ETV Bharat / state

ಕೊರೊನಾದಿಂದ ಸಂಕಷ್ಟದಲ್ಲಿವೆ ದ.ಕ ಜಿಲ್ಲೆಯ ಶೇ.60ರಷ್ಟು ಕೈಗಾರಿಕೆಗಳು

author img

By

Published : Sep 30, 2020, 9:57 PM IST

ಜಗತ್ತಿನಾದ್ಯಂತ ಭೀತಿ ಸೃಷ್ಟಿಸಿರುವ ಕೊರೊನಾ ವೈರಸ್​ನಿಂದ ಕೈಗಾರಿಕಾ ರಂಗವು ಸಂಕಷ್ಟಕ್ಕೆ ಸಿಲುಕಿದ್ದು, ಹಲವು ಕೈಗಾರಿಕೆಗಳನ್ನು ಒಡಲಲ್ಲಿಟ್ಟುಕೊಂಡಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿಯೂ ಕೈಗಾರಿಕಾ ರಂಗ ತೀವ್ರ ಸಮಸ್ಯೆಯನ್ನೆದುರಿಸುತ್ತಿದೆ..

60 percent of industries facing hardship from Corona
ಕೊರೊನಾದಿಂದ ಸಂಕಷ್ಟದಲ್ಲಿವೆ ದ.ಕ.ಜಿಲ್ಲೆಯ ಶೇ. 60ರಷ್ಟು ಕೈಗಾರಿಕೆಗಳು

ಮಂಗಳೂರು : ಕೊರೊನಾದಿಂದ ವಿಶ್ವದಾದ್ಯಂತ ನಾನಾ ವಿಭಾಗಗಳು ಸಂಕಷ್ಟಕ್ಕೆ ಸಿಲುಕಿವೆ. ಅದರಲ್ಲಿಯೂ ಕೈಗಾರಿಕಾ ರಂಗ ತೀವ್ರ ಸಂಕಷ್ಟದಲ್ಲಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶೇ. 60ರಷ್ಟು ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೀಡಾಗಿವೆ.

ಕೊರೊನಾದಿಂದ ಸಂಕಷ್ಟದಲ್ಲಿವೆ ದ.ಕ ಜಿಲ್ಲೆಯ ಶೇ.60ರಷ್ಟು ಕೈಗಾರಿಕೆಗಳು

ಕೊರೊನಾ ಲಾಕ್​ಡೌನ್​ನಿಂದಾಗಿ ಜಿಲ್ಲೆಯಲ್ಲಿನ ಹಲವು ಕೈಗಾರಿಕೆಗಳ ಉತ್ಪಾದನೆಗೆ ತೊಡಕಾಗಿದೆ. ಒಂದೆಡೆ ಉತ್ಪಾದನೆಗೆ ಬೇಕಾದ ವಸ್ತುಗಳು ಸರಬರಾಜು ಆಗದಿರುವುದು ಸಮಸ್ಯೆ ತಂದಿಟ್ಟರೆ, ಮತ್ತೊಂದೆಡೆ ಉತ್ಪಾದನೆಯಾದ ವಸ್ತುಗಳಿಗೆ ಬೇಡಿಕೆಯೇ ಇಲ್ಲ. ಹೀಗಾಗಿ, ಕೈಗಾರಿಕೆಗಳು ಸಾಕಷ್ಟು ನಷ್ಟ ಅನುಭವಿಸುತ್ತಿವೆ. ಜಿಲ್ಲೆಯ ಕೈಗಾರಿಕೆಗಳಲ್ಲಿ ಸಾಕಷ್ಟು ವಲಸೆ ಕಾರ್ಮಿಕರಿದ್ದರು. ಕೊರೊನಾದಿಂದಾಗಿ ಬಹುತೇಕ ಕಾರ್ಮಿಕರು ಊರಿಗೆ ತೆರಳಿರುವುದರಿಂದ ಕಾರ್ಮಿಕರ ಸಮಸ್ಯೆಯನ್ನು ಕೈಗಾರಿಕೆಗಳು ಎದುರಿಸುತ್ತಿದೆ.

ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಲ್ಲಿಯೂ ಕೊರೊನಾ ವೈರಸ್ ಕಾಣಿಸಿಕೊಂಡು ಆರಂಭದಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಆದರೆ, ಜಿಲ್ಲಾಡಳಿತ ಇದೀಗ ಕಾರ್ಮಿಕರಲ್ಲಿ ಕೊರೊನಾ ಕಾಣಿಸಿಕೊಂಡರೆ ಸ್ಯಾನಿಟೈಸೇಷನ್ ಮಾಡಿ ಮತ್ತೆ ಕೈಗಾರಿಕೆಗಳನ್ನು ಆರಂಭಿಸಲು ಅವಕಾಶ ನೀಡುತ್ತಿರುವುದರಿಂದ ಆ ಸಮಸ್ಯೆ ಇದೀಗ ಕೈಗಾರಿಕೆಗಳಲ್ಲಿ ಇಲ್ಲ. ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಸುರಕ್ಷತೆಯು ಪ್ರಮುಖವಾಗಿರುವುದರಿಂದ ಅದರತ್ತಲೂ ಕೈಗಾರಿಕಾ ರಂಗ ಗಮನಹರಿಸಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಒಂದು ಶಿಫ್ಟ್​​ನಲ್ಲಿ ಶೇ. 50ರಷ್ಟು ಕಾರ್ಮಿಕರನ್ನು ಕೆಲಸ ಮಾಡಿಸಲಾಗ್ತಿದೆ. ಜೊತೆಗೆ ಜಾಗೃತಿ ಮೂಡಿಸಲಾಗುತ್ತಿದೆ.

ಸದ್ಯ, ಜಿಲ್ಲೆಯಲ್ಲಿದ್ದ ಶೇ.40 ಕೈಗಾರಿಕೆಗಳು ಮಾತ್ರ ಕೊರೊನಾ ಸಮಸ್ಯೆಯಿಂದ ಪಾರಾಗಿವೆ. ಶೇ.60ರಷ್ಟು ಕೈಗಾರಿಕೆಗಳು ಸಂಕಷ್ಟ ಎದುರಿಸುತ್ತಿವೆ. ಶೇ.30ರಷ್ಟು ಕೈಗಾರಿಕೆಗಳು ಮುಚ್ಚಿದ್ದು, ಇಲ್ಲಿನ ಮಾಲೀಕರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.