ETV Bharat / state

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ-ಟೊಯೊಟಾ ಕಿರ್ಲೋಸ್ಕರ್ ಕಂಪೆನಿಯ ನಡುವೆ ಒಪ್ಪಂದ

ಟೊಯೊಟೊ ಜೊತೆ ಆಳ್ವಾಸ್​ ಇಂಜಿನಿಯರಿಂಗ್​ ಕಾಲೇಜು ಒಡಂಬಡಿಕೆ ಮಾಡಿಕೊಂಡಿದೆ. ಔದ್ಯೋಗಿಕ ಕ್ಷೇತ್ರಕ್ಕೆ ನುರಿತ ಹಾಗೂ ಕುಶಲ ತಂತ್ರಜ್ಞರ ಕೊರತೆ ನೀಗಿಸಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

Alva's Education Foundation
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ
author img

By

Published : Sep 11, 2020, 12:04 AM IST

ಮೂಡುಬಿದಿರೆ: ಟೊಯೊಟಾ ಕಿರ್ಲೋಸ್ಕರ್ ಮೋಟಾರ್(ಟಿಕೆಎಮ್) ಬೆಂಗಳೂರು ಹಾಗೂ ಮೂಡುಬಿದಿರೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜುಗಳು ಹೊಸದೊಂದು ಒಡಂಬಡಿಕೆಗೆ ಸಹಿ ಹಾಕಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದರು.

Alva's Education Foundation
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ

ಪ್ರಸ್ತುತ ಔದ್ಯೋಗಿಕ ಕ್ಷೇತ್ರವು ನುರಿತ ಹಾಗೂ ಕುಶಲ ತಂತ್ರಜ್ಞರ ಕೊರತೆಯನ್ನು ಎದುರಿಸುತ್ತಿದೆ. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಎಷ್ಟೇ ತರಬೇತಿ ಪಡೆದು ಬಂದಿರೂ, ಅವರನ್ನು ಔದ್ಯೋಗಿಕ ಕ್ಷೇತ್ರದ ಬೇಡಿಕೆಗಳಿಗೆ ತಕ್ಕಂತೆ ಸಿದ್ಧಪಡಿಸುವುದು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಈ ಒಡಂಬಡಿಕೆ ಆಗಿದೆ ಎಂದು ತಿಳಿಸಿದರು.

ಟೊಯೊಟಾ ಕಂಪನಿಯ ಮೇಲ್ಪಂಕ್ತಿಯ ಅಭ್ಯಾಸಗಳನ್ನು ವಿದ್ಯಾರ್ಥಿಗಳಿಗೆ ನೀಡಿ, ಅವರ ಉದ್ಯೋಗ ಕೌಶಲ್ಯಗಳನ್ನು ಹೆಚ್ಚಿಸುವುದರ ಜೊತೆಗೆ ಶಿಕ್ಷಣ ರಂಗ ಮತ್ತು ಔದ್ಯೋಗಿಕ ರಂಗಗಳ ಮಧ್ಯೆ ಇರುವ ಅಂತರವನ್ನು ಕಡಿಮೆ ಮಾಡುವುದು, ಈ ಒಡಂಬಡಿಕೆಯ ಉದ್ದೇಶ. ಟೊಯೊಟಾ ಕಿರ್ಲೋಸ್ಕರ್ ಕಂಪನಿಯ ತರಬೇತಿ ವಿಭಾಗವಾದ ಟೊಯೊಟಾ ಲರ್ನಿಂಗ್ ಆ್ಯಂಡ್ ಡೆವಲಪ್‍ಮೆಂಟ್ ಇಂಡಿಯಾ ಈ ಒಪ್ಪಂದದ ಉದ್ದೇಶವನ್ನು ಪೂರೈಸಲು ಸಹಕರಿಸಲಿದೆ ಎಂದರು.

ವಿಶೇಷವಾಗಿ ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಂಬಿಎ ಹಾಗೂ ಸಮಾಜಕಾರ್ಯ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಈ ಒಡಂಬಡಿಕೆಯ ಪ್ರಯೋಜನ ಪಡೆಯಬಹುದಾಗಿದೆ. ಸೆಮಿಸ್ಟರ್ ಪ್ರಕಾರ ಈ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗಿದ್ದು, ಅದರಂತೆ 3 ವರ್ಷ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ತರಬೇತಿದಾರರು ಜಪಾನ್- ಏಷ್ಯಾ ಪೆಸಿಫಿಕ್ ಗ್ಲೋಬಲ್ ಪ್ರೊಡಕ್ಷನ್‍ನ ಟೊಯೊಟಾ ಮೋಟರ್‍ ಕಾರ್ಪೋರೇಶನ್‍ನಿಂದ ಪ್ರಮಾಣೀಕೃತರಾಗಿರುತ್ತಾರೆ. ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸಿ ಅಪಾರ ಅನುಭವ ಹೊಂದಿರುವ 300 ಅಧಿಕ ನುರಿತ ಕ್ಷೇತ್ರ ಪರಿಣತರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದವರು ತಿಳಿಸಿದರು.

ವಿದ್ಯಾರ್ಥಿಗಳನ್ನು ಕುಶಲಗೊಳಿಸುವುದರ ಜೊತೆಗೆ ಉದ್ಯೋಗಕ್ಷೇತ್ರಕ್ಕೆ ಸಂಪೂರ್ಣ ಸಿದ್ಧಪಡಿಸುವ ಒಪ್ಪಂದ ಇದಾಗಿದೆ. ಆಡಳಿತ, ಮಾರ್ಗದರ್ಶನ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿ ಕನಿಷ್ಠ ಶುಲ್ಕವನ್ನು ನಿಗದಿಪಡಿಸಲಾಗಿದೆ. ಮೆಕ್ಯಾನಿಕಲ್‍ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವರ ದ್ವಿತೀಯ ವರ್ಷದಿಂದ ಹಾಗೂ ಎಂಬಿಎ, ಸ್ನಾತಕೋತ್ತರ ಸಮಾಜಸೇವೆ ವಿದ್ಯಾರ್ಥಿಗಳಿಗೆ ಅವರ ಪ್ರಥಮ ಸೆಮಿಸ್ಟರ್​​ನಿಂದ ಈ ತರಬೇತಿಗಳು ಆರಂಭವಾಗಲಿವೆ. ಇದರಲ್ಲಿ 90 ಶೇಕಡಾ ಪ್ರಾಯೋಗಿಕ ತರಗತಿಗಳು (ಟೊಯೊಟಾಕೌಶಲ್ಯ ಅಭ್ಯಾಸಗಳು) ಹಾಗೂ 10% ಪಠ್ಯ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ. 180 ಗಂಟೆಗಳ ಪಠ್ಯಕ್ರಮವನ್ನು ರೂಪಿಸಲಾಗಿದ್ದು, ಇದರಲ್ಲಿ 110 ಗಂಟೆಗಳನ್ನು ಟೊಯೊಟಾ ಕಿರ್ಲೋಸ್ಕರ್​ ಕಂಪನಿಯ ಬೆಂಗಳೂರಿನ ಕ್ಯಾಂಪಸ್‍ನಲ್ಲಿ ಹಾಗೂ 70 ಗಂಟೆಗಳನ್ನು ಕಾಲೇಜ್‍ ಕ್ಯಾಂಪಸ್‍ನಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.