ETV Bharat / state

ಆದಿತ್ಯ ರಾವ್ ​ಪಣಂಬೂರು ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ಶಿಫ್ಟ್: ರಾತ್ರಿಯೂ ವಿಚಾರಣೆ ಸಾಧ್ಯತೆ

author img

By

Published : Jan 22, 2020, 11:04 PM IST

ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ನನ್ನು ಪೊಲೀಸ್ ಸರ್ಪಗಾವಲಿನಲ್ಲಿ ವಿಶೇಷ ಭದ್ರತಾ ವಾಹನದಲ್ಲಿ ಪಣಂಬೂರು ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ಕರೆತರಲಾಗಿದೆ.

aditya-rav-is-in-under-the-custody-for-mangalore-police
ಆದಿತ್ಯ ರಾವ್ ​ನನ್ನು ಪೆಣಂಬೂರು ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ಶಿಫ್ಟ್

ಮಂಗಳೂರು: ನಗರದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ನನ್ನು ಪೊಲೀಸ್ ಸರ್ಪಗಾವಲಿನಲ್ಲಿ ವಿಶೇಷ ಭದ್ರತಾ ವಾಹನದಲ್ಲಿ ಪಣಂಬೂರು ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ಕರೆತಂದಿದ್ದು ರಾತ್ರಿಯೂ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಆರೋಪಿಯನ್ನು ಕರೆತರುವ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ‌ ಸಾಕಷ್ಟು ಪೊಲೀಸ್ ಬಿಗಿ‌ ಬಂದೋಬಸ್ತ್​ ಮಾಡಲಾಗಿತ್ತು ವಿಮಾನ ನಿಲ್ದಾಣದ ಪ್ರವೇಶ ದ್ವಾರ, ನಿರ್ಗಮನ ದ್ವಾರದಲ್ಲಿಯೂ ಪೊಲೀಸ್ ಸರ್ಪಗಾವಲು ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 7.15ಕ್ಕೆ ಆರೋಪಿ ಆದಿತ್ಯ ರಾವ್ ನೊಂದಿಗೆ ಎಸಿಪಿ‌ ಬೆಳ್ಳಿಯಪ್ಪ‌ ತಂಡ ವಿಮಾನ ನಿಲ್ದಾಣಕ್ಕೆ ರಾತ್ರಿ 8.30 ಸುಮಾರಿಗೆ ಬಂದಿಳಿದರು.

ಆದಿತ್ಯ ರಾವ್ ​ಪಣಂಬೂರು ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ಶಿಫ್ಟ್

ಇಂದು ಬೆಳಗ್ಗೆ ಬೆಂಗಳೂರಿನ ಡಿಜಿಪಿ, ಐಜಿಪಿ ಕಚೇರಿಯಲ್ಲಿ ಪೊಲೀಸರಿಗೆ ಶರಣಾಗಿದ್ದ ಆರೋಪಿಯನ್ನು ಹಲಸೂರು ಗೇಟ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ‌ ವೈದ್ಯರಿಂದ ಆರೋಪಿಯ ತಪಾಸಣೆ ನಡೆದಿದ್ದು, ಆರೋಪಿ ಸದೃಢ ಇರುವುದಾಗಿ ಘೋಷಿಸಿದ್ದಾರೆಂದು ತಿಳಿದು ಬಂದಿದೆ. ಬಳಿಕ ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿ ಆದಿತ್ಯ ರಾವ್ ನನ್ನು ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಯನ್ನು ಮಂಗಳೂರಿಗೆ ಕರೆದೊಯ್ಯಲು ಅನುಮತಿ ನೀಡಿದ ಬಳಿಕವಷ್ಟೇ ಪೊಲೀಸರು ಮಂಗಳೂರಿಗೆ ಕರೆತಂದಿದ್ದಾರೆ.

Intro:ವೀಡಿಯೋBody:ವೀಡಿಯೋConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.