ಮಂಗಳೂರು: ರಾಜ್ಯದಲ್ಲಿಯೇ ಪ್ರಥಮ ಚಾಕಲೇಟ್ ಥೀಮ್ ಪಾರ್ಕ್ ಪುತ್ತೂರು ತಾಲೂಕಿನ ಕಾವು ಎಂಬಲ್ಲಿ ನಿರ್ಮಾಣವಾಗಲಿದೆ.
ಕ್ಯಾಂಪ್ಕೊ ಚಾಕಲೇಟ್ ತಯಾರಿಕಾ ಕಾರ್ಖಾನೆಯ 12 ಎಕರೆ ವಿಶಾಲ ಪ್ರದೇಶದಲ್ಲಿ ಸುಮಾರು 3 ಎಕರೆ ಜಾಗದಲ್ಲಿ ಚಾಕಲೇಟ್ ಪಾರ್ಕ್ ತಲೆ ಎತ್ತಲಿದ್ದು, ಏಪ್ರಿಲ್ನಿಂದ ಕಾಮಗಾರಿ ಆರಂಭವಾಗಲಿದೆ.
ಮಕ್ಕಳನ್ನು ಆಕರ್ಷಿಸುವ ಸಲುವಾಗಿ ಪಾರ್ಕ್ನಲ್ಲಿ ಕೃತಕ ಜಲಪಾತ, ಆಟದ ಮೈದಾನ ಹಾಗೂ ರೆಸ್ಟೋರೆಂಟ್ ಇರಲಿದೆ. ಜೊತೆಗೆ ಚಾಕಲೇಟ್ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ಚಾಕಲೇಟ್ ಸವಿಯುತ್ತಲೇ ನೋಡುವ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಈ ಥೀಮ್ ಪಾರ್ಕ್ ಮೈಸೂರು-ಮಂಗಳೂರು ಹೆದ್ದಾರಿ ಸಮೀಪವೇ ಇರುವುದರಿಂದ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡಬಹುದಾಗಿದೆ.