ವಿಶ್ವಹಿಂದು ಪರಿಷತ್ ಬಜರಂಗದಳದ ಛತ್ರಪತಿ‌ ಶಾಖೆಯಿಂದ ಗೋಪೂಜೆ

ಗೋಪೂಜೆ ಪುರಾಣ ಹಿನ್ನೆಲೆ: ಗೋಪೂಜೆ ಆರಂಭವಾದದ್ದು ಭಗವಾನ್ ಶ್ರೀಕೃಷ್ಣನಿಂದಲೇ. ಅಂದು ಗೋಕುಲದಲ್ಲಿ ರಾಜ ಕಂಸನ ವಿಕೃತಿಯಿಂದ ಹದಗೆಟ್ಟ ಇಂದ್ರ ಧ್ವಜೋತ್ಸವ ಎಂಬ ಪೂಜೆಯನ್ನು ಬದಿಗಿಟ್ಟು, ಗೋವುಗಳಿಗೆ ಹುಲುಸಾದ ಮೇವುಗಳನ್ನು ನೀಡುವ ಗೋವರ್ಧನ ಪರ್ವತವನ್ನು ಪೂಜಿಸುವ ಗೋವರ್ಧನೋತ್ಸವವನ್ನು ಮೇಲ್ಪಂಕ್ತಿಗೆ ತಂದ.

ತನಗಿರುವ ಪೂಜೆಯನ್ನು ಬದಿಗೊತ್ತಿರುವುದನ್ನು ಕಂಡು ಮುನಿದುಕೊಂಡ ದೇವೇಂದ್ರ ಕುಂಭದ್ರೋಣ ಮಳೆಯನ್ನು ಸುರಿಸಿ ಗೋಕುಲವನ್ನು ಮುಳುಗಿಸಿದ. ಇಡೀ ಗೊಲ್ಲರ ಕೇರಿಯನ್ನು ಕಾಪಾಡಲು ಕೃಷ್ಣ ಅದೇ ಗೋವರ್ಧನ ಗಿರಿಯನ್ನು ಎತ್ತಿಹಿಡಿದು ದನ, ಕರು, ಗೋವಳರನ್ನು ರಕ್ಷಿಸಿದ. ದನಕರುಗಳ ತೊಂದರೆಯನ್ನು ನೀಗಿದ ದಿನವೇ ಗೋವತ್ಸ ಪ್ರತಿಪದೆ. ನಾವಿಂದು ಅದನ್ನು ಗೋವು ಪೂಜೆ ಎಂದು ಆಚರಿಸುತ್ತೇವೆ.

ನಮಗೆ ಹಾಲು-ಹೈನುಗಳನ್ನು ನೀಡುವ ಗೋವುಗಳಿಗೆ ಗೌರವ ನೀಡುವ ದ್ಯೋತಕವೇ ಗೋಪೂಜೆ. ದೀಪಾವಳಿಯ ಎರಡನೇ ದಿನವನ್ನು ಗೋವು ಪೂಜೆಯನ್ನಾಗಿ ಆಚರಿಸಲಾಗುತ್ತದೆ. ಅಂದು ಗೋವನ್ನು ಶುಚಿಯಾಗಿ ತೊಳೆದು, ಅದರ ಮೈಮೇಲೆ ಜೇಡಿ ಮಣ್ಣಿನಿಂದ ವೃತ್ತ ಬಳಿದು, ಹೂವಿನ ಹಾರವನ್ನು ಹಾಕಿ ಪೂಜೆ ಮಾಡಲಾಗುತ್ತದೆ‌. ಬಳಿಕ ಅವುಗಳಿಗೆ ಗೋಗ್ರಾಸವನ್ನಿರಿಸಿ, ತಮಗೆ ಹಾಲು-ಹೈನುಗಳನ್ನು ನೀಡಿ ಸಲುಹುವ ಗೋಮಾತೆಗೆ ಮನೆಯವರೆಲ್ಲರೂ ಸಾಷ್ಟಾಂಗ ಪ್ರಣಾಮಗೈಯುತ್ತಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.