ಮಂಗಳೂರು: ನಗರದಲ್ಲಿ ರೂ. 2. 20 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ ( ಅಂಬರ್ ಗ್ರೀಸ್ ) ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಕೊಡಗು ಜಿಲ್ಲೆಯ ಭಾಗ ಮಂಡಲದ ಜಾಬೀರ್ ಎಂ. ಎ (35), ಕೇರಳ ಕಾಂಞಗಾಡ್ ನ ಅಸೀರ್ ವಿ. ಪಿ (36), ಕೇರಳ ರಾಜ್ಯದ ಹೊಸದುರ್ಗದ ಶರೀಫ್ (32), ಕೊಡಗು ಜಿಲ್ಲೆಯ ಭಾಗಮಂಡಲದ ಶಬಾದ್ ಎಲ್. ಕೆ (27) ಬಂಧಿತರು.
ಇವರು ಮಂಗಳೂರಿನ ಜೆಪ್ಪಿನಮೊಗರುವಿನಲ್ಲಿ 2.20 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ ( ಅಂಬರ್ ಗ್ರೀಸ್ ) ಮಾರಾಟಕ್ಕೆ ಯತ್ನಿಸುತ್ತಿದ್ದರು. ಇದರ ಮಾಹಿತಿ ಪಡೆದ ಕಂಕನಾಡಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 5 ಮೊಬೈಲ್, 1 ಸ್ವಿಪ್ಟ್ ಕಾರು ವಶಪಡಿಸಿಕೊಳ್ಳಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಪ್ರವರ್ಗ 2ಎ ಸೇರಿಸುವ ವಿಚಾರ, ಸಮಗ್ರ ಅಧ್ಯಯನ ನಡೆಸಿ ನಿಷ್ಪಕ್ಷಪಾತ ವರದಿ ನೀಡ್ತೇನಿ- ಜಯಪ್ರಕಾಶ್ ಹೆಗ್ಡೆ ಭರವಸೆ