ETV Bharat / state

ಪುತ್ತೂರು ಪೊಲೀಸ್​​ ಠಾಣೆ ಮೇಲೂ ಕೊರೊನಾ ಕರಿಛಾಯೆ... 8 ಮಂದಿ ಹೋಮ್ ​ಕ್ವಾರಂಟೈನ್​​!

ಮಹಾಮಾರಿ ಕೊರೊನಾ ಕರಿಛಾಯೆ ಎಲ್ಲೆಡೆ ಹಬ್ಬುತ್ತಿದ್ದು, ಇದೀಗ ಕೊರೊನಾ ವಾರಿಯರ್​ಗಳಾದ ಪೊಲೀಸ್​​ ಸಿಬ್ಬಂದಿಯನ್ನೂ ಸಂಕಷ್ಟಕ್ಕೀಡುಮಾಡುತ್ತಿದೆ.

8 of the Puttur Police Station are in Home Quarantine
ಪುತ್ತೂರು ಪೊಲೀಸ್​​ ಠಾಣೆಯ ಮೇಲೂ ಕೊರೊನಾ ಕರಿಛಾಯೆ...8 ಮಂದಿ ಹೋಮ್ ​ಕ್ವಾರೆಂಟೈನ್​!
author img

By

Published : May 26, 2020, 11:58 AM IST

ಪುತ್ತೂರು: ನಗರ, ಸಂಚಾರ, ಮಹಿಳಾ ಪೊಲೀಸ್ ಠಾಣೆಯ ಸಿಬಂದಿಗೆ ಯಾವುದೇ ಕೊರೊನಾ ಸೋಂಕಿತರ ಸಂಪರ್ಕ ಆಗದಿದ್ದರೂ ಗಡಿ ಪ್ರದೇಶದಲ್ಲಿ ಚೆಕ್‌ ಪೋಸ್ಟ್​ನಲ್ಲಿ ಕಾರ್ಯನಿರತರಾಗಿದ್ದ ಠಾಣೆಯ ನಾಲ್ವರು ಮತ್ತು ಜ್ವರ ಬಾಧೆಗೆ ಸಂಬಂಧಿಸಿ ನಾಲ್ವರು ಸೇರಿ ಒಟ್ಟು 8 ಸಿಬಂದಿ ಹೋಮ್​ ಕ್ವಾರಂಟೈನ್‌ನಲ್ಲಿದ್ದಾರೆ.

ಠಾಣಾ ವ್ಯಾಪ್ತಿಗೆ ಸಂಬಂಧಿಸಿ ಹೊರ ರಾಜ್ಯದಿಂದ ಬಂದು ವಸತಿ ನಿಲಯಗಳಲ್ಲಿ ಹೋಮ್ ಕ್ವಾರಂಟೈನ್ ಆಗಿರುವ ಮತ್ತು ಮನೆಯಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿರುವವರ ಮಾಹಿತಿ ಪಡೆಯುವ ಕಾರ್ಯ ನಡೆಸಿದವರು ಮತ್ತು ಗುಂಡ್ಯ, ಸಂಪಾಜೆ ಸೇರಿದಂತೆ ಬೇರೆ ಬೇರೆ ಗಡಿ ಭಾಗದ ಚೆಕ್ ಪೋಸ್ಟ್​​ನಲ್ಲಿ ಕಾರ್ಯನಿರತರಾದ ಪೊಲೀಸ್ ಸಿಬಂದಿಗೆ ಇಲಾಖೆ ನಿರ್ದೇಶನದಂತೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಈ ನಡುವೆ ಕೆಲವರಿಗೆ ಗಂಟಲು ನೋವು, ಶೀತ, ಜ್ವರ ಬಾಧೆಯಿಂದಾಗಿ ಅವರು ಹೋಮ್ ಕ್ವಾರಂಟೈನ್‌ನಲ್ಲಿ ಇರಬೇಕಾಗಿದೆ.

ಪುತ್ತೂರು ಪೊಲೀಸ್​​ ಠಾಣೆ

ಹಾಗಾಗಿ ಪುತ್ತೂರು ನಗರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ಸೇರಿದಂತೆ ವಿಟ್ಲ ಪೊಲೀಸ್ ವಸತಿ ನಿಲಯದಿಂದ ಪುತ್ತೂರು ಠಾಣೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಪೊಲೀಸ್ ಸಿಬಂದಿಗೂ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಜ್ವರ, ಶೀತ ಬಾಧೆಗೆ ಸಂಬಂಧಿಸಿ ಇಬ್ಬರು ಮಹಿಳಾ ಪೊಲೀಸರು ಹಾಗೂ ಸಂಚಾರ ಪೊಲೀಸ್ ಠಾಣೆಯಲ್ಲಿ ಚೆಕ್‌ ಪೋಸ್ಟ್​​​ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಓರ್ವ ಮತ್ತು ಮಡಿಕೇರಿಯ ಸೋಂಕಿತನ ಸಂಪರ್ಕ ಹೊಂದಿದ್ದ ವಿಚಾರಕ್ಕೆ ಓರ್ವ ಸೇರಿದಂತೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಒಟ್ಟು 8 ಮಂದಿ ಪೊಲೀಸರು ಹೋಮ್ ಕ್ವಾರಂಟೈನ್‌ಗೆ ತೆರಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.