ಬಂಟ್ವಾಳ(ದ.ಕ) : ಕಾಂಕ್ರೀಟ್ ರಸ್ತೆ ಕಾಮಗಾರಿಯ ಹಿನ್ನೆಲೆ ಸುಮಾರು 22 ದಿನಗಳ ಸಂಚಾರ ನಿಷೇಧದ ಅವಧಿಯಲ್ಲಿ ಬಂಟ್ವಾಳದ ಬಿಸಿ ರೋಡ್ನಿಂದ ಜಕ್ರಿಬೆಟ್ಟುವರೆಗಿನ ರಸ್ತೆಯ ಒಂದು ಪಾರ್ಶ್ವದ ಕೆಲಸವನ್ನು ಮುಗಿಸಲಾಗಿದ್ದು, ನಾಳೆಯಿಂದ ಸಂಚಾರಕ್ಕೆ ಮುಕ್ತವಾಗಲಿದೆ.
ಚುತುಷ್ಪಥ ಹೆದ್ದಾರಿಯ ಒಂದು ಬದಿಯ 7 ಮೀ. ಕಾಂಕ್ರೀಟ್ ಕಾಮಗಾರಿ ಬಹುತೇಕ ಭಾಗಗಳಲ್ಲಿ ಪೂರ್ಣಗೊಂಡಿದೆ. ಕಳೆದ 20 ದಿನಗಳ ಸಂಚಾರ ನಿಷೇಧದ ಸಮಯದಲ್ಲಿ ಕೆಎಸ್ಆರ್ಟಿಸಿ ಬಸ್ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಉಳಿದಂತೆ ಮಂಗಳೂರು-ಗುರುವಾಯನಕೆರೆ ಮಧ್ಯೆ ಸಂಚರಿಸುವ ಘನ ವಾಹನಗಳಿಗೆ ಬಿಸಿರೋಡ್-ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯ ಮೂಲಕ ಸಂಚರಿಸಲು ಸೂಚಿಸಲಾಗಿತ್ತು. ಹೆದ್ದಾರಿಯ ಒಂದು ಬದಿಗೆ ಕಾಂಕ್ರೀಟ್ ಕಾಮಗಾರಿ ನಡೆದಿದ್ದು, ವಾಹನಗಳು ವೇಗವಾಗಿ ಸಾಗುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಿರುವುದು ಅಗತ್ಯವಾಗಿದೆ.
ಈ ಹಿಂದೆ ಹೆದ್ದಾರಿಯ ಒಂದು ಬದಿಯ ಕಾಂಕ್ರೀಟ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ, ಕ್ಯೂರಿಂಗ್ ಹಿನ್ನೆಲೆ ಸಂಚಾರ ನಿಷೇಧಕ್ಕೆ ಆದೇಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮನವಿ ನೀಡಿದ ಕಾರಣ, ಜೂನ್ 26ರಿಂದ ಜುಲೈ18ರವರೆಗೆ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶ ನೀಡಿದ್ದರು.