ETV Bharat / state

ಸುಳ್ಯ: ಶಾಲಾ ಬಾಲಕಿ ಮೇಲೆ ರಾಸಾಯನಿಕ ಸ್ಪ್ರೇ ಮಾಡಿ ಪರಾರಿಯಾದ ಅಪರಿಚಿತರು - ಅಪರಾಧ ಸುದ್ದಿ

ಬೆಳ್ಳಾರೆ ಸಮೀಪದ ರಾಗಿಯಡ್ಕದ ಬಾಲಕಿ ಕುಕ್ಕುಜಡ್ಕ ಶಾಲೆಗೆ ಮಧ್ಯಾಹ್ನ ಬರುತ್ತಿದ್ದಾಗ ಆನೆಕಾರ್ ಎಂಬಲ್ಲಿ ಬೈಕ್‌ನಲ್ಲಿ ಬಂದ ವ್ಯಕ್ತಿಗಳು ರಾಸಾಯನಿಕ ಸ್ಪ್ರೇ ಮಾಡಿದ್ದಾರೆ. ಬಳಿಕ ಬಾಲಕಿ ಪ್ರಜ್ಞೆ ತಪ್ಪಿ ಅಲ್ಲೇ ಕುಸಿದು ಬಿದ್ದಿದ್ದಾಳೆ. ಆ ರಸ್ತೆಯಲ್ಲಿ ಬೇರೆ ವಾಹನ ಬರುವ ಶಬ್ಧ ಕೇಳಿ ಆಕೆಯನ್ನು ಅಲ್ಲಿ ಬಿಟ್ಟು ಅಪರಿಚಿತರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

A stranger who fled chemical spray into a school girl
ಸುಳ್ಯ: ಶಾಲಾ ಬಾಲಕಿಗೆ ರಾಸಾಯನಿಕ ಸ್ಪ್ರೇ ಮಾಡಿ ಪರಾರಿಯಾದ ಅಪರಿಚಿತರು
author img

By

Published : Jan 5, 2021, 5:16 PM IST

ಸುಳ್ಯ (ದ.ಕ): ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಸಮೀಪ ಆನೆಕಾರ್ ಎಂಬಲ್ಲಿ ಶಾಲಾ ಬಾಲಕಿಯೊಬ್ಬಳ ಮೇಲೆ ಬೈಕ್​​ನಲ್ಲಿ ಬಂದ ಅಪರಿಚಿತರು ರಾಸಾಯನಿಕ ಸ್ಪ್ರೇ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ. ಬಳಿಕ ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದ ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಬೆಳ್ಳಾರೆ ಸಮೀಪದ ರಾಗಿಯಡ್ಕದ ಬಾಲಕಿ ಕುಕ್ಕುಜಡ್ಕ ಶಾಲೆಗೆ ಮಧ್ಯಾಹ್ನ ಬರುತ್ತಿದ್ದಾಗ ಆನೆಕಾರ್ ಎಂಬಲ್ಲಿ ಬೈಕ್‌ನಲ್ಲಿ ಬಂದ ವ್ಯಕ್ತಿಗಳು ರಾಸಾಯನಿಕ ಸ್ಪ್ರೇ ಮಾಡಿದ್ದಾರೆ. ಬಳಿಕ ಬಾಲಕಿ ಪ್ರಜ್ಞೆ ತಪ್ಪಿ ಅಲ್ಲೇ ಕುಸಿದು ಬಿದ್ದಿದ್ದಾಳೆ. ಆ ರಸ್ತೆಯಲ್ಲಿ ಬೇರೆ ವಾಹನ ಬರುವ ಶಬ್ಧ ಕೇಳಿ ಆಕೆಯನ್ನು ಅಲ್ಲಿ ಬಿಟ್ಟು ಅಪರಿಚಿತರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ವೈಕುಂಠ ಸಮಾರಾಧನೆಯ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ರಿಕ್ಷಾವೊಂದು ಬರುವಾಗ ಬಾಲಕಿ ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದನ್ನು ನೋಡಿದ್ದಾರೆ. ಈಕೆಯನ್ನು ರಿಕ್ಷಾದವರು ಸುಳ್ಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆಸ್ಪತ್ರೆಯಲ್ಲಿ ಬಾಲಕಿ, ಬೈಕ್​ನಲ್ಲಿ ಬಂದವರು ಸ್ಪ್ರೇ ಮಾಡಿದ್ದಾಗಿ ಹೇಳಿದ್ದಾಳೆ. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿಲ್ಲ. ಬೆಳ್ಳಾರೆ ಪೊಲೀಸರು ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಇದನ್ನೂ ಓದಿ: ಶಾಲೆ ಪುನಾರಂಭವಾದ್ರೂ ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲ.. ವಿದ್ಯಾರ್ಥಿಗಳ ಪರದಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.