ಮಂಗಳೂರು: ಮಟ್ಕಾ, ಜೂಜಾಟ ನಡೆಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಮೊಗರು ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಗಳೂರಿನ ಸೋಮೇಶ್ವರ ಗ್ರಾಮದ ಕುಂಪಲ ನಿವಾಸಿ ಗೌತಮ್(29), ಪಂಜಿಮೊಗರು ವಿವೇಕನಗರ ನಿವಾಸಿ ರವಿ ಅರುಣಾಚಲಂ(52), ಬಿಜೈ ಕಾಪಿಕಾಡ್ ನಿವಾಸಿ ರಕ್ಷಿತ್ ಜೆ.ರಾವ್(30), ಕೋಟೆಕಾರು ಕುಂಪಲ ನಿವಾಸಿ ರಘುಚಂದ್ರ(29) ಪೊಲೀಸರು ವಶಪಡಿಸಿಕೊಂಡ ಆರೋಪಿಗಳು. ಆರೋಪಿಗಳು ಪಂಜಿಮೊಗರಿನ ಫೋರ್ಸ್ ಶೋರೂಂ ಹತ್ತಿರ ಆಟೋರಿಕ್ಷಾದಲ್ಲಿ ಸಾರ್ವಜನಿಕರನ್ನು ನಂಬಿಸಿ ಅವರಿಂದ ಹಣ ಪಡೆದು ಮಟ್ಕಾ ಜೂಜು ನಡೆಸುತ್ತಿದ್ದಾರೆಂದು ಕಾವೂರು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣ ದಾಳಿ ನಡೆಸಿದ ಪೊಲೀಸರು ಆರೋಪಿಗಳಿಂದ 74,260 ರೂ. ವಶಪಡಿಸಿಕೊಂಡಿದ್ದಾರೆ.
ಅಲ್ಲದೆ ಮಟ್ಕ ಜೂಜಾಟದ ಅಂಕಿ ಅಂಶ ಬರೆಯಲು ಬಳಸಿಕೊಂಡ ಪೇಪರ್ , ಪೆನ್, 50 ಸಾವಿರ ರೂ. ಮೌಲ್ಯದ ಆಟೋರಿಕ್ಷಾ, ನಾಲ್ಕು ಮೊಬೈಲ್ ಗಳನ್ನು ವಶಪಡಿಕೊಂಡಿದ್ದು, ವಶಪಡಿಸಿಕೊಂಡ ನಗದು ಸಹಿತ ಸೊತ್ತುಗಳ ಒಟ್ಟು ಮೌಲ್ಯ 1,28,260 ರೂ. ಎಂದು ಅಂದಾಜಿಸಲಾಗಿದೆ.