ETV Bharat / state

ಮಂಜುನಾಥನ ಸನ್ನಿಧಿಯಲ್ಲಿ ಪರಿಸರ ಸ್ನೇಹಿ ‘ಗೋವು ಕಾರು’, ‘ಗೋವು ಗೂಡ್ಸ್’​ಗಳದ್ದೇ ಹವಾ! - \bull car

ಸರಕು ಸಾಗಾಟದ ಗೂಡ್ಸ್ ವಾಹನದ ಮುಂಭಾಗವನ್ನು ತೆಗೆದು ಗೋವು ಗೂಡ್ಸ್ ಅನ್ವೇಷಣೆ ಮಾಡಲಾಗಿದೆ. ಇದರಂತೆ ಹಳೆಯ ಕಾರಿನ ಇಂಜಿನ್ ಭಾಗ ತೆಗೆದು ಕ್ಯಾಬಿನ್​​​​​ನಲ್ಲಿ ಎರಡು ಸೀಟಿನ ಎತ್ತಿನ ಬಂಡಿ ಕಾರು ನಿರ್ಮಾಣವಾಗಿದೆ. ಧರ್ಮಸ್ಥಳದ ರಸ್ತೆಯಲ್ಲೀಗ ಈ ಕಾರುಗಳದ್ದೇ ಹವಾ ಜೋರಾಗಿದೆ.

eco-friendly-car-in-dakshina-kananda-attracts-people
ಗೋವು ಕಾರು’, ‘ಗೋವು ಗೂಡ್ಸ್
author img

By

Published : Dec 26, 2020, 9:15 PM IST

Updated : Dec 26, 2020, 10:03 PM IST

ಬೆಳ್ತಂಗಡಿ (ದಕ್ಷಿಣ ಕನ್ನಡ): ಧರ್ಮಸ್ಥಳದ ರಸ್ತೆಯಲ್ಲೀಗ ವಿನೂತನ ಎತ್ತಿನ ಬಂಡಿಗಳದ್ದೇ ಸದ್ದು. ಯಾವುದೇ ಸದ್ದು ಗದ್ದಲವಿಲ್ಲದೆ ಹಳೆಯ ಕಾರುಗಳ ರೂಪಾಂತರದಿಂದ ತಯಾರಾದ ಈ ವಿನೂತನ ಎತ್ತಿನ ಬಂಡಿಗಳು ಎಲ್ಲರ ಗಮನ ಸೆಳೆಯುವ ಕೇಂದ್ರ ಬಿಂದುವಾಗಿವೆ.

ಒಂದು ವಾಹನದಲ್ಲಿ ಎರಡು ಎತ್ತುಗಳು, ಇನ್ನೊಂದು ವಾಹನದಲ್ಲಿ ಒಂದೇ ಬಸವ. ಇದು ಶ್ರೀ ಕ್ಷೇತ್ರ ಧರ್ಮಸ್ಥಳ ಯಾತ್ರಿಕರನ್ನು ಸೆಳೆಯುವ ’ಗೋವು ಗೂಡ್ಸ್ ರಿಕ್ಷಾ, ಗೋವು ಕಾರ್’ನ ವಿಶೇಷತೆ. ಉತ್ತರ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಲ್ಲಿ ಜಟಕಾ ಬಂಡಿಗಳು ಕಂಡು ಬರುತ್ತವೆ. ಅದರೊಂದಿಗೆ ಎತ್ತಿನಗಾಡಿಗಳೂ ಕಾಣಸಿಗುತ್ತವೆ. ಆದರೆ ಧರ್ಮಸ್ಥಳದಲ್ಲಿ ಯಾತ್ರಿಕರಿಗೆ ನೋಡಲು ಸಿಗೋದು ಮಾತ್ರ ಆಧುನಿಕ ವಿನ್ಯಾಸದೊಂದಿಗೆ ಅತ್ಯಾಕರ್ಷವಾಗಿ ರಚನೆಗೊಂಡ ಎತ್ತಿನ ಬಂಡಿಗಳು.

ಮಂಜುನಾಥನ ಸನ್ನಿಧಿಯಲ್ಲಿ ಎತ್ತಿನ ಬಂಡಿಯ ಕಾರು

ಹೆಗ್ಗಡೆಯವರ ಕಲ್ಪನೆಗೆ ಜೀವ

ಕಸದಿಂದ ರಸ ಎಂಬುವಂತೆ ಹಳೆಯ ಕಾರನ್ನೇ ಬಳಸಿ ಇಂಜಿನ್​ ಹೊರತುಪಡಿಸಿ ಉಳಿದ ಕ್ಯಾಬಿನ್ ಜಾಗವನ್ನು ಪ್ರಯಾಣಿಕರಿಗಾಗಿ ಮೀಸಲಿಸಿರಿದ್ದಾರೆ. ಜೊತೆಗೆ ಚಾಲಕನಿಗೆ ಮುಂಭಾಗದಲ್ಲಿ ಕೂರಲು ಸೀಟಿನ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಇಂಧನ ಬಳಸದೆ ಪರಿಸರ ಸ್ನೇಹಿ ವಾಹನವಾಗಿ ರಸ್ತೆಯಲ್ಲಿ ಓಡಾಡುತ್ತಿವೆ.

Bull cart rikshaw
ಗೋವು ಗೂಡ್ಸ್ ರಿಕ್ಷಾ

ಡಾ. ವೀರೇಂದ್ರ ಹೆಗ್ಗಡೆಯವರ ಕಲ್ಪನೆ, ಮಾರ್ಗದರ್ಶನದಂತೆ ಹರ್ಷೇಂದ್ರ ಕುಮಾರ್ ಅವರ ಸಲಹೆ ಸೂಚನೆಯಂತೆ ಕಾರ್ ಮ್ಯೂಸಿಯಂ ನೋಡಿಕೊಳ್ಳುವ ದಿವಾಕರ್‌ ಅವರ ತಂಡ ಪರಿಸರ ಸ್ನೇಹಿ ಗೋವು ಗೂಡ್ಸ್ ಹಾಗೂ ಗೋವು ಕಾರನ್ನು ನಿರ್ಮಿಸಿದೆ.

Bull cart rikshaw
ಎತ್ತಿನ ಬಂಡಿ ಕಾರು

ಸರಕು ಸಾಗಾಟದ ಗೂಡ್ಸ್ ವಾಹನದ ಮುಂಭಾಗವನ್ನು ತೆಗೆದು ಗೋವು ಗೂಡ್ಸ್ ಅನ್ವೇಷಣೆ ಮಾಡಲಾಗಿದೆ. ಯಾವುದೇ ಇಂಧನದ ಅಗತ್ಯವಿಲ್ಲದೆ ಎತ್ತಿನ ಬಲದಿಂದ ಓಡಾಡುವ ಪರಿಸರ ಸ್ನೇಹಿ ಕಾರೂ ಇದಾಗಿದೆ. ಇದನ್ನೆಳೆಯುವ 'ಪೊಂಗನೂರು' ತಳಿಯ ಬಸವನಿಗೆ ಹೆಚ್ಚಿನ ಭಾರವಾಗದಂತೆ ಈ ಪರಿವರ್ತಿತ ಗಾಡಿಗೆ ಆಧುನಿಕ ರಬ್ಬರ್ ಚಕ್ರಗಳು, ಹೈಡ್ರಾಲಿಕ್ ಬ್ರೇಕ್ ಹಾಗೂ ಪಾರ್ಕಿಂಗ್ ಜ್ಯಾಕ್ ಕೂಡ ಅಳವಡಿಸಲಾಗಿದೆ. ಹೀಗಾಗಿ ಎಳೆಯುವ ವೇಳೆ ಎತ್ತಿಗೆ ಅತ್ಯಂತ ಹಗುರ ಅನುಭವವಾಗಲಿದೆ. ದಿನನಿತ್ಯದ ಅಗತ್ಯವಾದ ಪೂಜಾ ಸಾಮಗ್ರಿಯನ್ನು ಜಮಾ ಉಗ್ರಾಣದಿಂದ ಶ್ರೀಮಂಜುನಾಥ ಸ್ವಾಮಿಯ ದೇವಳದವರೆಗೆ ತರಲು ಈ ವಾಹನ ಬಳಸಲಾಗುತ್ತದೆ.

Bull cart rikshaw
ಎತ್ತಿನ ಬಂಡಿ ಕಾರು

ಈ ಗಾಡಿಗಳ ತಯಾರಿಕೆಯಲ್ಲಿ ಮಂಜೂಷಾ ಕಾರು ಸಂಗ್ರಹಾಲಯದ ಸಿಬ್ಬಂದಿ ಮತ್ತು ಉಜಿರೆ ಎಸ್​​​​ಡಿಎಂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ.

Bull cart rikshaw
ಎತ್ತಿನ ಬಂಡಿ ಕಾರು

ಇದನ್ನೂ ಓದಿ: ಆನಂದ್ ಮಹೀಂದ್ರಾ ಹೃದಯ ಗೆದ್ದ ಧರ್ಮಸ್ಥಳದ ಎತ್ತಿನ ಬಂಡಿಯ ಕಾರು: ಟೆಸ್ಲಾ ಕಂಪನಿಗೆ ಖರ್ಚಿನ​ ಸವಾಲ್!

Last Updated : Dec 26, 2020, 10:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.