ಬಂಟ್ವಾಳ: ಬುಧವಾರ ರಾತ್ರಿ ಫರಂಗಿಪೇಟೆಯ ತೃಷಾ ಸ್ಟುಡಿಯೋ ಮಾಲೀಕ ದಿನೇಶ್ ಕೊಟ್ಟಿಂಜ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಮ್ಮೆಮ್ಮಾರು ನಿವಾಸಿ ಮಹಮ್ಮದ್ ಅರ್ಷದ್(19), ಅಬ್ದುಲ್ ರೆಹಮಾನ್(22) ಹಾಗೂ ಮಹಮ್ಮದ್ ಸೈಪುದ್ದೀನ್(22) ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಸವಾದ್ ಬಂಧನಕ್ಕಾಗಿ ಬಲೆ ಬೀಸಲಾಗಿದೆ.
ಬುಧವಾರ ರಾತ್ರಿ 7.15ಕ್ಕೆ ಪುದು ಗ್ರಾಮದ ದಿನೇಶ್ ಅವರ ಫೋಟೋ ಸ್ಟುಡಿಯೋಗೆ 4 ಜನ ಯುವಕರು ಫೋಟೋ ತೆಗೆಸಿಕೊಳ್ಳಲು ಬಂದು ಕತ್ತಿಯಿಂದ ತಲೆ, ಬಲಗೈ ಹಾಗೂ ಎಡ ಕಿಬ್ಬೊಟ್ಟೆಗೆ ಹಲ್ಲೆ ನಡೆಸಿದ್ದರು. ಈಗ ಮೂವರು ಆರೋಪಿಗಳನ್ನು 12 ತಾಸಿನೊಳಗೆ ಬಂಟ್ವಾಳ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.