ಸುಳ್ಯ (ದಕ್ಷಿಣ ಕನ್ನಡ): ಸುಳ್ಯದ ಜೂನಿಯರ್ ಕಾಲೇಜ್ ಬಳಿಯಿಂದ ಜ್ಯೋತಿ ವೃತ್ತದವರೆಗೆ ಮೆಸ್ಕಾಂ ವತಿಯಿಂದ ಅಳವಡಿಸಲಾಗುತ್ತಿರುವ ಭೂಗತ ಕೇಬಲ್ ಕೆಲಸ ಯಥಾವತ್ತಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಸುಳ್ಯದ ಜೂನಿಯರ್ ಕಾಲೇಜ್ ಬಳಿಯಿಂದ ಜ್ಯೋತಿ ವೃತ್ತದವರೆಗೆ ಸುಮಾರು 1 ಕಿಮೀ 33 ಕೆ.ವಿ ವಿದ್ಯುತ್ ಪೂರೈಕೆ ಸಾಮರ್ಥ್ಯದ ಭೂಗತ ಕೇಬಲ್ ಅಳವಡಿಕೆ ಮಾಡಲಾಗುತ್ತಿದೆ. ಆದರೆ ಈ ಕೆಲಸವನ್ನು ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲ ಎಂದು ಸುಳ್ಯದ ಆರ್ಟಿಐ ಕಾರ್ಯಕರ್ತ ಟಿ.ಎಂ. ಶಾರಿಕ್ ಆರೋಪ ಮಾಡಿದ್ದಾರೆ. ಮೆಸ್ಕಾಂ ಅಧಿಕಾರಿಗಳು ಹೇಳುವ ಪ್ರಕಾರ ಕನಿಷ್ಠ ಐದು ಅಡಿ ಆಳದ ಗುಂಡಿಯಲ್ಲಿ ಈ ಕೇಬಲ್ ಅಳವಡಿಕೆ ಮಾಡಬೇಕಾಗುತ್ತದೆ. ಕೇಬಲ್ ಅಳವಡಿಸುವ ಸ್ಥಳದಲ್ಲೇ ನೀರಿನ ಪೈಪ್ಲೈನ್ ಸೇರಿದಂತೆ ಇತರ ಕೇಬಲ್ಗಳು ಇರಬಾರದು. ಆಕಸ್ಮಿಕವಾಗಿ ಇದ್ದಲ್ಲಿ ಅದಕ್ಕೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದರು.
ಐದು ಅಡಿ ಕೆಳಗಡೆ ಈ ಕೇಬಲ್ ಹಾಕಿದ ನಂತರ ಇದರ ಮೇಲೆ ಇಟ್ಟಿಗೆ, ಟೈಲ್ಸ್ ಅಳವಡಿಸಬೇಕಾಗುತ್ತದೆ. ಆದರೆ ಇಲ್ಲಿ ಕೇಬಲ್ ಸರಿಯಾದ ರೀತಿಯಲ್ಲಿ ಅಳವಡಿಕೆ ಮಾಡಲಾಗಿಲ್ಲ ಎಂದು ಟಿ.ಎಂ. ಶಾರಿಕ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಬಡ ಕುಟುಂಬಕ್ಕೆ ಸ್ವಂತ ಖರ್ಚಿನಲ್ಲಿ ನೀರು-ವಿದ್ಯುತ್ ಪೂರೈಕೆ : ಕಾರ್ಪೊರೇಟರ್ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ
ಒಡೆದು ಹೋಗಿರುವ ನೀರಿನ ಪೈಪ್ಗಳ ನಡುವೆ ಕೇಬಲ್ ಅಳವಡಿಕೆ ಮಾಡಿರುವುದರಿಂದ ಅಪಾಯ ಉಂಟಾಗುವ ಸಾಧ್ಯತೆ ಇದೆ. ಅಲ್ಲದೇ ಮುಂದಿನ ದಿನಗಳಲ್ಲಿ ನೀರಿನ ಪೈಪ್ ಕೆಲಸ, ಓಎಫ್ಸಿ ಕೇಬಲ್ ಕೆಲಸಕ್ಕಾಗಿ ಗುಂಡಿ ತೋಡಿದಲ್ಲಿ ಅಪಾಯ ಎದುರಾಗುವ ಸಂಭವ ಇದೆ ಎಂದರು.