ETV Bharat / state

ಕದ್ರಿ ಶ್ರೀ ಮಂಜುನಾಥ ಬ್ರಹ್ಮಕಲಶೋತ್ಸವ... ಉಚಿತ ಆಟೋ ಸೇವೆ - undefined

ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಪರಿವಾರ ದೇವರುಗಳಿಗೆ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ನಡೆಯುತ್ತಿದ್ದು, ದೇವರ ದರ್ಶನಕ್ಕೆ ಬರುತ್ತಿದ್ದ ಭಕ್ತರನ್ನು ಹತ್ತಿರದ ನಿಲ್ದಾಣಗಳಿಗೆ ಆಟೋ ಚಾಲಕರು ಉಚಿತವಾಗಿ ಕರೆದ್ಯೊಯ್ದರು.

ಮಂಗಳೂರಲ್ಲಿ ಉಚಿತ ಆಟೋ ಸಂಚಾರ ಸೇವೆ ನೀಡಿದ ಚಾಲಕರು
author img

By

Published : May 10, 2019, 4:31 AM IST

ಮಂಗಳೂರು: ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ದೇವಾಲಯಕ್ಕೆ ಬರುವ ಭಕ್ತರಿಗೆ ಉಚಿತ ಆಟೋ ಸಂಚಾರ ಸೇವೆ ಒದಗಿಸಲಾಗಿತ್ತು.

ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಪರಿವಾರ ದೇವರುಗಳಿಗೆ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ನಡೆಯುತ್ತಿದ್ದು, ದೇವರ ದರ್ಶನಕ್ಕೆ ಬರುತ್ತಿದ್ದ ಭಕ್ತರನ್ನು ಹತ್ತಿರದ ನಿಲ್ದಾಣಗಳಿಗೆ ಆಟೋ ಚಾಲಕರು ಉಚಿತವಾಗಿ ಕರೆದ್ಯೊಯ್ದರು.

ಮಂಗಳೂರಲ್ಲಿ ಉಚಿತ ಆಟೋ ಸಂಚಾರ ಸೇವೆ ನೀಡಿದ ಚಾಲಕರು

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಆಟೋ ಚಾಲಕರ ಮತ್ತು ಮಾಲೀಕರ ಸಂಘಟನೆಯ ಮಂಗಳೂರು ಘಟಕದ ವತಿಯಿಂದ ಈ ಸೇವೆಯನ್ನು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೂ ಕಲ್ಪಿಸಿದ್ದರು. ಆಟೋ ಚಾಲಕರ ಶುಲ್ಕರಹಿತ ಪ್ರಯಾಣಿಕ ಸೇವೆಯು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ನೂರಾರು ಆಟೋ ಚಾಲಕರು ಪಾಲ್ಗೊಂಡು ಭಕ್ತರನ್ನು ನಗರದ ಕೆಪಿಟಿ, ಬಂಟ್ಸ್ ವಸತಿ ನಿಲಯ, ಮಲ್ಲಿಕಟ್ಟೆ ಬಸ್ ನಿಲ್ದಾಣ ಸೇರಿದಂತೆ ಇತರ ಪ್ರದೇಶಗಳಿಗೆ ಕರೆದ್ಯೊಯ್ದರು.

ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕದ್ರಿ ಶ್ರೀ ಮಂಜುನಾಥ ದೇವರ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಈ ಸೇವೆ ಮಾಡುತ್ತಿದ್ದೇವೆ. ಇಂಧನ ವೆಚ್ಚವನ್ನು ಚಾಲಕರೇ ಭರಿಸಿದ್ದಾರೆ. ದಿನಕ್ಕೆ ಸಾವಿರಾರು ರೂಪಾಯಿ ನಷ್ಟವಾದರೂ ದೇವರ ಸೇವೆ ಮಾಡಿದ ಶ್ರೇಯಸ್ಸು ಚಾಲಕರಿಗೆ ಇದೆ ಎಂದು ವಿಶ್ವ ಹಿಂದೂ ಪರಿಷತ್​ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಜಗದೀಶ ಶೇಣವ ಹೇಳಿದರು.

Intro:ಮಂಗಳೂರು: ಆಟೋಚಾಲಕರು ಅತೀಹೆಚ್ಚು ಬಾಡಿಗೆ ಕಸಿದುಕೊಳ್ಳುತ್ತಾರೆ. ಎಲ್ಲೆಲ್ಲೋ‌ ಅಲೆದಾಡಿಸಿ ಲೆಕ್ಕಕ್ಕಿಂತ ಅಧಿಕ ಬಾಡಿಗೆ ಪಡೆಯುತ್ತಾರೆ ಎಂಬ ಆರೋಪವಿದೆ. ಆದರೆ ಇಲ್ಲೊಂದು ಕಡೆ ಇಂದು ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಉಚಿತವಾಗಿ ಸಂಚಾರದ ವ್ಯವಸ್ಥೆ ಮಾಡುವ ಮೂಲಕ ಆಟೋ ರಿಕ್ಷಾ ಚಾಲಕರು ಜನರ ಶ್ಲಾಘನೆಗೆ ಪಾತ್ರರಾದರು.

ಮಂಗಳೂರಿನ ಪ್ರಸಿದ್ಧ ಕ್ಷೇತ್ರ ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವದ ಅಂಗವಾಗಿ ದೇವಾಲಯಕ್ಕೆ ಹತ್ತಿರದ ಬಸ್ ಸ್ಟ್ಯಾಂಡ್ ಗಳಿಂದ ಬರುವ ಹಾಗೂ ದೇವಾಲಯದಿಂದ ಹೋಗುವ ಭಕ್ತಾದಿಗಳಿಗೆ ನೆರವಾಗಲು ಆಟೋರಿಕ್ಷಾ ಚಾಲಕರು ಇಂದು ಉಚಿತ ಸಂಚಾರದ ವ್ಯವಸ್ಥೆ ಯನ್ನು ಕಲ್ಪಿಸುವ ಮೂಲಕ ದೇವರ ಸೇವೆಯನ್ನು ಭಕ್ತಾದಿಗಳಿಗೆ ನೆರವಾಗುವ ಮೂಲಕ ಮಾಡಿದರು.

ವಿಶ್ವಹಿಂದೂ ಪರಿಷತ್ ಬಜರಂಗದಳ ಆಟೊ ಚಾಲಕರ ಮಾಲಕರ ಮಂಗಳೂರು ಘಟಕದ ವತಿಯಿಂದ ನಡೆಯುವ ಈ ಉಚಿತ ಆಟೋ ಸಂಚಾರ ವ್ಯವಸ್ಥೆಯನ್ನು ಸುಮಾರು ನೂರರಷ್ಟು ಆಟೋಚಾಲಕರು ಮಾಡುತ್ತಿದ್ದಾರೆ. ನಗರದ ಕೆಪಿಟಿ, ಬಂಟ್ಸ್ ಹಾಸ್ಟೆಲ್, ಮಲ್ಲಿಕಟ್ಟೆ ಬಸ್ ನಿಲ್ದಾಣಗಳಿಂದ ಭಕ್ತಾದಿಗಳಿಗೆ ದೇವಸ್ಥಾನಕ್ಕೆ ಬರುವ ಹಾಗೂ ಮರಳಿ ಬಸ್ ನಿಲ್ದಾಣಕ್ಕೆ ಹೋಗುವ ಉಚಿತ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಶ್ರೀಕ್ಷೇತ್ರ ಕದ್ರಿ ದೇವಾಲಯದ ಪಕ್ಕದವರೆಗೆ ಬಸ್ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ಬ್ರಹ್ಮಕಲಶೋತ್ಸವಕ್ಕೆ ಬರುವ ಭಕ್ತಾದಿಗಳಿಗಾಗಿ ಆಟೋರಿಕ್ಷಾದ ವ್ಯವಸ್ಥೆ ಮಾಡಲಾಗಿದೆ.

Body:ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ದ.ಕ.ಜಿಲ್ಲಾಧ್ಯಕ್ಷ ಜಗದೀಶ‌ ಶೇಣವ ಮಾತನಾಡಿ, ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕದ್ರಿ ಶ್ರೀ ಮಂಜುನಾಥ ದೇವರ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಈ ಉಚಿತ ರಿಕ್ಷಾ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ. ಇಂದಿನ ಪೆಟ್ರೋಲ್ ಖರ್ಚನ್ನು ರಿಕ್ಷಾಚಾಲಕರೇ ಭರಿಸಿಕೊಂಡು ಈ ಸೇವೆಯನ್ನು ಮಾಡುತ್ತಿದ್ದಾರೆ. ಒಬ್ಬ ಆಟೊಚಾಲಕನಿಗೆ ಇಂದು ಒಂದು ಸಾವಿರ ರೂ. ನಷ್ಟವಾಗುತ್ತದೆ. ಆದರೆ ದೇವರ ಸೇವಾ ರೂಪದಲ್ಲಿ ಈ ಸೇವೆಯನ್ನು ಮಾಡುತ್ತಿದರೆ ಎಂದು ಹೇಳಿದರು.

Reporter_Vishwanath Panjimogaru

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.