ETV Bharat / state

ಜೂಜಾಟದಲ್ಲಿ ನಿರತರಾಗಿದ್ದ 8 ಮಂದಿ ಅರೆಸ್ಟ್​​: ನಗದು ಸಹಿತ ಕಾರು,ದ್ವಿಚಕ್ರ ವಾಹನ ವಶ! - involved in gambling

ಮಂಗಳೂರು ನಗರದ ಖಾಸಗಿ ಲಾಡ್ಜ್​ವೊಂದರಲ್ಲಿ ಜೂಜಾಟವಾಡುತ್ತಿದ್ದ 8 ಮಂದಿಯನ್ನು ಪೊಲೀಸರು ಖಚಿತ ಮಾಹಿತಿ ಪಡೆದು ಬಂಧಿಸಿದ್ದು, ನಗದು ಸೇರಿ ಕಾರು, ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ.

ಸೊತ್ತು ವಶಕ್ಕೆ ಪಡೆದ ಪೊಲೀಸರು
author img

By

Published : Sep 6, 2019, 2:29 AM IST

ಮಂಗಳೂರು: ನಗರದ ಬೆಂದೂರ್ ವೆಲ್ಕುಮಾರ್ ಇಂಟರ್ ನ್ಯಾಷನಲ್ ಲಾಡ್ಜ್​​​ನಲ್ಲಿ ಜೂಜಾಟ ಆಡುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಕಲ್ಕರ ಹೌಸ್ ನಿವಾಸಿ ಪ್ರವೀಣ್(41), ಪೆರ್ಮನ್ನೂರು ಗ್ರಾಮದ ನಿವಾಸಿ ನವೀನ್ (35), ತಲಪಾಡಿಯ ಪಂಜರ ಹೌಸ್ ನಿವಾಸಿ ನವೀನ್ ಆಳ್ವ (39), ಸೂಪಿಕಾನದ ಹಳೆಕಳ ಹೌಸ್ ನಿವಾಸಿ ಬಶೀರ್(52), ಕಂಡೇವ್ ಹೌಸ್ ನ ಸತೀಶ(33), ಬಂಟ್ವಾಳ ತಾಲೂಕಿನ ಪುದು ಗ್ರಾಮದ ಸುಜೀರ್ ಹೌಸ್ ನಿವಾಸಿ ವಿಜಯ ಕುಮಾರ್ (38), ಉಳ್ಳಾಲ ಮಾಸ್ತಿಕಟ್ಟೆಯ ಸುಂದರಿಭಾಗ್ ನಿವಾಸಿ ಭಾಸ್ಕರ (45), ಮರೋಳಿ ಗ್ರಾಮದ ನಿವಾಸಿ ಆಕಾಶ್ (31) ಬಂಧಿತ ಆರೋಪಿಗಳು.

ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ, 49,340 ರೂ. ನಗದು, 1 ಬೊಲೆರೊ ಕಾರು, 3 ದ್ವಿಚಕ್ರ ವಾಹನ ಹಾಗೂ 10 ಮೊಬೈಲ್ ಫೋನ್ ಹಾಗೂ ಜುಗಾರಿ ಆಟ ಆಡಲು ಉಪಯೋಗಿಸಿದ ವಸ್ತುಗಳನ್ನ ವಶ ಪಡಿಸಿಕೊಂಡಿದ್ದು, ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮಂಗಳೂರು: ನಗರದ ಬೆಂದೂರ್ ವೆಲ್
ಕುಮಾರ್ ಇಂಟರ್ ನ್ಯಾಷನಲ್ ಲಾಡ್ಜ್ ನಲ್ಲಿ ಜೂಜಾಟದಲ್ಲಿ ನಿರತರಾಗಿದ್ದ 8 ಮಂದಿ ಆರೋಪಿಗಳನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಬಜಾಲ್, ಕಲ್ಕರ ಹೌಸ್ ನಿವಾಸಿ
ಪ್ರವೀಣ್(41), ಮಂಗಳೂರಿನ ತೊಕ್ಕೊಟ್ಟು, ಕೃಷ್ಣನಗರ ಪೆರ್ಮನ್ನೂರು ಗ್ರಾಮದ ಚರ್ಚ್ ಬಳಿಯ ನಿವಾಸಿ ನವೀನ್ (35), ಮಂಗಳೂರಿನ ತಲಪಾಡಿಯ ಪಂಜರ ಹೌಸ್ ನಿವಾಸಿ ನವೀನ್ ಆಳ್ವ (39), ಉಳ್ಳಾಲ, ಸೂಪಿಕಾನದ ಹಳೆಕಳ ಹೌಸ್ ನಿವಾಸಿ ಬಶೀರ್(52) ನೀರುಮಾರ್ಗ ಸರಿಪಳ್ಳ, ಕಂಡೇವ್ ಹೌಸ್ ನ ಸತೀಶ(33)
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಸುಜೀರ್ ಹೌಸ್ ನಿವಾಸಿ ವಿಜಯ ಕುಮಾರ್ (38), ಉಳ್ಳಾಲ ಮಾಸ್ತಿಕಟ್ಟೆಯ ಸುಂದರಿಭಾಗ್ ನಿವಾಸಿ ಭಾಸ್ಕರ (45), ಮರೋಳಿ ಗ್ರಾಮದ ಕಪಿತಾನಿಯಾ ತಿಮ್ಮಪ್ಪ ನಿಲಯ ನಿವಾಸಿ ಆಕಾಶ್ (31) ಬಂಧಿತ ಆರೋಪಿಗಳು.

Body:ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, 49,340 ರೂ. ನಗದು, 1 ಬೊಲೆರೊ ಕಾರು, 3 ದ್ವಿಚಕ್ರ ವಾಹನ ಹಾಗೂ 10 ಮೊಬೈಲ್ ಫೋನ್ ಗಳು ಹಾಗೂ ಜುಗಾರಿ ಆಟ ಆಡಲು ಉಪಯೋಗಿಸಿದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕಾರ್ಯಚರಣೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ರವರ ನೇತೃತ್ವದಲ್ಲಿ ಉಪ ಪೊಲೀಸ್ ಆಯುಕ್ತರಾದ ಅರುಣಾಂಶುಗಿರಿ ಮತ್ತು ಲಕ್ಷ್ಮಿ ಗಣೇಶ್ ಹಾಗೂ ಸಹಾಯಕ ಆಯುಕ್ತ ಭಾಸ್ಕರ ಒಕ್ಕಲಿಗ ಇವರ ಮಾರ್ಗದರ್ಶನದಲ್ಲಿ ಕದ್ರಿ ಠಾಣೆಯ ಪೊಲೀಸ್ ನಿರೀಕ್ಷಕ ಶಾಂತರಾಮ, ಪಿಎಸ್ ಐ ಮಾರುತಿ ಎಸ್.ವಿ., ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಮಾಡಿರುತ್ತಾರೆ.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.