ಮಂಗಳೂರು: ನಗರದ ಅಡ್ಯಾರ್ ಕಟ್ಟೆಯ ಬಳಿಯ ನೇತ್ರಾವತಿ ಸರ್ವೀಸ್ ಸ್ಟೇಷನ್ನಲ್ಲಿ ಮೊಟ್ಟಮೊದಲ ಬಾರಿಗೆ ಸಿಎನ್ಜಿ (ಸಂಕುಚಿತ ನೈಸರ್ಗಿಕ ಅನಿಲ ವಿತರಣೆ) ಬಂಕ್ಗೆ ಚಾಲನೆ ನೀಡಲಾಗಿದೆ.
ಗೈಲ್ ಹಾಗೂ ಇಂಡಿಯನ್ ಆಯಿಲ್ ಸಂಸ್ಥೆಯ ಅಧಿಕಾರಿಗಳು ಕಾರಿಗೆ ಸಿಎನ್ಒ ತುಂಬಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಮೊದಲ ಗ್ರಾಹಕ ಶಂಕರ್ ಭಟ್ ಅವರ ಕಾರಿಗೆ ಸಿಎನ್ಜಿ ಹಾಕಲಾಯಿತು.
ಪ್ರಸ್ತುತ ಸಿಎನ್ಜಿ ದರ ಕೆಜಿಗೆ 55 ರೂ. ಇದೆ. ದ.ಕ.ಜಿಲ್ಲೆಯಲ್ಲಿ 80-100 ಸಿಎನ್ಜಿ ಬಂಕ್ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ನಗರದಲ್ಲಿ ಸುಮಾರು 10 ರಷ್ಟು ಸಿಎನ್ಜಿ ಬಂಕ್ ತೆರೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.