ETV Bharat / state

ಮಂಗಳೂರು 'ಸಂಡೇ ಲಾಕ್​ಡೌನ್' ಗೆ ಸಂಪೂರ್ಣ ಸ್ತಬ್ಧ...! - ಮಂಗಳೂರು ಸುದ್ದಿ

ಗುರುವಾರದ ಹೊರತು ಶುಕ್ರವಾರ ಹಾಗೂ ಶನಿವಾರ ಲಾಕ್​ಡೌನ್ ನಿಯಮವನ್ನು ಗಾಳಿಗೆ ತೂರಿ ಜನರು ಅನಗತ್ಯವಾಗಿ ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿರುವುದು ಕಂಡು ಬಂದಿತ್ತು. ಆದರೆ ಇಂದು ಅಲ್ಲೊಂದು, ಇಲ್ಲೊಂದು ಖಾಸಗಿ ವಾಹನಗಳ ಓಡಾಟ ಬಿಟ್ಟರೆ ಯಾವುದೇ ಜನ ಸಂಚಾರ, ವಾಹನಗಳ ಸಂಚಾರಗಳಿಲ್ಲದೆ ಮಂಗಳೂರು ಸ್ತಬ್ಧವಾಗಿದೆ.

Mangalore
ಮಂಗಳೂರು ಸಂಡೇ ಲಾಕ್​ಡೌನ್
author img

By

Published : Jul 19, 2020, 1:12 PM IST

Updated : Jul 19, 2020, 2:07 PM IST

ಮಂಗಳೂರು: ಸಂಡೇ ಲಾಕ್​ಡೌನ್ ಪರಿಣಾಮ ಇಂದು ಮಂಗಳೂರು ಸಂಪೂರ್ಣ ಲಾಕ್ ಆಗಿದ್ದು, ರಸ್ತೆಗಳೆಲ್ಲಾ ಜನಸಂಚಾರ, ವಾಹನ ಸಂಚಾರಗಳಿಲ್ಲದೆ ಖಾಲಿ‌ ಖಾಲಿಯಾಗಿದೆ.

ಮಂಗಳೂರು 'ಸಂಡೇ ಲಾಕ್​ಡೌನ್' ಗೆ ಸಂಪೂರ್ಣ ಸ್ತಬ್ಧ

ಹಾಲಿನ ವ್ಯಾಪಾರ ಹೊರತು ದಿನಸಿ ಸಾಮಗ್ರಿಗಳ ಅಂಗಡಿ-ಮುಂಗಟ್ಟುಗಳು, ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಿದ್ದು, ಕಠಿಣ ಲಾಕ್​ಡೌನ್ ಜಾರಿಯಲ್ಲಿದೆ.

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಾದ್ಯಂತ ಎರಡನೇ ಹಂತದ ಲಾಕ್​ಡೌನ್ ಗುರುವಾರದಿಂದ ಒಂದು ವಾರ ಕಾಲ ಜಾರಿಯಲ್ಲಿರುತ್ತದೆ. ಆದರೆ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಗ್ಗೆ 8 ರಿಂದ 11ರವರೆಗೆ ಲಾಕ್​ಡೌನ್ ವಿನಾಯಿತಿ ನೀಡಲಾಗಿದೆ. ಈ ಸಂದರ್ಭ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು, ಸರ್ಕಾರಿ ನಿಯಮ ಪಾಲಿಸಿ ಅಗತ್ಯ ವಸ್ತುಗಳ ಖರೀದಿ ಮಾಡಬಹುದು. ಆದರೆ ಇಂದು ದ.ಕ. ಜಿಲ್ಲಾಧಿಕಾರಿಯವರ ಆದೇಶದಂತೆ ಸಂಡೇ ಲಾಕ್​ಡೌನ್ ಜಾರಿಯಲ್ಲಿದೆ.

ನಿನ್ನೆ ಮೊನ್ನೆ ಅನಗತ್ಯ ಸಂಚಾರ ಮಾಡುತ್ತಿರುವ ವಾಹನಗಳನ್ನು ನಿಯಂತ್ರಿಸೋದೇ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಇಂದು ಸಂಪೂರ್ಣ ಲಾಕ್​ಡೌನ್ ಜಾರಿಯಲ್ಲಿರೋದರಿಂದ ಪೊಲೀಸರಲ್ಲಿಯೂ ಸ್ವಲ್ಪ ಮಟ್ಟಿನ ನಿರಾಳತೆ ಕಂಡು ಬಂದಿದೆ.

Last Updated : Jul 19, 2020, 2:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.