ETV Bharat / state

ಸಿಎಂರಿಂದ ಕಡಲ್ಕೊರೆತ ವೀಕ್ಷಣೆ: ಶೀಘ್ರದಲ್ಲೇ ಸೀ ವೇವ್ ಬ್ರೇಕರ್ ಅನುಷ್ಠಾನ ಭರವಸೆ - CM Basavaraj Bommai visits Dakshina Kannada district

ಸಿಎಂ ಬಸವರಾಜ ಬೊಮ್ಮಾಯಿ ಅವರು ಸುಳ್ಯದಲ್ಲಿ ಉಂಟಾದ ಭೂಕಂಪನ ಪ್ರದೇಶ ಮತ್ತು ಬಂಟ್ವಾಳದಲ್ಲಿ ಭೂ ಕುಸಿತವಾದ ಪ್ರದೇಶ ಮತ್ತು ಉಳ್ಳಾಲದ ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತವನ್ನು ವೀಕ್ಷಣೆ ಮಾಡಿದರು. ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

cm-basavaraj-bommai-visits-dk-district-to-see-the-rain-damage
ಸಿಎಂ ರಿಂದ ಕಡಲ್ಕೊರೆತ ವೀಕ್ಷಣೆ : ಶೀಘ್ರದಲ್ಲೇ ಸೀ ವೇವ್ ಬ್ರೇಕರ್ ಅನುಷ್ಠಾನ ಭರವಸೆ
author img

By

Published : Jul 12, 2022, 10:13 PM IST

ಮಂಗಳೂರು: ಮಳೆ ಹಾನಿ ವೀಕ್ಷಣೆಗೆ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರಿನ ಉಳ್ಳಾಲದ ಬಟ್ಟಪಾಡಿಯಲ್ಲಿ ಕಡಲ್ಕೊರೆತವನ್ನು ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ಕಡಲ್ಕೊರೆತದ ತೀವ್ರತೆಯನ್ನು ತಡೆಗಟ್ಟಲು ಸೀ ವೇವ್ ಬ್ರೇಕರ್ ಶೀಘ್ರದಲ್ಲೇ ಅಳವಡಿಸಲಾಗುವುದು. ತಜ್ಞರ ತಂಡವೊಂದು ಈ ತಂತ್ರಜ್ಞಾನ‌ ಮೂಲಕ ಕಡಲ್ಕೊರೆತ ತಡೆಯುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನು ಉಳ್ಳಾಲ ಭಾಗದಲ್ಲಿ ಅನುಷ್ಠಾನ ‌ಮಾಡಲು ಅವರಿಗೆ ಅನುಮತಿ ‌ನೀಡಿದ್ದೇನೆ. ಕಡಲಿನ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಗಳ ಸ್ಥಳಾಂತರ ಮಾಡಿ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಇದೇ ವೇಳೆ ಹೇಳಿದರು.

ಸುಳ್ಯದಲ್ಲಿ ಉಂಟಾದ ಭೂಕಂಪದಲ್ಲಿ ಹಾನಿಯಾದ ಪ್ರದೇಶ ಹಾಗೂ ಬಂಟ್ವಾಳದಲ್ಲಿ ಭೂ ಕುಸಿತದ ಪ್ರದೇಶಕ್ಕೂ ಭೇಟಿ ನೀಡಿ ಮಳೆ ಹಾನಿ ವೀಕ್ಷಣೆ ಮಾಡಿದರು. ಭೂಕಂಪ ತಡೆ ಕುರಿತು ಮೂರ್ನಾಲ್ಕು ಸಂಸ್ಥೆಗಳಿಗೆ ಮತ್ತು ಮೈಸೂರು, ಬೆಂಗಳೂರು ವಿವಿಯವರಿಗೆ ಅಧ್ಯಯನಕ್ಕೆ ತಿಳಿಸಿದ್ದು, ಇದರ ಬಗ್ಗೆ ಪೂರ್ಣ ಪ್ರಮಾಣದ ವರದಿ ಸಿಕ್ಕಿದ ಮೇಲೆ ಬೇಕಾದ ವ್ಯವಸ್ಥೆಗಳನ್ನು ಕೈಗೊಳ್ಳಲಾಗುವುದು. ಭೂಕಂಪ ತಡೆಗಟ್ಟುವ ಜೊತೆಗೆ ಈ ಬಗ್ಗೆ ಅಧ್ಯಯನ ಮಾಡಲು ಕೇಂದ್ರ ಸರ್ಕಾರ 40 ಕೋಟಿ ರೂ ಬಿಡುಗಡೆ ಮಾಡಿದೆ. ಇದನ್ನು ಅಧ್ಯಯನಕ್ಕೆ ಉಪಯೋಗಿಸಲಾಗುವುದು ಎಂದು ತಿಳಿಸಿದರು.

ಸಿಎಂ ರಿಂದ ಕಡಲ್ಕೊರೆತ ವೀಕ್ಷಣೆ : ಶೀಘ್ರದಲ್ಲೇ ಸೀ ವೇವ್ ಬ್ರೇಕರ್ ಅನುಷ್ಠಾನ ಭರವಸೆ

ಉಸ್ತುವಾರಿ ಸಚಿವ ಸುನಿಲ್ ಗೈರು: ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸದಲ್ಲಿ ಹಾಜರಿದ್ದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಮಂಗಳೂರಿನ ಕಡಲ್ಕೊರೆತ ವೀಕ್ಷಣೆ ವೇಳೆ ಗೈರಾಗಿದ್ದಾರೆ. ಸುಳ್ಯ , ಬಂಟ್ವಾಳದಲ್ಲಿ ಮುಖ್ಯಮಂತ್ರಿಗಳ ಜೊತೆಗಿದ್ದ ಸುನಿಲ್ ಕುಮಾರ್ ಕಡಲ್ಕೊರೆತ ವೀಕ್ಷಣೆ ವೇಳೆ ಗೈರಾಗಿದ್ದು ಕಂಡುಬಂತು. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್ ಅಶೋಕ್, ವಿಪಕ್ಷ ಉಪನಾಯಕ ಯು ಟಿ ಖಾದರ್, ಸಚಿವ ಅಂಗಾರ ಉಪಸ್ಥಿತರಿದ್ದರು.

ಓದಿ : ಬೈಕ್​ನಿಂದ ಬಿದ್ದು ಯುವಕನಿಗೆ ತೀವ್ರ ಗಾಯ: ತಮ್ಮ ವಾಹನದಲ್ಲೇ ಆಸ್ಪತ್ರೆಗೆ ರವಾನಿಸಿದ ಶಾಸಕ ಮುನವಳ್ಳಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.