ಬಂಟ್ವಾಳ: ತಾಲೂಕಿನ ಪಾಣೆ ಮಂಗಳೂರು ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ನಿನ್ನೆ ಸಂಜೆ ಪತ್ತೆಯಾಗಿದೆ.
ಕಳೆದ ವರ್ಷ ಇಲ್ಲೇ ಮೂರು ಶವಗಳು ಪತ್ತೆಯಾಗಿ ಸುದ್ದಿಯಾಗಿತ್ತು. ಇದೀಗ ಬಿಳಿ ಷರ್ಟ್, ಕಂದು ಪ್ಯಾಂಟ್ ಧರಿಸಿದ ವ್ಯಕ್ತಿಯೊಬ್ಬರ ಶವ ಕಂಡುಬಂದಿದ್ದು, ಅದನ್ನು ಮೇಲೆತ್ತಲಾಗಿದೆ. ಸದ್ಯ ಪೊಲೀಸರು ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.