ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 8 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ಕೊರೊನಾಗೆ ಬಲಿಯಾದವರ ಸಂಖ್ಯೆ 131 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿಂದು ಸಾವನ್ನಪ್ಪಿದ ಎಂಟು ಮಂದಿಯಲ್ಲಿ ಒಬ್ಬರು ಹುಬ್ಬಳ್ಳಿ, ಮತ್ತೊಬ್ಬರು ಉಡುಪಿ ಜಿಲ್ಲೆಯವರಾಗಿದ್ದು ಆರು ಮಂದಿ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ.
ಹುಬ್ಬಳ್ಳಿಯ 68 ವರ್ಷದ ಪುರುಷ, ಉಡುಪಿ ಜಿಲ್ಲೆಯ 82 ವರ್ಷದ ಪುರುಷ, ಮಂಗಳೂರಿನ 64 ವರ್ಷದ ಪುರುಷ, 65 ವರ್ಷದ ಪುರುಷ, 65 ವರ್ಷದ ಮಹಿಳೆ, 51 ವರ್ಷದ ಪುರುಷ, 92 ವರ್ಷದ ಮಹಿಳೆ ಮತ್ತು ಬಂಟ್ವಾಳದ 65 ವರ್ಷದ ಪುರುಷ ಮೃತಪಟ್ಟವರು.
ಜಿಲ್ಲೆಯಲ್ಲಿ ಇಂದು 119 ಮಂದಿಯಲ್ಲಿ ಕೊರೊನಾ ದೃಢಪಟ್ಟಿವೆ. ಇವರಲ್ಲಿ ಪ್ರಾಥಮಿಕ ಸಂಪರ್ಕದಿಂದ 46, ಐಎಲ್ಐ ಪ್ರಕರಣದ 34, ಸಾರಿ ಪ್ರಕರಣದ 6 ಮಂದಿಗೆ ಕೊರೊನಾ ದೃಢಪಟ್ಟಿದೆ.
33 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ 4,930 ಮಂದಿಗೆ ಈವರೆಗೆ ಕೊರೊನಾ ಖಾತ್ರಿಯಾಗಿದೆ. ಇಂದು 80 ಮಂದಿ ಗುಣಮುಖರಾಗಿದ್ದು, ಈವರೆಗೆ 2,297 ಮಂದಿ ಗುಣಮುಖರಾಗಿದ್ದಾರೆ. 2,502 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.