ETV Bharat / state

ಬಿಜೆಪಿ ಲೇಬಲ್​​​ನಲ್ಲಿಆಹಾರ ಕಿಟ್ ವಿತರಣೆಯಾಗಬಾರದು: ಎಂ.ವೆಂಕಪ್ಪ ಗೌಡ ಸಲಹೆ - sulya latest news

ನಿರ್ಗತಿಕರಿಗೆ, ಅಶಕ್ತರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಆಹಾರ ಕಿಟ್ ವಿತರಿಸುವಾಗ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಲೇಬಲ್​ನಲ್ಲಿ ವಿತರಿಸಿದರೆ ಅದಕ್ಕೆ ನಮ್ಮ ಆಕ್ಷೇಪವಿದೆ ಎಂದು ಸುಳ್ಯ ಕೆಪಿಸಿಸಿ ಮಾಜಿ ಕಾರ್ಯದರ್ಶಿ, ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ತಿಳಿಸಿದ್ದಾರೆ.

Food Kit from kukke temple should not be distributed in the name of BJP: M Venkappa Gowda
ಬಿಜೆಪಿ ಲೇಬಲ್​​​ನಲ್ಲಿ ಕುಕ್ಕೆ ದೇಗುಲದ ಆಹಾರ ಕಿಟ್ ವಿತರಣೆಯಾಗಬಾರದು: ಎಂ.ವೆಂಕಪ್ಪ ಗೌಡ ಸಲಹೆ
author img

By

Published : Apr 29, 2020, 3:54 PM IST

ಸುಳ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ವಿತರಿಸುವ ಆಹಾರ ಕಿಟ್​​ಗಳನ್ನು ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಲೇಬಲ್​ನಲ್ಲಿ ವಿತರಿಸಿದರೆ ಅದಕ್ಕೆ ನಮ್ಮ ಆಕ್ಷೇಪವಿದೆ ಎಂದು ಸುಳ್ಯ ಕೆಪಿಸಿಸಿ ಮಾಜಿ ಕಾರ್ಯದರ್ಶಿ, ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ತಿಳಿಸಿದ್ದಾರೆ.

ಎಂ.ವೆಂಕಪ್ಪ ಗೌಡ

ಕಾರ್ಡ್ ರಹಿತ ಮತ್ತು ಅಶಕ್ತ ಕುಟುಂಬಗಳಿಗೆ ಫುಡ್ ಕಿಟ್ ವಿತರಿಸುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ, ಇದಕ್ಕೆ ನಮ್ಮ ಬೆಂಬಲವೂ ಇದೆ. ಆದರೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಕಿಟ್ ನೀಡುವಾಗ ಶಾಸಕರು ಪಕ್ಷ ನೋಡದೇ ಎಲ್ಲರನ್ನೂ ಸೇರಿಸಿಕೊಳ್ಳಬೇಕು. ಕಿಟ್ ವಿತರಣೆಯು ಸರ್ಕಾರದ ಮಟ್ಟದಲ್ಲಿ, ತಾಲೂಕು ಅಧಿಕಾರಿಗಳ ನೇತೃತ್ವದಲ್ಲಿ, ಶಾಸಕರ ನಿರ್ದೇಶನದಂತೆ ವಿತರಿಸಿದರೆ ಉತ್ತಮ ಎಂಬುದಾಗಿ ಸಲಹೆ ನೀಡಿದ್ದಾರೆ.

ಆಹಾರ ಕಿಟ್ ನೀಡುವಾಗ ಪಕ್ಷದ ಕಾರ್ಯಕರ್ತರ ಮೂಲಕ ನೀಡುವುದು ಮತ್ತು ಆ ಮೂಲಕ ಪಕ್ಷ ಸಂಘಟನೆ ಮಾಡುವುದು ಸರಿಯಲ್ಲ. ರಾಜಕೀಯಕ್ಕೆ ಸರ್ಕಾರದ ಸೌಲಭ್ಯವನ್ನು ಬಳಸಿಕೊಳ್ಳುವುದು ಪ್ರಸ್ತುತ ಸಮಯದಲ್ಲಿ ಸರಿಯಲ್ಲ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.