ETV Bharat / state

ದ.ಕ ಜಿಲ್ಲೆಯಲ್ಲಿ 920 ಧಾರ್ಮಿಕ ಕೇಂದ್ರಗಳು ಅನಧಿಕೃತ ಪಟ್ಟಿಯಲ್ಲಿವೆ - ಆದ್ರೆ ತೆರವಿನ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ: ಡಿಸಿ - ಅಕ್ರಮ ದೇವಾಲಯ ಕಟ್ಟಡ

ಈ ಮೊದಲು 1579 ಧಾರ್ಮಿಕ ಕೇಂದ್ರಗಳನ್ನು ಅನಧಿಕೃತ ಎಂದು  ಗುರುತಿಸಲಾಗಿತ್ತು.  ಇದರಲ್ಲಿ 1202 ದೇವಸ್ಥಾನ, 79 ಚರ್ಚ್ , 281 ಮಸೀದಿ ಮತ್ತು 17 ಇತರ ಧಾರ್ಮಿಕ ಕೇಂದ್ರಗಳಿದ್ದವು.  ಇದರಲ್ಲಿ ಈಗಾಗಲೇ 356 ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ಕೆಡವಲಾಗಿದೆ. ಅದರಲ್ಲಿ 267 ದೇವಸ್ಥಾನ, 13 ಚರ್ಚ್ , 71 ಮಸೀದಿ ಮತ್ತು 5 ಇತರ ಧಾರ್ಮಿಕ ಕೇಂದ್ರಗಳಾಗಿವೆ.

unofficial-religious-centres
ದ.ಕ ಜಿಲ್ಲೆಯಲ್ಲಿ ಅನಧಿಕೃತ ಪಟ್ಟಿಯಲ್ಲಿದೆ 920 ಧಾರ್ಮಿಕ ಕೇಂದ್ರಗಳು
author img

By

Published : Sep 15, 2021, 6:03 AM IST

ಮಂಗಳೂರು: ಮೈಸೂರಿನ ದೇವಸ್ಥಾನ ಕೆಡವಿದ ಬಳಿಕ ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವಿನ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ 920 ಧಾರ್ಮಿಕ ಕೇಂದ್ರಗಳು ಅನಧಿಕೃತ ಕಟ್ಟಡದ ಪಟ್ಟಿಯಲ್ಲಿದೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ 920 ಧಾರ್ಮಿಕ ಕೇಂದ್ರಗಳು ಅನಧಿಕೃತ ಪಟ್ಟಿಯಲ್ಲಿದೆ. ಇದರಲ್ಲಿ 667 ದೇವಸ್ಥಾನಗಳು, 56 ಚರ್ಚ್, 186 ಮಸೀದಿ ಮತ್ತು 11 ಇತರ ಧಾರ್ಮಿಕ ಕೇಂದ್ರಗಳಾಗಿವೆ. ಈ ಮೊದಲು 1579 ಧಾರ್ಮಿಕ ಕೇಂದ್ರಗಳನ್ನು ಅನಧಿಕೃತ ಎಂದು ಗುರುತಿಸಲಾಗಿತ್ತು. ಇದರಲ್ಲಿ 1202 ದೇವಸ್ಥಾನ, 79 ಚರ್ಚ್ , 281 ಮಸೀದಿ ಮತ್ತು 17 ಇತರ ಧಾರ್ಮಿಕ ಕೇಂದ್ರಗಳಿದ್ದವು. ಇದರಲ್ಲಿ ಈಗಾಗಲೇ 356 ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ಕೆಡವಲಾಗಿದೆ. ಅದರಲ್ಲಿ 267 ದೇವಸ್ಥಾನ, 13 ಚರ್ಚ್ , 71 ಮಸೀದಿ ಮತ್ತು 5 ಇತರ ಧಾರ್ಮಿಕ ಕೇಂದ್ರಗಳಾಗಿವೆ.

ಅನಧಿಕೃತ ಎಂದು ಗುರುತಿಸಲಾದ ಧಾರ್ಮಿಕ ಕೇಂದ್ರಗಳಲ್ಲಿ 152 ಕ್ರಮಬದ್ದ ಮಾಡಲಾಗಿದೆ. ಅದರಲ್ಲಿ 124 ದೇವಸ್ಥಾನ, 7 ಚರ್ಚ್ , 20 ಮಸೀದಿ ಮತ್ತು 1 ಇತರ ಧಾರ್ಮಿಕ ಕೇಂದ್ರವಾಗಿದೆ. ಅನಧಿಕೃತ ಎಂದು ಗುರುತಿಸಲಾದ ಧಾರ್ಮಿಕ ‌ಕೇಂದ್ರಗಳಲ್ಲಿ 151ನ್ನು ಕೈಬಿಡಲಾಗಿದ್ದು, ಅದರಲ್ಲಿ 108 ದೇವಸ್ಥಾನ, 19 ಚರ್ಚ್, 23 ಮಸೀದಿ ಮತ್ತು 1 ಇತರ ಧಾರ್ಮಿಕ ಕೇಂದ್ರಗಳಾಗಿದೆ.

ಇನ್ನೂ 920 ಧಾರ್ಮಿಕ ಕೇಂದ್ರಗಳನ್ನು ಕೆಡವಲು ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಒಟ್ಟಿನಲ್ಲಿ ಅನಧಿಕೃತ ಪಟ್ಟಿಯಲ್ಲಿರುವ ದೇವಸ್ಥಾನ, ‌ಮಸೀದಿ , ಚರ್ಚ್ ಮತ್ತು ಇತರ ಧಾರ್ಮಿಕ ಕೇಂದ್ರಗಳಲ್ಲಿ ತೆರವಿನ ಭೀತಿ ಎದುರಾಗಿದೆ.

ಸದ್ಯ ಯಾವುದೆ ತೆರವಿನ ನಿರ್ಧಾರ ಮಾಡಲಾಗಿಲ್ಲ: ಡಿಸಿ

ಈ ಬಗ್ಗೆ ಸ್ಪಷ್ಟನೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡುವ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಅಧಿಕಾರಿಗಳು ಅನಧಿಕೃತ ಧಾರ್ಮಿಕ ಕೇಂದ್ರಗಳ ಪರಿಶೀಲನೆ ನಡೆಸಿ ಪೊಲೀಸರ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದು ವೇಳೆ, ಈ ಧಾರ್ಮಿಕ ಕೇಂದ್ರಗಳು ಪುರಾತನವಾದದ್ದು ಆಗಿದ್ದಲ್ಲಿ, ರಸ್ತೆ ಸುರಕ್ಷತೆಗೆ ಅಪಾಯಕಾರಿ ಜಾಗದಲ್ಲಿ ಇಲ್ಲದೇ ಇದ್ದಲ್ಲಿ, ಸಾರ್ವಜನಿಕರಿಗೆ ಉಪದ್ರವ ಆಗದೇ ಇದ್ದಲ್ಲಿ, ಸಾಮಾಜಿಕ ಸಾಮರಸ್ಯಕ್ಕೆ ತೊಂದರೆಯಾಗದಿದ್ದಲ್ಲಿ ಅದನ್ನು ಕ್ರಮಬದ್ದ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.