ETV Bharat / state

ಫಿಟ್​ನೆಸ್​ಗಾಗಿ​ ಸೈಕಲ್ ಸವಾರಿ ಮೊರೆ ಹೋದ ಮಾಜಿ ಸಚಿವ ಅಭಯಚಂದ್ರ ಜೈನ್...

ಮಾಜಿ‌ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಹೊಸದಾಗಿ ಸೈಕಲೊಂದನ್ನು ಖರೀದಿಸಿದ್ದು ಪ್ರತಿದಿನ 15 ರಿಂದ 20 ಕಿ.ಮೀ.ನಷ್ಟು ಸೈಕಲ್ ಸವಾರಿ ಮಾಡುವ ಮೂಲಕ ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುತ್ತಿದ್ದಾರೆ.

Mangalore
ಮಾಜಿ‌ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್
author img

By

Published : Oct 8, 2020, 11:07 PM IST

ಮಂಗಳೂರು: ಮಾಜಿ‌ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಅವರು ಹೊಸದಾಗಿ ಸೈಕಲೊಂದನ್ನು ಖರೀದಿಸಿದ್ದು ಪ್ರತಿದಿನ 15 ರಿಂದ 20 ಕಿ.ಮೀ.ನಷ್ಟು ಸೈಕಲ್ ಸವಾರಿ ಮಾಡುವ ಮೂಲಕ ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುತ್ತಿದ್ದಾರೆ.

ಸೈಕಲ್ ಸವಾರಿ ಮಾಡುವ ಮೂಲಕ ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಿದ ಮಾಜಿ‌ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್

ಮಾಜಿ ಕ್ರೀಡಾ ಸಚಿವರಾಗಿದ್ದ ಸಂದರ್ಭ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡಿದ್ದ ಅವರು ಯುವಕರಿಗೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ ಎಂದು ಕರೆ ನೀಡುತ್ತಿದ್ದರು. ಸಣ್ಣ ವಯಸ್ಸಿನಿಂದಲೂ ಕ್ರೀಡೆಯಲ್ಲಿ ಆಸಕ್ತಿಯನ್ನು ಹೊಂದಿರುವ ಅಭಯಚಂದ್ರ ಜೈನ್ ಅವರು 71ರ ಇಳಿ ವಯಸ್ಸಿನಲ್ಲಿಲ್ಲೂ ಬಾಸ್ಕೆಟ್‍ಬಾಲ್, ಶಟಲ್ ಬ್ಯಾಡ್ಮಿಂಟನ್ ಮುಂತಾದ ಕ್ರೀಡೆಗಳನ್ನು ಪ್ರತಿದಿನ ಆಡುತ್ತಿರುವುದಲ್ಲದೆ ವಾಕಿಂಗ್, ತನ್ನ ಚಾಲಕ ಬರುವುದಕ್ಕಿಂತ ಮೊದಲು ಕಾರು ಮತ್ತು ಬಸ್ ಚಾಲನೆಯನ್ನು ತಾವೇ ಮಾಡಿಕೊಂಡು ಹೋಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ.

ಈ ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಿಂದ ಮೂಡುಬಿದಿರೆವರೆಗೆ ಬಸ್ಸಿನಲ್ಲಿ ಬಂದು ಬಳಿಕ ಮನೆಗೆ ಹೋಗಲು ಮೂಡುಬಿದಿರೆಯಿಂದ ಆಟೋವನ್ನೇ ಬಳಸಿಕೊಳ್ಳುವ ಮೂಲಕ ಮಾದರಿಯಾಗಿದ್ದ ಅಭಯಚಂದ್ರ ಅವರು ಇದೀಗ ತಾನು ಸೈಕಲ್ ಸವಾರಿ ಮಾಡುವ ಮೂಲಕ ಜಿಮ್‍ಗೆ ಹೋಗಿ ತಮ್ಮ ಫಿಟ್‍ನೆಸ್​ನ್ನು ಕಾಪಾಡಿಕೊಳ್ಳುತ್ತಿರುವ ಯುವಕರಿಗೆ, ಸೈಕಲ್ ಸವಾರಿ ಮಾಡಿದರೆ ತಮ್ಮ ಆರೋಗ್ಯದ ಜತೆಗೆ ಫಿಟ್‍ನೆಸನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂಬ ಸಂದೇಶವನ್ನು ನೀಡುವ ಮೂಲಕ ಮಾದರಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.