ಬೆಳ್ತಂಗಡಿ: ದ್ವಿಚಕ್ರ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾಯನಕೆರೆಯ ಮುಖ್ಯರಸ್ತೆಯಲ್ಲಿರುವ ಅರಫಾ ಮಾರ್ಬಲ್ಸ್ ಬಳಿ ಸಂಭವಿಸಿದೆ.
ಲಿಂಗಪ್ಪ ಮೂಲ್ಯ (62) ಮೃತ ಬೈಕ್ ಸವಾರ ಎಂದು ತಿಳಿದು ಬಂದಿದೆ. ಮೃತ ವ್ಯಕ್ತಿ ಇಲ್ಲಿನ ಪಾಂಡೇಶ್ವರ ನಿವಾಸಿಯಾಗಿದ್ದು ಸ್ಥಳೀಯ ಎಟಿಎಂವೊಂದರಲ್ಲಿ ಕಾವಲುಗಾರನಾಗಿ ಕೆಸಲ ಮಾಡುತ್ತಿದ್ದರು.
![Bike rider dies in Belthangadi](https://etvbharatimages.akamaized.net/etvbharat/prod-images/kn-mng-belthangady-01-accident-photo-kac10018_02052020162952_0205f_1588417192_175.jpg)
ಲಿಂಗಪ್ಪ ತಮ್ಮ ಬೈಕ್ನಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಲಿಂಗಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗುತ್ತದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.