ETV Bharat / state

ಮಳೆಗಾಲದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ವಿರಾಮ.. ಮನೆ ಮನೆಗಳಲ್ಲಿ ಚಿಕ್ಕಮೇಳ ಸೇವೆ ಪ್ರಾರಂಭ

author img

By

Published : Jul 12, 2023, 12:43 PM IST

ಚಿಕ್ಕ ಮೇಳದಲ್ಲಿ ಸಣ್ಣ ತಂಡ ಮಾಡಿಕೊಂಡು ಕಲಾವಿದರು ಮನೆ ಮನೆಗೆ ತೆರಳಿ 10 ರಿಂದ 15 ನಿಮಿಷಗಳ ಕಾಲ ಪ್ರಸಂಗಗಳ ಸಣ್ಣ ತುಣುಕೊಂದನ್ನು ಪ್ರದರ್ಶನ ಮಾಡಿ ಬರುತ್ತಾರೆ.

Chikka Mela Yakshagana in Coastal Karnataka
ಮನೆ ಮನೆಗಳಲ್ಲಿ ಚಿಕ್ಕಮೇಳ ಸೇವೆ ಪ್ರಾರಂಭ
ಮನೆ ಮನೆಗಳಲ್ಲಿ ಚಿಕ್ಕಮೇಳ ಸೇವೆ ಪ್ರಾರಂಭ

ಮಂಗಳೂರು: ಕರಾವಳಿಯ ಗಂಡು ಕಲೆ ಎಂದೇ ಪ್ರಸಿದ್ಧವಾದ ಯಕ್ಷಗಾನ ಎಂಟು ತಿಂಗಳು ಸಾರ್ವಜನಿಕವಾಗಿ ಪ್ರದರ್ಶನ ಕಂಡರೆ, ಮಳೆಗಾಲದಲ್ಲಿ ಯಕ್ಷಗಾನದ ಸಾರ್ವಜನಿಕ ಪ್ರದರ್ಶನ ನಡೆಯುವುದಿಲ್ಲ. ಈ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಚಿಕ್ಕ ಮೇಳ ಯಕ್ಷಗಾನದ ಪ್ರದರ್ಶನ ನಡೆಯುತ್ತದೆ.

ಕರಾವಳಿಯಲ್ಲಿ ಯಕ್ಷಗಾನ ಕಲೆಗೊಂದು ವಿಶೇಷ ಮಾನ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಕ್ಷಗಾನ ಪ್ರದರ್ಶನ ಸಾಮಾನ್ಯವಾಗಿ ಎಂಟು ತಿಂಗಳು ನಡೆಯುತ್ತಲೇ ಇರುತ್ತದೆ. ಸಾರ್ವಜನಿಕ ಪ್ರದರ್ಶನವಾಗಿರುವ ಯಕ್ಷಗಾನ ನೋಡಲು ಸಾವಿರಾರು ಮಂದಿ ಆಸಕ್ತಿಯಿಂದ ಭಾಗವಹಿಸುತ್ತಾರೆ. ಆದರೆ, ಈ ಯಕ್ಷಗಾನ ಪ್ರದರ್ಶನ ಸೇವೆಗೆ ಮಳೆಗಾಲದಲ್ಲಿ ವಿರಾಮವಿರುತ್ತದೆ.

ಮಳೆಗಾಲದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ವಿಶೇಷ ವ್ಯವಸ್ಥೆ.. ಮಳೆಗಾಲದ ಸಂದರ್ಭದಲ್ಲಿ ಯಕ್ಷಗಾನ ಪ್ರದರ್ಶನ ಕಷ್ಟವಿರುವುದರಿಂದ ಯಕ್ಷಗಾನ ಮೇಳಗಳು ಈ ಸಂದರ್ಭದಲ್ಲಿ ಪ್ರದರ್ಶನ ನಡೆಸುವುದಿಲ್ಲ. ಆದರೆ ಕೆಲ ಕಲಾವಿದರಿಗೆ ಜೀವನ ನಡೆಸಲು ಹಣ ಅನಿವಾರ್ಯ ಆಗಿರುವುದರಿಂದ ಈ ಅವಧಿಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕೆಲವು ಯಕ್ಷಗಾನ ಕಲಾವಿದರು ಒಟ್ಟಿಗೆ ಸೇರಿ ಮಳೆಗಾಲದ ಸಂದರ್ಭದಲ್ಲಿ ಚಿಕ್ಕ ಮೇಳವೆಂಬ ವಿಶೇಷ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ಚಿಕ್ಕಮೇಳದಲ್ಲಿ ಇಬ್ಬರು ವೇಷಧಾರಿ ಕಲಾವಿದರು, ಭಾಗವತರು ಸೇರಿದಂತೆ ನಾಲ್ಕೈದು ಮಂದಿ ಇರುತ್ತಾರೆ. ಇವರು ಮನೆ ಮನೆಗೆ ಬಂದು ಪುಟ್ಟ ಯಕ್ಷಗಾನ ಸೇವೆ ನೀಡುತ್ತಾರೆ.

ಹೀಗೆ ಮನೆ ಮನೆಗೆ ಬಂದು ಚಿಕ್ಕ ಮೇಳ ಯಕ್ಷಗಾನ ಮಾಡುವ ತಂಡ ಒಂದೆರಡು ದಿನ ಮುಂಚಿತವಾಗಿ ಆಯಾ ಊರಿಗೆ ಬಂದು ಮನೆಯವರಿಗೆ ಮಾಹಿತಿ ನೀಡುತ್ತಾರೆ. ಮನೆಗೆ ಯಕ್ಷಗಾನ ಪ್ರದರ್ಶನಕ್ಕೆ ಬರುವ ಸಂದರ್ಭದಲ್ಲಿ ಆಯಾ ಮನೆಯವರು ಒಂದು ಕಿಲೋ ಅಕ್ಕಿ, ಹೂ, ವೀಳ್ಯದೆಲೆ, ಅಡಿಕೆ ಜೊತೆಗೆ ದಕ್ಷಿಣೆಯನ್ನು ನೀಡಬೇಕಾಗುತ್ತದೆ. ಮನೆ ಮನೆಗೆ ಹೋಗಿ ಪ್ರದರ್ಶನ ನೀಡುವ ತಂಡ ಸಂಜೆ 7 ರಿಂದ ರಾತ್ರಿ 11 ಗಂಟೆಯ ಒಳಗೆ ಪ್ರದರ್ಶನ ನೀಡುತ್ತಾರೆ. ಸುಮಾರು 30 ರಿಂದ 35 ಮನೆಗಳಿಗೆ ತೆರಳಿ ಯಕ್ಷಗಾನ ಪ್ರದರ್ಶಿಸುತ್ತಾರೆ.

ಕಲಾವಿದರು ಚಿಕ್ಕಮೇಳದ ಮೂಲಕ ಮನೆಮನೆಗೆ ತೆರಳಿ ಗೆಜ್ಜೆಸೇವೆಯನ್ನು ಮಾಡಿ ಮಾನ್ಸೂನ್​ ಕಾಲದಲ್ಲಿ ಯಕ್ಷಗಾನವನ್ನು ಹಸಿರಾಗಿರಿಸುವುದರೊಂದಿಗೆ ತಮ್ಮ ಬದುಕಿನ ನಿರ್ವಹಣೆಯನ್ನು ಮಾಡುತ್ತಾರೆ‌. ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರ ಸಣ್ಣ ತಂಡವಿರುವ ಚಿಕ್ಕಮೇಳ ಮನೆಗಳ ನಡುಮನೆಯಲ್ಲೋ, ಚಾವಡಿಯಲ್ಲೋ ಯಕ್ಷಗಾನ ಸೇವೆ ಮಾಡುತ್ತದೆ. ತಂಡ ಪುರಾಣ ಪ್ರಸಂಗಗಳ ಒಂದೊಂದು ಸನ್ನಿವೇಶವನ್ನು ಪ್ರದರ್ಶಿಸುತ್ತದೆ.

ತಂಡದಲ್ಲಿ ಭಾಗವತರು, ಚಂಡೆ - ಮದ್ದಳೆ ವಾದಕರು, ಒಂದು ಜೋಡಿ ಸ್ತ್ರೀ - ಪುರುಷ ಪಾತ್ರಗಳು ಜೊತೆಗೆ ಪ್ರಚಾರಕರೊಬ್ಬರು ಇರುತ್ತಾರೆ. ಮನೆಯೊಂದರಲ್ಲಿ ಚಿಕ್ಕಮೇಳದ ತಂಡ 10 ರಿಂದ 15 ನಿಮಿಷಗಳ ಕಾಲ ಪ್ರದರ್ಶನ ನೀಡುತ್ತದೆ. ರಾತ್ರಿ ಹೊತ್ತು ಕಲಾವಿದರು ಊರಿನ ದೇವಸ್ಥಾನದಲ್ಲಿ ತಂಗುತ್ತಾರೆ.

ಮನೆಯ ಚಾವಡಿಯೇ ರಂಗಸ್ಥಳ: ಗಣಪತಿ ಸ್ವಸ್ತಿಕದ ಮುಂದೆ ಯಕ್ಷಗಾನ ಪ್ರದರ್ಶನ ನಡೆಯುತ್ತದೆ. ಇಲ್ಲಿ ಮನೆಯ ಚಾವಡಿ ಅಥವಾ ನಡುಮನೆಯೇ ರಂಗಸ್ಥಳ. ಮನೆಮಂದಿಯೇ ಪ್ರೇಕ್ಷಕರು. ತಮ್ಮಿಂದಲೂ ದೇವರಿಗೊಂದು ಬೆಳಕಿನ ಸೇವೆ ಸಮರ್ಪಣೆಯಾಯಿತೆಂದು ಧನ್ಯತೆ ಅನುಭವಿಸುವ ಮನೆಮಂದಿಯು ಕಲಾವಿದರು ಪ್ರದರ್ಶಿಸಿದ ಯಕ್ಷಗಾನವನ್ನು ವೀಕ್ಷಿಸುತ್ತಾರೆ. ಯಕ್ಷಗಾನ ಮುಗಿದ ಬಳಿಕ ಮನೆ ಯಜಮಾನ ನೀಡಿದ ವೀಳ್ಯ(ಕಾಣಿಕೆ)ವನ್ನು ಪಡೆಯುವ ಕಲಾವಿದರು ಮುಂದಿನ ಮನೆಯತ್ತ ಹೆಜ್ಜೆ ಹಾಕುತ್ತಾರೆ. ಒಟ್ಟಿನಲ್ಲಿ ಮಳೆಗಾಲದಲ್ಲಿ ಮನೆಮನೆಯಲ್ಲೂ ನಡೆಯುವ ಈ ಸಣ್ಣಮಟ್ಟಿನ ಯಕ್ಷಗಾನ ಸೇವೆ ಆರಾಧನೆ ಹಾಗೂ ಮನರಂಜನೆಯ ದೃಷ್ಟಿಯಿಂದ ಕರಾವಳಿಗರಿಗೆ ಶ್ರೇಷ್ಠವೆನಿಸಿದರೆ, ಕಲಾವಿದರಿಗೆ ಜೀವನ ನಿರ್ವಹಣೆಯ ಮಾರ್ಗವಾಗಿದೆ.

ಈ ಬಗ್ಗೆ ಮಾತನಾಡಿದ ಭಾಗವತ ಜಯಕರ್, ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಿಂದ ಮಳೆಗಾಲದಲ್ಲಿ ಮನೆ ಮನೆಗೆ ಹೋಗಿ ಯಕ್ಷಗಾನ ಸೇವೆ ನೀಡುತ್ತೇವೆ. ಮನೆ ಮನೆಯಲ್ಲಿ ಯಕ್ಷಗಾನ ಸೇವೆ ಮಾಡಿದರೆ ದುಷ್ಟ ಶಕ್ತಿಗಳು ತೊಲಗುತ್ತವೆ. ರೋಗ ರುಜಿನಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಮಳೆಗಾಲದಲ್ಲಿ ಸಾರ್ವಜನಿಕ ಯಕ್ಷಗಾನ ಪ್ರದರ್ಶನ ಇಲ್ಲದಿರುವುದರಿಂದ ಕಲಾವಿದರ ಜೀವನೋಪಾಯ ಚಿಕ್ಕಮೇಳದಿಂದ ನಡೆಯಬೇಕಿದೆ ಎ‌ನ್ನುತ್ತಾರೆ.

ಇದನ್ನೂ ಓದಿ: ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಸಾಂಪ್ರದಾಯಿಕ ತೆರೆ: ಗೆಜ್ಜೆ ಬಿಚ್ಚಲಿರುವ ಕಲಾವಿದರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.