ETV Bharat / state

ಬಂಟ್ವಾಳ: 10 ರೂ. ರಿಚಾರ್ಜ್ ಮಾಡಲು ಹೇಳಿ 1.65 ಲಕ್ಷ ಎಗರಿಸಿದ ಅಪರಿಚಿತ ವ್ಯಕ್ತಿ

ವೈದ್ಯ ಡಾ. ಅಶ್ವಿನ್ ಬಾಳಿಗಾ ಅವರ ನಂಬರ್​​ ಅಪ್ಡೇಟ್​ ಮಾಡಲು 10 ರೂಪಾಯಿ ರಿಚಾರ್ಜ್​ ಮಾಡುವಂತೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಹೇಳಿದ್ದಾನೆ. ರಿಚಾರ್ಜ್​ ಮಾಡಿದ ಬಳಿಕ ಅವರ ಖಾತೆಯಿಂದ 1.65 ಲಕ್ಷ ರೂ. ಹಣ ಆ ವ್ಯಕ್ತಿಯ ಖಾತೆಗೆ ಹೋಗಿದೆ.

Bantwal
ಬಂಟ್ವಾಳ
author img

By

Published : May 3, 2022, 4:59 PM IST

ಬಂಟ್ವಾಳ(ದಕ್ಷಿಣ ಕನ್ನಡ): ನಿಮ್ಮ ನಂಬರ್ ಅಪ್ಡೇಟ್ ಮಾಡುತ್ತೇನೆ ಎಂದು ಹೇಳಿ ಅಪರಿಚಿತ ವ್ಯಕ್ತಿಯೊಬ್ಬ ವೈದ್ಯ ಡಾ. ಅಶ್ವಿನ್ ಬಾಳಿಗಾ ಅವರಿಗೆ ಕರೆ ಮಾಡಿದ್ದಾನೆ. 10 ರೂ. ರಿಚಾರ್ಜ್ ಮಾಡಲು ತಿಳಿಸಿ 1.65 ಲಕ್ಷ ರೂ. ಹಣವನ್ನು ಅಪರಿಚಿತ ವ್ಯಕ್ತಿ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಈ ಸಂಬಂಧ ಮಂಗಳವಾರ ಪ್ರಕರಣ ದಾಖಲಾಗಿದೆ.

ಬಿ.ಸಿ.ರೋಡ್​ನ ವೈದ್ಯ ಡಾ. ಅಶ್ವಿನ್ ಬಾಳಿಗಾ ಅವರ ಮೊಬೈಲ್​ಗೆ ಏ. 29ರಂದು ಸಂಜೆ 5.30ಕ್ಕೆ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾನೆ. ಜಿಯೋ ನಂಬರ್​ ಅಪ್ಡೇಟ್ ಮಾಡುವುದಾಗಿ ತಿಳಿಸಿ, ಗೂಗಲ್ ಪ್ಲೇ ಸ್ಟೋರ್​​ನಿಂದ ಕ್ವಿಕ್ ಈಸಿ ಆ್ಯಪ್​​ನ್ನು ಡೌನ್ಲೋಡ್ ಮಾಡಿಸಿದ್ದಾನೆ. ನಂತರ ವೈದ್ಯರ ಮೊಬೈಲ್​ನಲ್ಲಿ ಮೈ ಜಿಯೋ ಆ್ಯಪ್​​ನಲ್ಲಿ 10 ರೂಪಾಯಿ ರಿಚಾರ್ಜ್ ಮಾಡಲು ತಿಳಿಸಿದ್ದಾನೆ. ಅದರಂತೆ ಅವರು ತಮ್ಮ ಎಸ್​ಬಿಐ ಬ್ಯಾಂಕ್​ನ ಡೆಬಿಟ್ ಕಾರ್ಡ್ ವಿವರಗಳನು ಹಾಕಿ 10 ರೂ. ರಿಚಾರ್ಜ್ ಮಾಡಿದ್ದಾರೆ. ಕೂಡಲೇ ಅವರ ಖಾತೆಯಿಂದ 10,000ದಂತೆ 3 ಬಾರಿ ಮತ್ತು ರೂ. 45,000ದಂತೆ 3 ಬಾರಿ ಹಣ ವರ್ಗಾವಣೆಯಾಗಿದೆ. ಒಟ್ಟು 1.65 ಲಕ್ಷ ರೂ. ಹಣ ಅಪರಿಚಿತನ ಖಾತೆಗೆ ಹೋಗಿದೆ. ಈ ಸಂಬಂಧ ಡಾ. ಅಶ್ವಿನ್ ಬಾಳಿಗಾ ಅವರು ದೂರು ನೀಡಿದ್ದಾರೆ.

ಇದನ್ನೂ ಓದಿ: ಮೊಬೈಲ್​ನಲ್ಲಿ ಆಟವಾಡುತ್ತಿದ್ದಾಗ ಬ್ಯಾಟರಿ ಸ್ಫೋಟ: ಬಾಲಕನ ಎರಡು ಕೈ ಬೆರಳು ತುಂಡು!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.