ಮಂಗಳೂರು : ಕಚೇರಿಯ ಮಹಿಳಾ ಸಿಬ್ಬಂದಿಗಳೊಂದಿಗೆ ಚೆಲ್ಲಾಟವಾಡಿ ಬಂಧನವಾಗಿರುವ ವೈದ್ಯಾಧಿಕಾರಿಗೆ ಜಾಮೀನು ಮಂಜೂರಾಗಿದೆ.
ಕುಷ್ಠರೋಗದ ನಿವಾರಣಾಧಿಕಾರಿ, ಆಯುಷ್ಮಾನ್ ವಿಭಾಗದ ನೋಡಲ್ ಆಫೀಸರ್ ಆಗಿದ್ದ ಡಾ.ರತ್ನಾಕರ್ ಅವರು ಕಚೇರಿಯ ಮಹಿಳಾ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಚೆಲ್ಲಾಟವಾಡಿರುವ ಫೋಟೋ ಮತ್ತು ವಿಡಿಯೋ ವೈರಲ್ ಆದ ಬಳಿಕ ದೂರಿನ ಆಧಾರದಲ್ಲಿ ಅವರನ್ನು ಬಂಧಿಸಲಾಗಿತ್ತು.
ಹೆಚ್ಚಿನ ಓದಿಗೆ: ಮಹಿಳಾ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ ಪ್ರಕರಣ : ಕುಷ್ಠರೋಗ ನಿವಾರಣಾಧಿಕಾರಿ ಅಮಾನತು
ಡಾ. ರತ್ನಾಕರ್ ಅವರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತನೆ ಮಾಡಿರುವ ಬಗ್ಗೆ ಮೇಲಾಧಿಕಾರಿಗಳಿಗೆ ಈ ಮೊದಲೇ ಮಾಹಿತಿ ಇದ್ದುದ್ದರಿಂದ ಇಲಾಖಾ ಆಂತರಿಕ ಸಮಿತಿ ತನಿಖೆ ನಡೆಸಿ ಅವರನ್ನು ಅಮಾನತು ಮಾಡಿತ್ತು. ಪ್ರಕರಣದ ಫೋಟೋ ಬೆಳಕಿಗೆ ಬಂದ ಬಳಿಕ ದೂರನ್ನು ಸ್ವೀಕರಿಸಿದ ಪೊಲೀಸರು ಬಂಧಿಸಿದ್ದರು.
ಬಂಧನದಲ್ಲಿರುವ ಡಾ ರತ್ನಾಕರ್ ಅವರಿಗೆ ಜಾಮೀನು ಮಂಜೂರು ಮಾಡುವಂತೆ ಅವರ ಪರ ವಕೀಲರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಮೂರನೇ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.