ETV Bharat / state

ತಂದೆಯ ಗುಂಡಿಗೆ ಮಗ ಬಲಿ ಪ್ರಕರಣ : ಪುತ್ರನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅಪ್ಪನಿಗೆ ಅನುಮತಿ

ಆರೋಪಿಯನ್ನು ನಾಲ್ಕು ದಿನದ ಪೊಲೀಸ್ ಕಸ್ಟಡಿಗೆ ಒದಗಿಸಿದ ನ್ಯಾಯಾಲಯ ಒಂದು ವೇಳೆ ಮಗನ ಸಾವು ಸಂಭವಿಸಿದರೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶ ನೀಡುವಂತೆ ಆದೇಶಿಸಿತ್ತು. ಬಾಲಕ ಇಂದು ಮುಂಜಾನೆ ಸಾವನ್ನಪ್ಪಿದ್ದು, ನ್ಯಾಯಾಲಯದ ಆದೇಶದಂತೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ..

Rajesh Prabhu
ರಾಜೇಶ್ ಪ್ರಭು
author img

By

Published : Oct 8, 2021, 4:03 PM IST

Updated : Oct 8, 2021, 4:57 PM IST

ಮಂಗಳೂರು : ತನ್ನದೇ ಪಿಸ್ತೂಲ್​ನಿಂದ ಹಾರಿದ ಗುಂಡಿಗೆ ಮಗ ಬಲಿಯಾದ ಪ್ರಕರಣದ ಆರೋಪಿ ರಾಜೇಶ್ ಪ್ರಭು ಅವರಿಗೆ ಮಗನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ನ್ಯಾಯಾಲಯ ಅವಕಾಶ ನೀಡಿದೆ.

ಕೊಲೆ ಆರೋಪಿ ಅಪ್ಪನಿಗೆ ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೋರ್ಟ್‌ ಅನುಮತಿ ನೀಡಿರುವ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿರುವುದು..

ಕೆಲ ದಿನಗಳ ಹಿಂದೆ ಮಂಗಳೂರಿನ ವೈಷ್ಣವಿ ಕಾರ್ಗೋ ಪ್ರೈ. ಲಿಮಿಟೆಡ್ ಮಾಲೀಕ ರಾಜೇಶ್ ಪ್ರಭು ತನ್ನ ಕೈಯಲ್ಲಿದ್ದ ಪಿಸ್ತೂಲ್​​​ನಿಂದ ಹಾರಿಸಿದ ಗುಂಡು ಅವರ ಮಗ ಸುಧೀಂದ್ರ(16)ನ ತಲೆಗೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಮಗನ ಮೆದುಳು ನಿಷ್ಕ್ರೀಯಗೊಂಡು ಇಂದು ಮುಂಜಾನೆ ಆತ ಸಾವನ್ನಪ್ಪಿದ್ದಾನೆ.

ಇದರ ಮಧ್ಯೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದ ರಾಜೇಶ್ ಪ್ರಭುವನ್ನು ನಿನ್ನೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಸಂದರ್ಭದಲ್ಲಿ ಆರೋಪಿ ಪರ ವಕೀಲರು ರಾಜೇಶ್ ಪ್ರಭು ಅವರ ಮಗನ ಸ್ಥಿತಿ ಗಂಭೀರವಾಗಿದೆ. ಒಂದು ವೇಳೆ ಸಾವು ಸಂಭವಿಸಿದರೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ನ್ಯಾಯಾಲಯ ಅವಕಾಶ ನೀಡಬೇಕೆಂದು ಕೇಳಿದ್ದರು.

ಇದನ್ನೂ ಓದಿ: ತಂದೆಯಿಂದಲೇ ಮಗನಿಗೆ ಗುಂಡು ಪ್ರಕರಣ: ಮೆದುಳು ನಿಷ್ಕ್ರಿಯಗೊಂಡಿದ್ದ ಬಾಲಕ ಸಾವು

ಆರೋಪಿಯನ್ನು ನಾಲ್ಕು ದಿನದ ಪೊಲೀಸ್ ಕಸ್ಟಡಿಗೆ ಒದಗಿಸಿದ ನ್ಯಾಯಾಲಯ ಒಂದು ವೇಳೆ ಮಗನ ಸಾವು ಸಂಭವಿಸಿದರೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶ ನೀಡುವಂತೆ ಆದೇಶಿಸಿತ್ತು. ಬಾಲಕ ಇಂದು ಮುಂಜಾನೆ ಸಾವನ್ನಪ್ಪಿದ್ದು, ನ್ಯಾಯಾಲಯದ ಆದೇಶದಂತೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು ಶೂಟೌಟ್​ನಲ್ಲಿ ಮಗನಿಗೆ ಗುಂಡು ತಗುಲಿದ ಪ್ರಕರಣ.. ತಂದೆಯ ಬಂಧನ

Last Updated : Oct 8, 2021, 4:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.