ETV Bharat / state

ಬಾಲಕನ ಅಪಹರಣ ಪ್ರಕರಣ: ಪೊಲೀಸರನ್ನು ಅಭಿನಂದಿಸಿದ ಸಚಿವ ಪೂಜಾರಿ - Kota Srinivasa Poojary congratulates the police

ಎಂಟು ವರ್ಷದ ಬಾಲಕನ ಅಪಹರಣ ಪ್ರಕರಣವನ್ನು ಭೇದಿಸಿದ ಪೊಲೀಸರ ತಂಡವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿನಂದಿಸಿದರು. ಪೊಲೀಸ್ ಇಲಾಖೆಯ ಶ್ರಮದಿಂದ ಬಾಲಕ ಯಾವುದೇ ತೊಂದರೆ ಇಲ್ಲದೆ ಹೆತ್ತವರ ಮಡಿಲು ಸೇರಿದ್ದಾನೆ. ಪೊಲೀಸರ ತಂಡ ಬಾಲಕನನ್ನು ಸುರಕ್ಷಿತವಾಗಿ ತಂದಿರುವುದೇ ಒಂದು ಸಾಧನೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶ್ರೀನಿವಾಸ ಪೂಜಾರಿ
ಶ್ರೀನಿವಾಸ ಪೂಜಾರಿ
author img

By

Published : Dec 21, 2020, 5:33 PM IST

ಮಂಗಳೂರು: ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪ ಎಂಟು ವರ್ಷದ ಬಾಲಕನ ಅಪಹರಣ ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿದ ಪೊಲೀಸರ ತಂಡವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿನಂದಿಸಿದರು.

ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಯಲ್ಲಿ ಮಾತನಾಡಿದ ಅವರು, ಬಾಲಕನ ಅಪಹರಣದಿಂದ ಇಡೀ ಜಿಲ್ಲೆಯ ಜನತೆ ಆತಂಕಕ್ಕೊಳಗಾಗಿತ್ತು. ಆದರೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು ಕ್ಷಿಪ್ರ ಕಾರ್ಯಾಚರಣೆಗಾಗಿ ಪೊಲೀಸ್ ಅಧಿಕಾರಿಗಳ ಆರು ತಂಡ ರಚನೆ ಮಾಡಿ, ಅಪಹರಣಕಾರರನ್ನು ಕೋಲಾರದಲ್ಲಿ ಬಂಧಿಸಿ ಬಾಲಕನನ್ನು ಹೆತ್ತವರಿಗೆ ಒಪ್ಪಿಸಿದ್ದಾರೆ. ಈ ಮೂಲಕ ಇಡೀ ರಾಜ್ಯ ನಿಟ್ಟುಸಿರು ಬಿಡುವಂತಾಗಿದೆ ಎಂದು ಹೇಳಿದರು.

ಪೊಲೀಸರನ್ನು ಅಭಿನಂದಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಪೊಲೀಸ್ ಇಲಾಖೆಯ ಶ್ರಮದಿಂದ ಬಾಲಕನು ಯಾವುದೇ ತೊಂದರೆ ಇಲ್ಲದೆ ಹೆತ್ತವರ ಮಡಿಲು ಸೇರಿದ್ದಾನೆ. ಪೊಲೀಸರ ತಂಡ ಬಾಲಕನನ್ನು ಸುರಕ್ಷಿತವಾಗಿ ತಂದಿರುವುದೇ ಒಂದು ಸಾಧನೆ. ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದಾರೆ. ಆದ್ದರಿಂದ ಜಿಲ್ಲಾಡಳಿತದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇನ್ನು ಕರ್ತವ್ಯದಲ್ಲಿರುವ ಪೊಲೀಸರ ಮೇಲೆ ಹಲ್ಲೆ ನಡೆಯುಸುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.