ETV Bharat / state

ತಾಯಿಯಿಲ್ಲದ ಕಂದಮ್ಮಗಳ ಕ್ಷೇಮಕ್ಕೆ ಆಸರೆಯಾದ ಬಿಜೆಪಿ: ಕಟೀಲ್​ರಿಂದ ಕ್ಷೇಮನಿಧಿ ಹಸ್ತಾಂತರ - ತಾಯಿಯಿಲ್ಲದ ಮಕ್ಕಳಿಗೆ ಕ್ಷೇಮನಿಧಿ ನೆರವು

ತಾಯಿಯನ್ನು ಕಳೆದುಕೊಂಡಿದ್ದ ಪುಟ್ಟ ವಯಸ್ಸಿನ ಎರಡು ಹೆಣ್ಣುಮಕ್ಕಳ ಬದುಕಿಗೆ ಬಂಟ್ವಾಳ ಬಿಜೆಪಿ ಆರಂಭಿಸಿದ್ದ ಕ್ಷೇಮನಿಧಿ ಆಸರೆಯಾಗಿದೆ. ತಲಾ 25 ಸಾವಿರ ರೂಪಾಯಿಯ ಬಾಂಡ್ ಅನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಕ್ಕಳ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಈ ಬಾಂಡ್​ನಿಂದ ಮಕ್ಕಳಿಗೆ 16 ವರ್ಷವಾದಾಗ ತಲಾ 1 ಲಕ್ಷ ರೂ ದೊರೆಯಲಿದೆ.

nalin
nalin
author img

By

Published : Jun 13, 2021, 9:23 PM IST

ಬಂಟ್ವಾಳ: ಬಿಜೆಪಿ ಆರಂಭಿಸಿದ ಕ್ಷೇಮನಿಧಿ, ತಾಯಿಯನ್ನು ಕಳೆದುಕೊಂಡ ಇಬ್ಬರು ಬಡ ಹೆಣ್ಣುಮಕ್ಕಳಿಗೆ ಆಸರೆಯಾಗಿದ್ದು, ಸ್ವತಃ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬಾಂಡ್ ಅನ್ನು ಹಸ್ತಾಂತರಿಸಿದ್ದಾರೆ. ಇತ್ತೀಚೆಗಷ್ಟೇ ತಾಯಿಯನ್ನು ಕಳೆದುಕೊಂಡಿದ್ದ ಪುಟ್ಟ ವಯಸ್ಸಿನ ಎರಡು ಹೆಣ್ಣುಮಕ್ಕಳ ಬದುಕಿಗೆ ಬಂಟ್ವಾಳ ಬಿಜೆಪಿ ಆರಂಭಿಸಿದ್ದ ಕ್ಷೇಮನಿಧಿ ಆಸರೆಯಾಗಿದೆ.

ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ನಡುಲಚ್ಚಿಲ್ ನಲ್ಲಿ ವಾಸವಿರುವ ರೇವತಿ ಎಂಬವರ ತಂಗಿ ಇತ್ತೀಚೆಗಷ್ಟೇ ನಿಧನಹೊಂದಿದ್ದು, ಅವರ ಇಬ್ಬರು ಪುಟ್ಟ ಮಕ್ಕಳಾದ ಅಂಕಿತಾ (2) ಮತ್ತು ಪೂರ್ವಿಕಾ (3 ತಿಂಗಳು) ರನ್ನು ಸಾಕುತ್ತಿದ್ದಾರೆ.

ರೇವತಿ ಅವರ ಪತಿ ಕೃಷ್ಣಪ್ಪ ದೈವನರ್ತಕರಾಗಿದ್ದರೆ, ಪುಟ್ಟ ಮಕ್ಕಳ ತಂದೆ ಸೇಸಪ್ಪ ಅವರೂ ಕೂಲಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಡುಬಡವರಾಗಿದ್ದಾರೆ. ರೇವತಿಗೆ ಮೂವರು ಮಕ್ಕಳಿದ್ದು, ಇವರ ಜೊತೆಗೆ ತಂಗಿಯ ಇಬ್ಬರು ಮಕ್ಕಳನ್ನು ಸಾಕುತ್ತಿರುವ ಕಾರಣ ಬಂಟ್ವಾಳ ಬಿಜೆಪಿ ಇತ್ತೀಚೆಗಷ್ಟೇ ಆರಂಭಿಸಿದ್ದ ಕ್ಷೇಮನಿಧಿ ಪುಟ್ಟ ಮಕ್ಕಳಿಗೆ ನೆರವಾಗಿದೆ.

ತಲಾ 25 ಸಾವಿರ ರೂಪಾಯಿಯ ಬಾಂಡ್ ಅನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಶಾಸಕ ರಾಜೇಶ್ ನಾಯ್ಕ್ ಜೊತೆ ಇವರ ಮನೆಗೇ ತೆರಳಿ ವಿತರಿಸಿದರು. ಈ ಬಾಂಡ್​ನಿಂದ ಮಕ್ಕಳಿಗೆ 16 ವರ್ಷವಾದಾಗ ತಲಾ 1 ಲಕ್ಷ ರೂ. ದೊರಕುತ್ತದೆ. ಜೊತೆಗೆ ಶಾಸಕ ರಾಜೇಶ್ ನಾಯ್ಕ್ ಅವರು ಪ್ರತಿ ತಿಂಗಳು ಬಿಜೆಪಿ ಮೂಲಕ ಇಬ್ಬರಿಗೂ ತಲಾ 2 ಸಾವಿರ ರೂ. ಸಹಾಯಧನ ನೀಡುವುದಾಗಿ ಘೋಷಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.