ಬಂಟ್ವಾಳ (ದಕ್ಷಿಣ ಕನ್ನಡ) : ಕೊರೊನಾ ಸಂಕಷ್ಟದ ಸಮಯದಲ್ಲಿ ಸರ್ಕಾರ ಹಣ ನೀಡಿದೆ. ಆ ಹಣ ಪಡೆಯಬೇಕೆಂದರೆ ಮೊದಲು ನಾವು ಹಣ ಕಟ್ಟಬೇಕು ಎಂದು ಹೇಳಿ ಮಹಿಳೆಯಿಂದ ಒಡವೆಗಳನ್ನು ತೆಗೆದುಕೊಂಡು ಹೋಗಿರುವ ಘಟನೆ ನಗರದ ಮಿನಿ ವಿಧಾನಸೌಧದ ಬಳಿ ನಡೆದಿದೆ.
ಅಮ್ಟಾಡಿ ತಲೆಂಬಿಲ ನಿವಾಸಿ ಜಯಂತಿ ಎಂಬಾಕೆ, ಬಿ.ಸಿ.ರೋಡಿನ ಮೆಸ್ಕಾಂ ಕಚೇರಿಗೆ ವಿದ್ಯುತ್ ಬಿಲ್ ಪಾವತಿಸಲು ಬಂದಿದ್ದರು. ಈ ವೇಳೆ, ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಪರಿಚಿತನಂತೆ ನಟಿಸಿ, ಕೊರೊನಾ ಹಿನ್ನೆಲೆ ನಿಮಗೆ ಒಂದೂವರೆ ಲಕ್ಷ ರೂಪಾಯಿ ಹಣ ಬಂದಿದೆ. ಅದನ್ನು ಪಡೆಯಲು 10 ಸಾವಿರ ರೂಪಾಯಿ ಕಟ್ಟಬೇಕು. ಆಧಾರ್ ಕಾರ್ಡ್ ತೆಗೆದುಕೊಂಡು ಮಿನಿ ವಿಧಾನಸೌಧಕ್ಕೆ ಬನ್ನಿ, ಅರ್ಜಿ ನೀಡಬೇಕು ಎಂದು ಕರೆದು ಕೊಂಡು ಬಂದಿದ್ದಾನೆ. ಇದಕ್ಕೆ ಮಹಿಳೆ, ನನ್ನ ಬಳಿ ಹಣವಿಲ್ಲ. ನನ್ನ ಮಗನ ಬಳಿ ಕೇಳಿ ಕೊಡುತ್ತೇನೆ ಎಂದರೂ, ಅಪರಿಚಿತ ವ್ಯಕ್ತಿ ಮಹಿಳೆ ಬಳಿಯಿದ್ದ ಓಲೆ ತೆಗೆದುಕೊಂಡು ಪರಾರಿಯಾಗಿದ್ದಾನೆ.
ದಿಕ್ಕು ತೋಚದ ಮಹಿಳೆ ಮಗನಿಗೆ ವಿಷಯ ತಿಳಿಸಿದ್ದು, ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.