ETV Bharat / state

ದೇಶದ ಉದ್ದಗಲಕ್ಕೂ ಗುಣಮಟ್ಟದ ಕಾಮಗಾರಿ ನಡೆಯುತ್ತಿವೆ: ಶಾಸಕ ಹರೀಶ್ ಪೂಂಜ - MLA Harish Poonja

ಬೆಳ್ತಂಗಡಿ ತಾಲೂಕಿನ 235.20 ಕಿ.ಮೀ. ಗ್ರಾಮೀಣಾ ರಸ್ತೆಯನ್ನು ಜಿಲ್ಲಾ ರಸ್ತೆಯಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

MLA Harish Poonja
ಅಭಿವೃದ್ಧಿಯೇ ನಮ್ಮ ಮೂಲ ಉದ್ದೇಶ: ಶಾಸಕ ಹರೀಶ್ ಪೂಂಜ
author img

By

Published : Sep 20, 2020, 9:01 AM IST

ಬೆಳ್ತಂಗಡಿ: ಭಾರತದ ಮಾಜಿ ಪ್ರಧಾನಿ ದಿ.ವಾಜಪೇಯಿಯವರ ಕನಸಿನ ಕೂಸಾದ 'ಸ್ವರ್ಣ ಚತುಷ್ಪಥ ರಸ್ತೆ' ಆರಂಭಗೊಂಡು ಇಂದು ದೇಶದ ಉದ್ದಗಲಕ್ಕೂ ಗುಣಮಟ್ಟದ ರಸ್ತೆ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದೆ. ಇದೀಗ ಬೆಳ್ತಂಗಡಿ ತಾಲೂಕಿನ 235.20 ಕಿ.ಮೀ. ಗ್ರಾಮೀಣ ರಸ್ತೆಯನ್ನು ಜಿಲ್ಲಾ ರಸ್ತೆಯಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

ಅಭಿವೃದ್ಧಿಯೇ ನಮ್ಮ ಮೂಲ ಉದ್ದೇಶ: ಶಾಸಕ ಹರೀಶ್ ಪೂಂಜ

ಉಜಿರೆಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ನಮ್ಮ ರಾಜಕಾರಣ ಅಭಿವೃದ್ಧಿಯ ರಾಜಕಾರಣ. ಅಭಿವೃದ್ಧಿಯೇ ನಮ್ಮ ಮೂಲ ಉದ್ದೇಶ. ಇಂದು ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಮಾಡಿರುವ ಅಭಿವೃದ್ಧಿ ಕೆಲಸಗಳು ಎಲ್ಲದರ ಕ್ರೋಢೀಕರಣ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ವರುಷಗಳ ಅವಧಿಯಲ್ಲಿ 500ರಿಂದ 600 ಕೋಟಿ ರೂ. ವೆಚ್ಚದಲ್ಲಿ ಸರ್ಕಾರ ಕೊಟ್ಟಿರುವಂತಹ ಅನುದಾನದ ಮೂಲಕ ಅಭಿವೃದ್ಧಿ ಕೆಲಸಗಳನ್ನು ನಮ್ಮ ಕ್ಷೇತ್ರದಲ್ಲಿ ಮಾಡುತ್ತಿದ್ದೇವೆ. ಪ್ರಾಯಶಃ ಇಂದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಭಾರತದ ಇತಿಹಾಸಗಳ ನಂತರ ಇಷ್ಟು ವರುಷಗಳಲ್ಲಿ ಪಿಡ್ಬ್ಲೂಡಿ ಇಲಾಖೆಯ ಮೂಲಕ ರಸ್ತೆಗಳನ್ನು ಮೇಲ್ದರ್ಜೆಗೇರಿಸುವಂತಹ ಕಾರ್ಯಗಳು ಆಗಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಇವರಿಗೆ ಬೆಳ್ತಂಗಡಿ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಿಂಡಿ ಅಣೆಕಟ್ಟುಗಳ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಸಚಿವರಾದ ಮಾಧುಸ್ವಾಮಿಯವರಲ್ಲಿ ಈ ಬಗ್ಗೆ ಮನವಿ ಮಾಡಿಕೊಂಡಿದ್ದೇನೆ. ಭರವಸೆ ನೀಡಿದ್ದಾರೆ, ಮುಂದಿನ ದಿನಗಳಲ್ಲಿ ಭರವಸೆಯನ್ನು ಪೊರೈಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರುಗಳಾದ ಕೊರಗಪ್ಪ ನಾಯ್ಕ , ಸೌಮ್ಯ ಜಯಂತ್ ಗೌಡ, ಮಮತ ಎಂ. ಶೆಟ್ಟಿ, ತಾ ಪಂ ಸ್ಥಾಯಿ ಸಮಿತಿ ಆಧ್ಯಕ್ಷ ಶಶಿಧರ್ ಕಲ್ಮಂಜ, ಪಿಡ್ಬ್ಯೂಡಿ ಇಂಜಿನಿಯರ್ ಶಿವಪ್ರಸಾದ್ ಅಜಿಲ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.