ಪುತ್ತೂರು (ದಕ್ಷಿಣಕನ್ನಡ): ಪುತ್ತೂರು ನಗರ ಠಾಣೆಯ ಕಾನ್ಸ್ಟೇಬಲ್ ಸೇರಿ ಇಂದು ತಾಲೂಕಿನ ಐವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕಳೆದ ಮೂರು ವಾರದಿಂದ ತಾಲೂಕಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಶುಕ್ರವಾರ ಹಾಗೂ ಶನಿವಾರದಂದು 9 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ವಿದೇಶದಿಂದ ಆಗಮಿಸಿದ ಒಬ್ಬರನ್ನ ಹೊರತುಪಡಿಸಿ ಉಳಿದವರ ಸೋಂಕಿನ ಮೂಲ ಪತ್ತೆಯಾಗಿಲ್ಲ.
ಇಂದು ಪುತ್ತೂರು ನಗರ ಠಾಣೆಯ 30 ವರ್ಷದ ಕಾನ್ಸ್ಟೇಬಲ್ಗೆ ಸೋಂಕು ತಗುಲಿದ್ದು, ಇವರು ವಾಸಿಸುತ್ತಿದ್ದ ಸಂಪ್ಯ ಪ್ರದೇಶವನ್ನ ಸೀಲ್ಡೌನ್ ಮಾಡಲಾಗಿದೆ. ಅಲ್ಲದೆ, ನಗರ ಠಾಣೆಯ ಮಹಿಳಾ ಕಾನ್ಸ್ಟೇಬಲ್ ತಾಯಿಗೂ ಸೋಂಕು ತಗುಲಿದ್ದು, ಪುತ್ತೂರು ವಸತಿ ಗೃಹವನ್ನ ಸೀಲ್ಡೌನ್ ಮಾಡಲಾಗಿದೆ.
ಬನ್ನೂರು ನೀರ್ಪಾಜೆಯ 42 ವರ್ಷ ವ್ಯಕ್ತಿ, ಕೆದಂಬಾಡಿ ಗ್ರಾಮದ ನಿಡ್ಯಾಣಯ 56 ವರ್ಷದ ವ್ಯಕ್ತಿ, ಆರ್ಯಾಪು ಗ್ರಾಮದ ಕಲ್ಲರ್ಪೆ ನಿವಾಸಿ 22 ವರ್ಷದ ಗರ್ಭಿಣಿ ಮಹಿಳೆಗೆ ಸೋಂಕು ದೃಢಪಟ್ಟಿದೆ.