ETV Bharat / state

ಮಂಗಳೂರು: ಕೊರೊನಾ ಸೋಂಕಿಗೆ 8 ಮಂದಿ ಸಾವು,198 ಹೊಸ ಪ್ರಕರಣ ದೃಢ - Corona Latest News

ಇಂದೂ ಸಹ ಜಿಲ್ಲೆಯಲ್ಲಿ 198 ಮಂದಿಗೆ ಕೊರೊನಾ ದೃಢಪಟ್ಟಿದೆ. ಅಲ್ಲದೆ ಬರೋಬ್ಬರಿ 105 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

8 peoples died from corona today and new 198 cases reported
ಮಂಗಳೂರು: ಕೊರೊನಾ ಸೋಂಕಿಗೆ 8 ಮಂದಿ ಸಾವು...198 ಹೊಸ ಪ್ರಕರಣ ದೃಢ
author img

By

Published : Jul 30, 2020, 9:27 PM IST

ಮಂಗಳೂರು (ದ.ಕ): ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 8 ಮಂದಿ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು ಸಾವನ್ನಪ್ಪಿದ ಎಂಟು ಮಂದಿಯಲ್ಲಿ ತಲಾ ಒಬ್ಬರು ದಾವಣಗೆರೆ, ಮೈಸೂರಿನವರಾಗಿದ್ದು ಆರು ಮಂದಿ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ.

ದಾವಣಗೆರೆ ಜಿಲ್ಲೆಯ 60 ವರ್ಷದ ಮಹಿಳೆ, ಮೈಸೂರು ಜಿಲ್ಲೆಯ 75 ವರ್ಷದ ಪುರುಷ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ 36 ವರ್ಷದ ಮಹಿಳೆ, 64 ವರ್ಷದ ಪುರುಷ, ಮಂಗಳೂರಿನ 60 ವರ್ಷದ ಪುರುಷ, 57 ವರ್ಷದ ಮಹಿಳೆ, 52 ವರ್ಷದ ಪುರುಷ, 87 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.

ಇಂದೂ ಸಹ ಜಿಲ್ಲೆಯಲ್ಲಿ 198 ಮಂದಿಗೆ ಕೊರೊನಾ ದೃಢಪಟ್ಟಿದೆ. ಇದರಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 27, ಐಎಲ್ಐನಿಂದ 80, ಸಾರಿ ಪ್ರಕರಣದಿಂದ 14, ವಿದೇಶ ಪ್ರವಾಸ ಬಂದಿದ್ದ ನಾಲ್ವರಲ್ಲಿ ಕೊರೊನಾ ದೃಢವಾಗಿದೆ.

ಇವರಲ್ಲಿ 73 ಮಂದಿಯ ಸಂಪರ್ಕ ಪತ್ತೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 5,509 ಮಂದಿಗೆ ಕೊರೊನಾ ದೃಢಪಟ್ಟಿದೆ. ಈ ನಡುವೆ ಜಿಲ್ಲೆಯಲ್ಲಿಂದು 105 ಮಂದಿ ಗುಣಮುಖರಾಗಿದ್ದು, ಒಟ್ಟು 2,561 ಮಂದಿ ಗುಣವಾಗಿದರೆ 2,800 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.