ಮಂಗಳೂರು: ಇಲ್ಲಿನ ಚಿಲಿಂಬಿಯಲ್ಲಿ ನಿಲ್ಲಿಸಲಾಗಿದ್ದ ಕಾರಿನ ಗಾಜು ಒಡೆದು ದುಷ್ಕರ್ಮಿಗಳು ₹15 ಲಕ್ಷ ದೋಚಿದ್ದಾರೆ.
ಬ್ಯಾಂಕ್ ಎದುರು ಕಾರ್ ನಿಲ್ಲಿಸಿ ಒಳಗೆ ಹೋದ ವೇಳೆ ಬೈಕ್ನಲ್ಲಿ ಬಂದ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಬ್ಯಾಂಕ್ ವ್ಯವಹಾರ ಮುಗಿಸಿ ಹೊರಬಂದಾಗ ಕಾರಿನಲ್ಲಿದ್ದ ಹಣ ಕಳ್ಳತನವಾಗಿರುವುದು ತಿಳಿದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.