ETV Bharat / state

ದ‌.ಕ ಜಿಲ್ಲೆಯಲ್ಲಿ 8 ವೈದ್ಯರು ಸೇರಿದಂತೆ 44 ಮಂದಿಗೆ ಕೊರೊನಾ: 17 ಮಂದಿ ಗುಣಮುಖ - ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಇಂದು ಒಂದೇ ದಿನ 44 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

Dakshina Kannada District
ದ‌.ಕ ಜಿಲ್ಲೆ
author img

By

Published : Jun 30, 2020, 9:18 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 8 ಮಂದಿ ವೈದ್ಯರು ಸೇರಿದಂತೆ 44 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಇಂದು ಒಂದೇ ದಿನ 17 ಜನ ಸೋಂಕಿತರು ಗುಣಮುಖರಾಗಿದ್ದಾರೆ.

ಇಂದು ಕೊರೊನಾ ದೃಢಪಟ್ಟ 8 ಮಂದಿ ವೈದ್ಯರಲ್ಲಿ ಕೋವಿಡ್ ಆಸ್ಪತ್ರೆಯ ವೈದ್ಯರು ಸೇರಿದ್ದಾರೆ. 44 ಮಂದಿಯಲ್ಲಿ 2 ಸೌದಿ ಅರೇಬಿಯಾದಿಂದ, 1 ಹೊರ ರಾಜ್ಯ, 3 ಅಂತರ್ ಜಿಲ್ಲೆಯಿಂದ ಆಗಮಿಸಿದವರಾಗಿದ್ದಾರೆ. 9 ಐಎಲ್ಐ, 3 ತೀವ್ರ ಉಸಿರಾಟದ ಪ್ರಕರಣ, 21 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದವರಾಗಿದ್ದಾರೆ. ಇನ್ನುಳಿದ 5 ಮಂದಿಯ ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದೆ. 44 ಮಂದಿ ಸೋಂಕಿತರಲ್ಲಿ 33 ಪುರುಷರು 11 ಮಂದಿ ಮಹಿಳೆಯರಾಗಿದ್ದಾರೆ.

ಇಂದು 17 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಇವರ ಗಂಟಲು ದ್ರವ ಪರೀಕ್ಷೆ ಎರಡು ಬಾರಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಡಿಸ್ವಾರ್ಜ್ ಮಾಡಲಾಗಿದೆ. ಗುಣಮುಖರಾದವರಲ್ಲಿ 12 ಮಂದಿ ಪುರುಷರು, 5 ಮಂದಿ ಮಹಿಳೆಯರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 749 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 443 ಮಂದಿ ಗುಣಮುಖರಾಗಿದ್ದಾರೆ. 14 ಮಂದಿ ಸಾವನ್ನಪ್ಪಿದ್ದು, 292 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 316 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.