ಬೆಳ್ತಂಗಡಿ : ತಾಲೂಕಿನ ಪಟ್ರಮೆ ಗ್ರಾಮದಲ್ಲಿ ವಿದ್ಯುತ್ ಶಾಕ್ ಹೊಡೆದು ತಾಯಿ ಮಗು ಸಾವನ್ನಪ್ಪಿದ ಘಟನೆ ನಡೆದಿದೆ.
ಪಟ್ರಮೆಯ ಬೋಲೊಡಿಕಜೆ ಎಂಬಲ್ಲಿ ಪಂಪ್ ಸ್ವಿಚ್ ಹಾಕಲು ಮಗುವಿನೊಂದಿಗೆ ತೆರಳಿದ ಗೀತಾ (30) ಮತ್ತು ಭವಿಷ್ (6) ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ದನಗಳಿಗೆ ನೀರು ಕೊಡಲು ಮೋಟರ್ ಸ್ವಿಚ್ ಆನ್ ಮಾಡಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂಬುದು ತಿಳಿದು ಬಂದಿದ್ದು, ವಿಷಯ ತಿಳಿದು ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಓದಿ: ಚಾಮರಾಜನಗರ: ಕಾಡಂಚಿನ ಗ್ರಾಮದಲ್ಲಿ ಯುವತಿಯರಿಂದ ಕೋವಿಡ್ ಜಾಗೃತಿ, ಯುವಕರ ಸಾಥ್