ETV Bharat / state

ಬಹಿರ್ದೆಸೆಗೆ ಬಸ್ಸಿನಿಂದ ಕೆಳಗಿಳಿದ ಹಿರಿಯ ಸಾಹಿತಿ: ಯಮಸ್ವರೂಪಿ ಕಾರಿಗೆ ಬಲಿ - Koteshwar Suryanarayana Rao, a resident of Bangalore

ಶಿರಾಡಿ ಸಮೀಪದ ಪುಲ್ಲೋಟೆ ಎಂಬಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ಬಸ್​ನಿಂದ ಬಹಿರ್ದೆಸೆಗೆಂದು ಕೆಳಗಿಳಿದಿದ್ದ ಹಿರಿಯ ಸಾಹಿತಿವೋರ್ವರು ಮೃತಪಟ್ಟಿದ್ದಾರೆ.

A person who was standing out side the bus dead
ಬಹಿರ್ದೆಸೆಗೆ ಬಸ್ಸಿನಿಂದ ಹೊರನಿಂತಿದ್ದ ಯಾತ್ರಿಯ ಪಯಣ ಹೀಗೂ ಕೊನೆಯಾಯ್ತು...?
author img

By

Published : Dec 12, 2019, 11:21 PM IST

Updated : Dec 12, 2019, 11:31 PM IST

ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಸಮೀಪದ ಪುಲ್ಲೋಟೆ ಎಂಬಲ್ಲಿ ಕಾರು ಡಿಕ್ಕಿ ಹೊಡೆದು ಬಸ್ ಹಿರಿಯ ಸಾಹಿತಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

A person who was standing out side the bus dead
ಯಾತ್ರಿಗೆ ಡಿಕ್ಕಿ ಹೊಡೆದ ಕಾರು

ಬೆಂಗಳೂರು ನಿವಾಸಿಯಾಗಿದ್ದ ಸಾಹಿತಿ ಕೋಟೇಶ್ವರ ಸೂರ್ಯನಾರಾಯಣ ರಾವ್ (82) ಮೃತರು. ಇವರು ಕುಂದಾಪುರದಲ್ಲಿ ನಡೆಯಬೇಕಿದ್ದ ಒಂದು ಕಾರ್ಯಕ್ರಮ ನಿಮಿತ್ತ ಬೆಂಗಳೂರಿನಿಂದ ಬಸ್ಸಿನಲ್ಲಿ ಬರುತ್ತಿದ್ದರು. ಬಸ್ ಶಿರಾಡಿ ಸಮೀಪದ ಪುಲ್ಲೊಟೆ ಎಂಬಲ್ಲಿ ನಿಲ್ಲಿಸಿದ ಸಂದರ್ಭದಲ್ಲಿ ಸೂರ್ಯನಾರಾಯಣ ರಾವ್ ಅವರು ಬಹಿರ್ದೆಸೆಗೆ ಬಸ್ಸಿನಿಂದ ಹೊರಗಡೆ ಇಳಿದಿದ್ದರು ಎನ್ನಲಾಗ್ತಿದೆ. ಈ ವೇಳೆ ವೇಗವಾಗಿ ಬಂದ ಕಾರೊಂದು ಸೂರ್ಯನಾರಾಯಣ ರಾವ್ ಅವರಿಗೆ ಡಿಕ್ಕಿ ಹೊಡೆದಿದೆ. ಅನಂತರ ತೀವ್ರವಾಗಿ ಗಾಯಗೊಂಡ ಇವರನ್ನು ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಆದ್ರೆ ಅವರು ಅಲ್ಲೇ ಮೃತಪಟ್ಟ ಬಗ್ಗೆ ಮಾಹಿತಿ ಲಭಿಸಿದೆ.

ಬಸ್ ಚಾಲಕ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವಾಹನ ನಿಲ್ಲಿಸಿದ್ದು ಮತ್ತು ಕಾರು ಅತಿ ವೇಗವಾಗಿ ಬಂದಿರುವುದೇ ಅಪಘಾತದ ಕಾರಣ ಎನ್ನಲಾಗ್ತಿದೆ. ಸದ್ಯ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Intro:ನೆಲ್ಯಾಡಿ

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶೀರಾಡಿ ಸಮೀಪದ ಪುಲ್ಲೋಟೆ ಎಂಬಲ್ಲಿ ಕಾರು ಡಿಕ್ಕಿ ಹೊಡೆದು ಬಸ್ ಯಾತ್ರಿಕರೋರ್ವರು ಮೃತಪಟ್ಟ ದಾರುಣ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಬೆಂಗಳೂರು ನಿವಾಸಿ ಕೋಟೇಶ್ವರ ಸೂರ್ಯನಾರಾಯಣ ರಾವ್ (82) ಮೃತ ವ್ಯಕ್ತಿ.Body:ಇವರು ಕುಂದಾಪುರದಲ್ಲಿ ನಡೆಯುವ ಒಂದು ಕಾರ್ಯಕ್ರಮ ನಿಮಿತ್ತವಾಗಿ ಬೆಂಗಳೂರಿನಿಂದ ಬಸ್ಸಿನಲ್ಲಿ ಬರುತ್ತಿದ್ದರು.ಬಸ್ ಶೀರಾಡಿ ಸಮೀಪದ ಪುಲ್ಲೊಟೆ ಎಂಬಲ್ಲಿ ನಿಲ್ಲಿಸಿದ ಸಂದರ್ಭದಲ್ಲಿ ಸೂರ್ಯನಾರಾಯಣ ರಾವ್ ರವರು ಬಹಿರ್ದೆಸೆಗೆ ಬಸ್ಸಿನಿಂದ ಹೊರಗಡೆ ಇಳಿದಿದ್ದರು ಎನ್ನಲಾಗಿದೆ.
ಈ ಸಮಯದಲ್ಲಿ ಅತೀ ವೇಗವಾಗಿ ಬಂದ ಕಾರೊಂದು ಸೂರ್ಯನಾರಾಯಣ ರಾವ್ ಅವರಿಗೆ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಇವರನ್ನು ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿ ಅವರು ಮೃತಪಟ್ಟ ಬಗ್ಗೆ ಮಾಹಿತಿ ಲಭಿಸಿದೆ.
ಬಸ್ ಚಾಲಕ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವಾಹನ ನಿಲ್ಲಿಸಿದ್ದು ಮತ್ತು ಅತೀ ವೇಗವಾಗಿ ಬಂದ ಕಾರು ಅಪಘಾತದ ಕಾರಣ ಎನ್ನಲಾಗಿದ್ದು, ಉಪ್ಪಿನಂಗಡಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.Conclusion:(ಫೋಟೋ ಹಾಕಲಾಗಿದೆ.)
(ಬೆಳಗ್ಗೆ ನಡೆದ ಘಟನೆ ಪೋಲೀಸರ ಮಾಹಿತಿ ಇವಾಗ ಸಿಕ್ಕಿರೋದು..)
Last Updated : Dec 12, 2019, 11:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.