ETV Bharat / state

'ರಾಜಕೀಯ ಪಕ್ಷದವರಿಗೆ ಪ್ರವೇಶವಿಲ್ಲ' ಗಮನ ಸೆಳೆಯುತ್ತಿದೆ ಗೇಟಿಗೆ ಅಳವಡಿಸಲಾಗಿರುವ ಬ್ಯಾನರ್ - ಸುಳ್ಯ

ಸುಳ್ಯ ತಾಲೂಕಿನ ಗ್ರಾಮವೊಂದರ ಮನೆಯವರು ರಾಜಕೀಯ ಸುಳ್ಳು ಭರವಸೆಗಳಿಂದ ಬೇಸತ್ತು ಚುನಾವಣಾ ಪ್ರಚಾರಕ್ಕಾಗಿ ತಮ್ಮ ಮನೆಗೆ ರಾಜಕೀಯ ಪಕ್ಷದವರು ಬರಬಾರದೆಂದು ಬ್ಯಾನರ್​ ಹಾಕಿದ್ದಾರೆ.

banner
ರಾಜಕೀಯ ಪಕ್ಷದವರಿಗೆ ಪ್ರವೇಶವಿಲ್ಲ
author img

By

Published : Apr 8, 2023, 11:29 AM IST

ಸುಳ್ಯ(ದಕ್ಷಿಣ ಕನ್ನಡ): ಸುಳ್ಯ ತಾಲೂಕಿನ ಅಜ್ಜಾವರದ ಮುಂಡೋಳಿ ಮೂಲೆಯ ಮನೆಯೊಂದರ ಮುಂಭಾಗದ ಗೇಟಿನಲ್ಲಿ 'ರಾಜಕೀಯ ಪಕ್ಷದವರಿಗೆ ಪ್ರವೇಶವಿಲ್ಲ' ಎಂಬ ಬ್ಯಾನರ್ ಅಳವಡಿಸಲಾಗಿದೆ. ರಾಜಕೀಯ ವ್ಯಕ್ತಿಗಳು ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವಾಗ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮುಂಡೋಳಿಮೂಲೆಯ ಮನೆಯೊಂದರ ಮುಂಭಾಗದಲ್ಲಿ ಯಾವುದೇ ರಾಜಕೀಯ ಪಕ್ಷದವರಿಗೆ ನಮ್ಮ ಗೇಟಿನ ಒಳಗೆ ಪ್ರವೇಶವಿಲ್ಲ ಎಂದು ಹಾಕಿರುವ ಬೋರ್ಡ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಮುಂಡೋಳಿಮೂಲೆ ಮನೆಯವರು ರಸ್ತೆ ಅಭಿವೃದ್ಧಿ ಸಮಯದಲ್ಲಿ ಅಗತ್ಯವಾಗಿದ್ದ ಮಣ್ಣನ್ನು ತಮ್ಮ ಕೃಷಿ ಭೂಮಿಯಿಂದಲೇ ನೀಡಿದ್ದರು. ಆದರೆ, ರಸ್ತೆಗೆ ಸುರಿಯುವ ಮಣ್ಣು ಮಳೆಗಾಲದಲ್ಲಿ ವಾಪಸ್ ಬಂದು ಮೋರಿಯಲ್ಲಿ ಸಿಕ್ಕಿಕೊಳ್ಳುತ್ತಿದೆ. ಇದರಿಂದ ನೀರು ಕೃಷಿ ಭೂಮಿಯಲ್ಲಿ ತುಂಬಿಕೊಳ್ಳುತ್ತಿದೆ. ಇದನ್ನು ಸರಿಪಡಿಸಿಕೊಡುವಂತೆ ಮನವಿಯನ್ನು ಸಲ್ಲಿಸಿದರೂ ಯಾರೂ ಇದುವರೆಗೆ ಇದನ್ನು ಸರಿಪಡಿಸಿಲ್ಲ ಎನ್ನುವುದು ಈ ಮನೆಯವರ ಆರೋಪ.

ನಮ್ಮ ಮನೆಯ ಕಡೆಗೆ ರಾಜಕಾರಣಿಗಳು ಬರಬೇಡಿ - ಮುಂಡೋಳಿಮೂಲೆ ಮನೆ: ಮಾತ್ರವಲ್ಲದೇ ಗಂಗಾಕಲ್ಯಾಣ ಯೋಜನೆಯಡಿ ನೀರಿನ ಸಮಸ್ಯೆ ಬಗೆಹರಿಸುತ್ತೇವೆಂದು ಶಾಸಕರು ಭರವಸೆ ನೀಡಿದ್ದರು. ಇದನ್ನೂ ಇದುವರೆಗೂ ನೀಡಲಾಗಿಲ್ಲ. ಹೀಗಾಗಿ ನಮ್ಮ ಮನೆಯ ಕಡೆಗೆ ರಾಜಕಾರಣಿಗಳು ಬರಬೇಡಿ ಎಂದು ಮುಂಡೋಳಿಮೂಲೆ ಮನೆಯವರು ಈ ರೀತಿ ಬ್ಯಾನರ್ ಅಳವಡಿಕೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: 'ರಸ್ತೆ, ಸೇತುವೆ ಮಾತ್ರವಲ್ಲ ಯುವಕರಿಗೆ ಮದುವೆಯೂ ಇಲ್ಲ': ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು

ಮತದಾನ ಬಹಿಷ್ಕಾರಕ್ಕೆ ಕೊ.ಕಾಫಿ ಕಾರ್ಮಿಕರ ನಿರ್ಧಾರ: ಕೊಡಗಿನಲ್ಲಿ ಹಿಂದಿನಿಂದಲೂ ಕಾಫಿ ಎಸ್ಟೇಟ್​ಗಳಲ್ಲಿ ಕೂಲಿ ಮಾಡುತ್ತಾ ಬದುಕುತ್ತಿದ್ದ ಕುಟುಂಬಗಳು ಅಲ್ಲಿನ ಅವರ ಲೈನ್​ಮನೆಗಳನ್ನು ಬಿಟ್ಟು ಸ್ವಂತ ಮನೆಗಳನ್ನು ಕಟ್ಟಿಕೊಳ್ಳುವುದಕ್ಕಾಗಿ ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿ ಬದುಕುತ್ತಿದ್ದಾರೆ. ಆದರೆ ಈಗ ಸರ್ಕಾರಿ ಜಮೀನುಗಳಲ್ಲಿ ಗುಡಿಸಲು ಕಟ್ಟಿಕೊಂಡು ಬದುಕುತ್ತಿರುವ ಅವರಿಗೆ ಪಂಚಾಯಿತಿ ವ್ಯಾಪ್ತಿಯಿಂದ ಹೊರಗೆ ಇದ್ದಾರೆ ಎಂಬ ಕಾರಣ ನೀಡಿ ಇರುವ ದಾಖಲೆಗಳನ್ನು ವರ್ಗಾವಣೆ ಮಾಡಿಸಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಆದರೆ, ಅದೇ ಅಧಿಕಾರಿಗಳು ಈಗ ಯಾವುದೇ ದಾಖಲೆಗಳನ್ನು ಮಾಡಿಕೊಡುತ್ತಿಲ್ಲ ಎನ್ನುತ್ತಿದ್ದಾರೆ. ದಾಖಲೆಗಳು ಇರಲಿ ಇತ್ತ ಮೂಲ ಸೌಲಭ್ಯವಾದ ಪಡಿತರ ಕೂಡ ದೊರಕದೇ ಇರುವುದು ಇಲ್ಲಿನ ಜನರ ಬೇಸರಕ್ಕೆ ಕಾರಣವಾಗಿದೆ. ಹೈಸೊಡ್ಲೂರಿನಲ್ಲಿ ಮುಕ್ಕಾಲು ಎಕರೆ ಭೂಮಿಯಲ್ಲಿ 74 ಕುಟುಂಬಗಳು ಶೆಡ್ ಕಟ್ಟಿಕೊಂಡು ವಿದ್ಯುತ್, ರಸ್ತೆ, ಕುಡಿಯುವ ನೀರು ಸೇರಿದಂತೆ ಯಾವುದೇ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಹೀನಾಯ ಬದುಕು ನಡೆಸುತ್ತಿದ್ದೇವೆ ಎಂದು ಕಾರ್ಮಿಕ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೈನ್​ ಮನೆ ಬಿಟ್ಟು ಸ್ವಂತ ಸೂರು ಕಟ್ಟಿಕೊಂಡಿದ್ದೇ ತಪ್ಪಾಯಿತೇ?. ನಮಗೆ ಅಗತ್ಯವಿರುವ ವಿವಿಧ ದಾಖಲೆಗಳನ್ನು ಮಾಡಿಕೊಡುವಂತೆ ಶಾಸಕರಿಂದ ಹಿಡಿದು ತಹಸಿಲ್ದಾರ್​ ಜಿಲ್ಲಾಧಿಕಾರಿಯವರೆಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ ಎಂದಿದ್ದಾರೆ ನಿವಾಸಿಗಳಿ. ಆದರೂ ಯಾರು ಇವರ ಕಷ್ಟಕ್ಕೆ ಸ್ಪಂದಿಸದೇ ಇರುವುದರಿಂದ ಈ ಬಾರಿ ಕಾರ್ಮಿಕ ನಿವಾಸಿಗಳು ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಗೃಹ ಸಚಿವರ ಕ್ಷೇತ್ರದಲ್ಲಿ ಮೂಲಸೌಕರ್ಯ ಮರೀಚಿಕೆ ಆರೋಪ.. ಮತದಾನ ಬಹಿಷ್ಕರಿಸಿಲು ಗ್ರಾಮಸ್ಥರ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.