ಮಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಿಖರ ಫಲಿತಾಂಶ ನೀಡುವ ಜ್ಯೋತಿಷಿಗಳಿಗೆ ವಿಚಾರವಾದಿ ನರೇಂದ್ರ ನಾಯಕ್ ಕೆಲವೊಂದು ಪ್ರಶ್ನೆಗಳನ್ನು ಹಾಕಿದ್ದರು. ಅವರ ಸವಾಲಿಗೆ ಈ ಬಾರಿಯೂ ಜ್ಯೋತಿಷಿಗಳು ಉತ್ತರ ನೀಡುವಲ್ಲಿ ವಿಫಲರಾಗಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ 20 ಪ್ರಶ್ನೆಗಳನ್ನು ಅಖಿಲ ಭಾರತ ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಕೇಳಿದ್ದರು. ಪ್ರಶ್ನೆಗಳಿಗೆ ನಿಖರ ಉತ್ತರ ನೀಡಿದರೆ ಜ್ಯೋತಿಷಿಗಳಿಗೆ 10 ಲಕ್ಷ ಬಹುಮಾನ ನೀಡುವ ಘೋಷಣೆ ಮಾಡಿದ್ದರು. ಮೇ 22ರೊಳಗೆ 59 ಮಂದಿ ಜ್ಯೋತಿಷಿಗಳು ಉತ್ತರ ಬರೆದು ಕಳುಹಿಸಿದ್ದರು. ಆದರೆ ಯಾವ ಜ್ಯೋತಿಷಿಗಳು ಕೂಡ ಸವಾಲಿಗೆ ಉತ್ತರ ನೀಡುವಲ್ಲಿ ವಿಫಲರಾಗಿದ್ದಾರೆ.
ಮೌಢ್ಯದ ವಿರುದ್ಧ ಹೋರಾಟ ಮಾಡುತ್ತಿರುವ ನರೇಂದ್ರ ನಾಯಕ್ ಜ್ಯೋತಿಷ್ಯ ಎಂಬುದನ್ನು ಸುಳ್ಳು ಎಂದು ಮನವರಿಕೆ ಮಾಡಲು ಜ್ಯೋತಿಷಿಗಳಿಗೆ ಈ ಸವಾಲನ್ನು ಹಾಕಿದ್ದರಂತೆ.