ETV Bharat / state

ಮಂಗಳೂರಿನಲ್ಲಿ ವೃದ್ಧ ಸಹೋದರಿಯರ ಆತ್ಮಹತ್ಯೆ - ಸಹೋದರಿಯರಿಬ್ಬರು ಆತ್ಮಹತ್ಯೆ

ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಹೋದರಿಯರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Aged sisters commit suicide in Mangalore
ಮಂಗಳೂರಿನಲ್ಲಿ ವೃದ್ಧ ಸಹೋದರಿಯರ ಆತ್ಮಹತ್ಯೆ
author img

By ETV Bharat Karnataka Team

Published : Oct 4, 2023, 8:59 AM IST

Updated : Oct 4, 2023, 1:15 PM IST

ಮಂಗಳೂರು: ವೃದ್ಧ ಸಹೋದರಿಯರಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕದ್ರಿ ಕಂಬಳದಲ್ಲಿ ನಡೆದಿದೆ. ಲತಾ ಭಂಡಾರಿ (70) ಮತ್ತು ಸುಂದರಿ ಶೆಟ್ಟಿ (80) ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು. ನಗರದ ಕದ್ರಿ ಕಂಬಳದ ಚಂದ್ರಿಕಾ ಬಡಾವಣೆಯಲ್ಲಿ ಇವರು ವಾಸವಿದ್ದರು. ಲತಾ ಭಂಡಾರಿ ಅವರ ಪತಿ ಜಗನ್ನಾಥ ಭಂಡಾರಿ ಅವರು ಕೆಲಸಕ್ಕೆ ಎಂದು ಹೊರ ಹೋಗಿದ್ದ ಸಂದರ್ಭದಲ್ಲಿ ಸಹೋದರಿಯರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಂದು ಸಂಜೆ 4.30ರ ವೇಳೆಗೆ ಜಗನ್ನಾಥ ಭಂಡಾರಿ ಬಂದು ಮನೆಯಲ್ಲಿ ನೋಡಿದಾಗ ಮನೆಯ ಬಾಗಿಲು ಮುಚ್ಚಲಾಗಿತ್ತು. ಕಿಟಕಿಯಿಂದ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಸಹೋದರಿಯರಿರುವುದು ಕಂಡು ಬಂದಿದೆ. ಇವರು ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಮಂಗಳೂರಿನಲ್ಲಿ 60 ಬಸ್​ಗಳ ಒಡೆಯ ಆತ್ಮಹತ್ಯೆ.. ಸಾಲು ಸಾಲು ಬಸ್​ಗಳೊಂದಿಗೆ ಮಾಲೀಕನ ಅಂತಿಮಯಾತ್ರೆ

ಬಸ್​ಗಳ​ ಮಾಲೀಕ ಆತ್ಮಹತ್ಯೆ: ಇತ್ತೀಚೆಗಷ್ಟೇ ಇಂತಹದೇ ಘಟನೆ ವರದಿ ಆಗಿತ್ತು. ಮಂಗಳೂರಿನ ಮಹೇಶ್​ ಮೋಟಾರ್ಸ್​ ಬಸ್​ ಮಾಲೀಕ ಪ್ರಕಾಶ್​ ಶೇಕ ಅವರು ಇತ್ತೀಚೆಗಷ್ಟೇ ಕದ್ರಿ ಕಂಬಳದಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪುತ್ರಿ ಹಾಗೂ ಪತ್ನಿಯೊಂದಿಗೆ ಕದ್ರಿ ಕಂಬಳದಲ್ಲಿ ಅಪಾರ್ಟ್​ಮೆಂಟ್​ ಒಂದರಲ್ಲಿ ವಾಸವಾಗಿದ್ದ ಪ್ರಕಾಶ್​ ಅವರುಸ್ವಲ್ಪ ಹೊತ್ತು ಮಲಗುತ್ತೇನೆ ಎಂದು ಕೋಣೆಗೆ ಹೋದವರು. ಆತ್ಮಹತ್ಯೆ ಮಾಡಿಕೊಂಡಿದ್ದರು.

ಕೋಣೆಗೆ ಹೋದವರು ಮಧ್ಯಾಹ್ನದ ಊಟಕ್ಕೆ ಏಳದಿರುವುದನ್ನು ಕಂಡು ಮನೆಯವರು ಬಾಗಿಲು ಬಡಿದಿದ್ದರು. ಬಾಗಿಲು ಬಡಿದಾಗ ಬಾಗಿಲು ತೆರೆದಿರಲಿಲ್ಲ. ನಂತರ ನೋಡಿದಾಗ ಮನೆಯ ಸೀಲಿಂಗ್​ ಫ್ಯಾನ್​ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. 60 ಬಸ್​ಗಳ ಮಾಲೀಕರಾಗಿದ್ದ ಪ್ರಕಾಶ್​ ಶೇಖ್​ ಅವರ ಅಂತಿಮ ಯಾತ್ರೆಗೆ ಅವರ ಒಡೆತನದ ಎಲ್ಲ ಬಸ್​ಗಳು ಪಾಲ್ಗೊಂಡು, ಅಂತಿಮ ವಿದಾಯ ಹೇಳಿದ್ದವು. ಈ ವಿಡಿಯೋ ವೈರಲ್​ ಆಗಿತ್ತು.

ಹೆಡ್​ ಕಾನ್​ಸ್ಟೇಬಲ್​ ಆತ್ಮಹತ್ಯೆ( ಶಿವಮೊಗ್ಗ): ಪತ್ನಿಯ ಅಗಲಿಕೆಯಿಂದ ತೀವ್ರವಾಗಿ ಮನನೊಂದಿದ್ದ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್​ ಠಾಣೆಯ ಹೆಡ್​ ಕಾನ್​ಸ್ಟೇಬಲ್​ ಜಯಪ್ಪ ಅವರು ಇತ್ತೀಚೆಗೆ ಆತ್ಮಹತ್ಯೆ ಘಟನೆ ಶಿವಮೊಗ್ಗ ಜಿಲ್ಲೆಯ ವಿನೋಬನಗರದಲ್ಲಿ ನಡೆದಿತ್ತು. ಮೂಲತಃ ಹಾವೇರಿ ಜಿಲ್ಲೆಯ ಸಾತನೂರು ಗ್ರಾಮದವರಾದ ಜಯಪ್ಪ ಅವರು ಶಿವಮೊಗ್ಗದಲ್ಲಿ ಸಂಚಾರಿ ಪೊಲೀಸ್​ ಠಾಣೆಯಲಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಪತ್ನಿ ಕೆಲವು ದಿನಗಳ ಹಿಂದೆಯಷ್ಟೇ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಪತ್ನಿಯ ಅಗಲಿಕೆಯಿಂದ ಮನನೊಂದು ಜಯಪ್ಪ ಆತ್ಮಹತ್ಯೆಗೆ ಶರಣಾಗಿದ್ದರು.

Last Updated : Oct 4, 2023, 1:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.