ETV Bharat / state

ಬಂಟ್ವಾಳ: ಅಕ್ರಮ ಮರಳು ಅಡ್ಡೆ ಮೇಲೆ ದಾಳಿ, 50 ಲೋಡ್ ಮರಳು ವಶ - Illegal sand business in bantwala

ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಟದ ಕುರಿತು ವ್ಯಾಪಕ ದೂರುಗಳು ಬಂದ ಹಿನ್ನೆಲೆ, ತಾಲೂಕಿನಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಮರಳು ಅಡ್ಡೆ ಮೇಲೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ತಂಡ ದಾಳಿ ಮಾಡಿದ್ದು, ಸುಮಾರು 50 ಲೋಡ್ ಮರಳನ್ನು ಜಪ್ತಿ ಮಾಡಲಾಗಿದೆ.

Attack on illegal sand business
Attack on illegal sand business
author img

By

Published : Jul 11, 2020, 10:37 PM IST

ಬಂಟ್ವಾಳ: ತಾಲೂಕಿನಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಮರಳು ಅಡ್ಡೆ ಮೇಲೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ತಂಡ ದಾಳಿ ಮಾಡಿದ್ದು, ಸುಮಾರು 50 ಲೋಡ್ ಮರಳನ್ನು ಜಪ್ತಿ ಮಾಡಲಾಗಿದೆ.

ಕೊಳ್ನಾಡು ಗ್ರಾಮದ ಬೊಳ್ಪಾದೆ ಎಂಬಲ್ಲಿ ಖಾಸಗಿ ಹಾಗೂ ಸರ್ಕಾರಿ ಜಾಗದಲ್ಲಿ 50 ಲೋಡ್ ಮರಳನ್ನು ಶೇಖರಣೆ ಮಾಡಲಾಗಿದ್ದು, ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್. ಆರ್ ನೇತೃತ್ವದಲ್ಲಿ ಗಣಿ ಇಲಾಖೆಯ ನಿರ್ದೇಶಕಿ ಸುಷ್ಮಾರವರು ದಾಳಿ ನಡೆಸಿ ಮರಳನ್ನು ಜಪ್ತಿ ಮಾಡಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ವಿಟ್ಲ ಹೋಬಳಿ ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ, ಗ್ರಾಮ ಲೆಕ್ಕಾಧಿಕಾರಿ ಅನಿಲ್ ಕುಮಾರ್, ಸಿಬ್ಬಂದಿ ಮಹಾಬಲ ಕೊಳ್ನಾಡು ಮತ್ತಿತರರು ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.