ETV Bharat / state

ಬೆಳ್ತಂಗಡಿ.. ವಕೀಲರ ಸಂಕಷ್ಟಕ್ಕೆ ಧಾವಿಸುವಂತೆ ಯುವ ವಕೀಲರ ವೇದಿಕೆಯಿಂದ ಸಿಎಂಗೆ ಮನವಿ!! - ವಕೀಲರ ಮೇಲೆ ಲಾಕ್ ಡೌನ್ ಎಫೆಕ್ಟ್

ಈಗಾಗಲೇ ತೆಲಂಗಾಣ ಸರ್ಕಾರ ವಕೀಲರ ಸಮುದಾಯಕ್ಕೆ 25 ಕೋಟಿ ರೂ. ಅನುದಾನ ಘೋಷಿಸಿದೆ. ಹಾಗಾಗಿ 45 ಕೋಟಿ ರೂ. ಹಣವನ್ನು ಹೆಚ್ಚುವರಿಯಾಗಿ ಬಿಡುಗಡೆಗೊಳಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು..

Advocates group
Advocates group
author img

By

Published : Jun 26, 2020, 7:56 PM IST

ಬೆಳ್ತಂಗಡಿ : ಲಾಕ್‌ಡೌನ್ ಹಿನ್ನೆಲೆ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ವೃತ್ತಿ ನಿರತ ವಕೀಲರ ಸಮುದಾಯಕ್ಕೆ 5 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಆದರೆ, ಇನ್ನೂ ಹೆಚ್ಚುವರಿಯಾಗಿ 45 ಕೋಟಿ ರೂ. ಹಣ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ತಾಲೂಕಿನ ಯುವ ವಕೀಲರ ವೇದಿಕೆ ಬೆಳ್ತಂಗಡಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿತು.

ಕರ್ನಾಟಕದಲ್ಲಿ ಸುಮಾರು 1 ಲಕ್ಷ ವಕೀಲರು ವೃತ್ತಿಯಲ್ಲಿ ತೊಡಗಿದ್ದಾರೆ. ಹೆಚ್ಚಿನವರು ಯುವ ವಕೀಲರಾಗಿದ್ದಾರೆ ಹಾಗೂ ಗ್ರಾಮೀಣ ಪ್ರದೇಶದಿಂದ ಬಂದವರಾಗಿರುತ್ತಾರೆ. ಈಗಾಗಲೇ ಸರ್ಕಾರ ಘೋಷಿಸಿದ 5 ಕೋಟಿ ರೂ. ವಿಶೇಷ ಪ್ಯಾಕೇಜ್ ಸಂಕಷ್ಟದಲ್ಲಿರುವ ವಕೀಲರಿಗೆ ಸಾಕಾಗುವುದಿಲ್ಲ.

ಈಗಾಗಲೇ ತೆಲಂಗಾಣ ಸರ್ಕಾರ ವಕೀಲರ ಸಮುದಾಯಕ್ಕೆ 25 ಕೋಟಿ ರೂ. ಅನುದಾನ ಘೋಷಿಸಿದೆ. ಹಾಗಾಗಿ 45 ಕೋಟಿ ರೂ. ಹಣವನ್ನು ಹೆಚ್ಚುವರಿಯಾಗಿ ಬಿಡುಗಡೆಗೊಳಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಕೀಲರಾದ ಮನೋಹರ್ ಕುಮಾರ್ ಇಳಂತಿಲ, ಧನಂಜಯ ರಾವ್ ಧರ್ಪಿಂಜ, ಜೆಕೆ ಪೌಲ್ ಹಾಗೂ ಇನ್ನಿತರ ವಕೀಲರುಗಳು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.