ಸುಬ್ರಹ್ಮಣ್ಯ(ದಕ್ಷಿಣ ಕನ್ನಡ) : ಇಡಿ ತನಿಖೆಗೆ ರಾಹುಲ್ ಗಾಂಧಿಯನ್ನು, ಸೋನಿಯಾ ಗಾಂಧಿಯನ್ನು ಕರೆಸಬಾರದು ಎಂಬುದು ಮೂರ್ಖತನದ ಪರಮಾವಧಿ. ದೇಶದಲ್ಲಿ ರಾಹುಲ್, ಸೋನಿಯಾ, ಡಿಕೆಶಿಗೆ ಒಂದು ಕಾನೂನು, ಸಾಮಾನ್ಯ ಜನಕ್ಕೆ ಇನ್ನೊಂದು ಕಾನೂನು ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರದಲ್ಲಿ ಕುಕ್ಕೆ ಸುಬ್ರಮಣ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಸಚಿವರು ಇಲ್ಲಿನ ಪೊಲೀಸ್ ಠಾಣೆಯ ಸ್ಥಿತಿ ಕಂಡು ಅಸಮಾಧಾನಗೊಂಡರು. 2017ರಲ್ಲೇ ಕುಕ್ಕೆ ಸುಬ್ರಮಣ್ಯದಲ್ಲಿ ಹೊಸ ಠಾಣೆ ಕಟ್ಟಡ ನಿರ್ಮಾಣಕ್ಕೆ 1.23 ಕೋಟಿ ಮೀಸಲಿಡಲಾಗಿದೆ. ಟೆಂಡರ್ ಆದರೂ ಹಣ ಸಾಕಾಗಲ್ಲ ಅಂತಾ ಕಟ್ಟಡ ಕಾಮಗಾರಿ ವಿಳಂಬ ಮಾಡಲಾಗುತ್ತಿದೆ. ಈ ಬಗ್ಗೆ ಇಂಜಿನಿಯರ್ಗೆ ಕರೆ ಮಾಡಿ ಸಚಿವರು ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಆರಂಭಿಸಲು ಸೂಚನೆ ನೀಡಿದರು.
2019ರಲ್ಲಿ ಬಿಜೆಪಿ-ಶಿವಸೇನೆ ಸೇರಿ ಚುನಾವಣೆಗೆ ಹೋಗಲಾಗಿತ್ತು. ಆದರೆ, ಉದ್ದವ್ ಠಾಕ್ರೆ ಉದ್ದಟತನದಿಂದ ಅಲ್ಲಿ ಸಮ್ಮಿಶ್ರ ಸರ್ಕಾರ ಬಂತು. ಅದು ಅಲ್ಪಾಯುಷಿ ಮಗು ಅಂತE ಗೊತ್ತಿತ್ತು, ಈಗ ಹಾಗೇನೇ ಆಗಿದೆ ಎಂದು ಸಚಿವರು ಹೇಳಿದರು.
ಸಚಿವ ಉಮೇಶ್ ಕತ್ತಿ ಪ್ರತ್ಯೇಕ ರಾಜ್ಯದ ಹೇಳಿಕೆ ವಿಚಾರದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉಮೇಶ್ ಕತ್ತಿಯವರ ಇಂತಹ ಹೇಳಿಕೆ ತಪ್ಪು. ಈಗಾಗಲೇ ಉತ್ತರ ಕರ್ನಾಟಕಕ್ಕೆ ಯಡಿಯೂರಪ್ಪ, ಬೊಮ್ಮಾಯಿ ಅವಧಿಯಲ್ಲಿ ಸಾಕಷ್ಟು ಅನುದಾನ ಪಡೆದಿದ್ದಾರೆ. ಎಲ್ಲರೂ ಆಶ್ವರ್ಯ ಪಡುವಷ್ಡು ಆ ಭಾಗದಲ್ಲಿ ಅಭಿವೃದ್ಧಿ ಆಗ್ತಿದೆ. ಹೀಗಾಗಿ, ಉಮೇಶ್ ಕತ್ತಿ ತಮ್ಮ ಮಾತನ್ನು ಪುನರ್ ಪರಿಶೀಲನೆ ಮಾಡಲಿ ಎಂದರು.
ಇದೇ ವೇಳೆ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಾರ್ಯನಿರ್ವಹಣೆ, ಕಚೇರಿ ವರ್ಗಾವಣೆ ವಿಚಾರವಾಗಿ ಕಾರ್ಯಗಳು ನಡೆಯುತ್ತಿದೆ. ಈ ಬಗ್ಗೆ ಶಾಸಕರು ಆಗಾಗ ಎಚ್ಚರಿಸುತ್ತಿರುತ್ತಾರೆ ಎಂದರು.
ಪ್ರಭಾಕರ ಭಟ್‌ರಿಂದ ಸ್ವಾಗತ : ಗೃಹ ಸಚಿವರಾದ ಬಳಿಕ ಪ್ರಥಮ ಬಾರಿಗೆ ಪುತ್ತೂರಿನ ವಿವೇಕಾನಂದ ಕಾಲೇಜಿಗೆ ಆಗಮಿಸಿದ ಆರಗ ಜ್ನಾನೇಂದ್ರ ಅವರನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಶಾಲು ಹೊದಿಸಿ ಗೌರವಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಪವರ್ ಪಾಲಿಟಿಕ್ಸ್ ಮಾಡದೆ ಪೀಪಲ್ ಪಾಲಿಟಿಕ್ಸ್ನಿಂದ ಮೋದಿ ಚಿರಸ್ಮರಣೀಯರಾಗಲಿದ್ದಾರೆ: ಸಿಎಂ