ETV Bharat / state

ಮಂಗಳೂರಿನಲ್ಲಿ ನಾಲ್ಕೂವರೆ ಲಕ್ಷ ಮೌಲ್ಯದ ಖೋಟಾ ನೋಟು ಪತ್ತೆ: ಇಬ್ಬರ ಬಂಧನ - ನಗರ ಪೊಲೀಸ್ ಕಮೀಷನರ್ ಶಶಿಕುಮಾರ್

ಮಂಗಳೂರಿನಲ್ಲಿ ಖೋಟಾ ನೋಟು ಪತ್ತೆ - ಬಂಧಿತ ಆರೋಪಿಯಿಂದ ನಕಲಿ ನೋಟು ವಶಕ್ಕೆ - ಪತ್ತೆ ಮಾಡಿದ ಪೊಲೀಸ್​​ ತಂಡಕ್ಕೆ ಬಹುಮಾನ

ಮಂಗಳೂರಿನಲ್ಲಿ 4.5 ಲಕ್ಷ ಮೌಲ್ಯದ ಖೋಟಾ ನೋಟು ಪತ್ತೆ; ಇಬ್ಬರ ಬಂಧನ
4-dot-5-lakh-worth-of-fake-notes-detected-in-mangalore-two-arrested
author img

By

Published : Jan 3, 2023, 3:17 PM IST

ಮಂಗಳೂರು: ನಗರದಲ್ಲಿ ಖೋಟಾ ನೋಟು ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ ಸಿ ರೋಡ್ ನ ನಿಜಾಮುದ್ದೀನ್ ಯಾನೆ ನಿಜಾಂ (32) ಮತ್ತು ನಗರದ ಜೆಪ್ಪುವಿನ ರಜೀಮ್ ಯಾನೆ ರಾಫಿ (31) ಬಂಧಿತ ಆರೋಪಿಗಳು. ಜನವರಿ 2 ರಂದು ಈ ಆರೋಪಿಗಳು ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟರ್ ವೊಂದನ್ನು ಸುಲಿಗೆ ಮಾಡಿದ್ದರು. ಸಂಜೆ ಈ ಸ್ಕೂಟರ್​​ನಲ್ಲಿ ಆರೋಪಿಗಳು ಖೋಟಾ ನೋಟು ಸಾಗಿಸುತ್ತಿದ್ದರು. ಇವರಿಂದ 500 ರೂ. ಮುಖಬೆಲೆಯ ಒಟ್ಟು ರೂ 450,000 ನಕಲಿ ನೋಟನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಆರೋಪಿಗಳು ಬೆಂಗಳೂರಿನ ಡ್ಯಾನಿಯಲ್ ಎಂಬಾತನಿಂದ ಈ‌ ನಕಲಿ ನೋಟುಗಳನ್ನು ಪಡೆದುಕೊಂಡು ಮಂಗಳೂರಿನಲ್ಲಿ ಸಾಗಿಸುತ್ತಿದ್ದರು. ಜ. 2 ರಂದು ನಗರದ ನಂತೂರು ಎಂಬಲ್ಲಿ ವಾಹನ ತಪಾಸಣೆಯನ್ನು ಪೊಲೀಸರು ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಕೂಟರ್ ವೊಂದು ಅತಿವೇಗದಿಂದ ಹೋಗಿದೆ. ಇದನ್ನು ಹಿಡಿದು ತಪಾಸಣೆ ನಡೆಸಿದಾಗ ಖೋಟಾ ನೋಟು ಪತ್ತೆಯಾಗಿದೆ.

ಈ ನೋಟನ್ನು ಡ್ಯಾನಿಯಲ್​ನಿಂದ ಪಡೆದುಕೊಂಡಿದ್ದು, ಇದಕ್ಕೂ ಮುಂಚೆ ಡ್ಯಾನಿಯಲ್ ಖೋಟಾ ನೋಟು ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಬಂಧಿಸಲ್ಪಟ್ಟಿದ್ದಾನೆ. ಈ ಖೋಟಾ ನೋಟನ್ನು ಡ್ಯಾನಿಯಲ್ ತಮಿಳುನಾಡಿನ ಕೊಯಮುತ್ತೂರಿನಲ್ಲಿ ಮುದ್ರಿಸಿ ವಿತರಿಸಿದ್ದ ಎಂದು ಅವರು ತಿಳಿಸಿದ್ದಾರೆ.

ಆರೋಪಿ ನಿಜಾಂನ ವಿರುದ್ದ 2015 ರಲ್ಲಿ ವಿಟ್ಲದಲ್ಲಿ ಕೊಲೆ ಪ್ರಕರಣ, 2015 ರಲ್ಲಿ ಮಂಗಳೂರು ಕಾರಗೃಹದಲ್ಲಿ ಕೊಲೆ ಪ್ರಕರಣ, 2017 ರಲ್ಲಿ ಕೊಡಗಿನ ಕುಶಾಲನಗರ ಠಾಣೆಯಲ್ಲಿ ದರೋಡೆ ಪ್ರಕರಣ, 2018 ರಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ಮತ್ತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಡೆದ ಸುಲಿಗೆ‌ ಪ್ರಕರಣ ದಾಖಲಾಗಿದೆ. ಆರೋಪಿ ರಾಫೀ ವಿರುದ್ದ ಉರ್ವ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸ್ ತಂಡಕ್ಕೆ 10 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಕರೆ ಮಾಡುವುದಾಗಿ ಮೊಬೈಲ್ ಪಡೆದವನಿಂದ ಬ್ಲ್ಯಾಕ್ ಮೇಲ್: ಆರೋಪಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.