ಮಂಗಳೂರು: ಇಲ್ಲಿನ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ಗೆ ಸರಕು ಸಾಗಣೆಯ ಹಡಗು ಡಿಕ್ಕಿ ಹೊಡೆದ ಪರಿಣಾಮ ದುರಂತಕ್ಕೀಡಾಗಿದ್ದು, ಮೂವರು ಮೀನುಗಾರರು ಸಾವಿಗೀಡಾದರೆ, ಈವರೆಗೆ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಇನ್ನು ಕಣ್ಮರೆಯಾಗಿರುವ 9 ಮೀನುಗಾರರಿಗಾಗಿ ಸಮುದ್ರದಲ್ಲಿ ಶೋಧ ಕಾರ್ಯ ಮುಂದುವರಿದಿದೆ.
-
In a swift sea-air #SAR operation @IndiaCoastGuard deployed 03 #ICG ships & aircraft to search for 14 fishermen of IFB ‘Rabah’ approx 43 NM west #NewMangalore #today. 02 crew found, search for other crew in progress.@DefenceMinIndia @Min_FAHD @shipmin_india @SpokespersonMoD
— Indian Coast Guard (@IndiaCoastGuard) April 13, 2021 " class="align-text-top noRightClick twitterSection" data="
">In a swift sea-air #SAR operation @IndiaCoastGuard deployed 03 #ICG ships & aircraft to search for 14 fishermen of IFB ‘Rabah’ approx 43 NM west #NewMangalore #today. 02 crew found, search for other crew in progress.@DefenceMinIndia @Min_FAHD @shipmin_india @SpokespersonMoD
— Indian Coast Guard (@IndiaCoastGuard) April 13, 2021In a swift sea-air #SAR operation @IndiaCoastGuard deployed 03 #ICG ships & aircraft to search for 14 fishermen of IFB ‘Rabah’ approx 43 NM west #NewMangalore #today. 02 crew found, search for other crew in progress.@DefenceMinIndia @Min_FAHD @shipmin_india @SpokespersonMoD
— Indian Coast Guard (@IndiaCoastGuard) April 13, 2021
ಕೇರಳದಿಂದ ಮೀನುಗಾರಿಕೆ ನಡೆಸುತ್ತಾ ಬಂದ ಮೀನುಗಾರಿಕಾ ಬೋಟ್ ಮಂಗಳೂರು ಸಮೀಪ ದುರಂತಕ್ಕೀಡಾಗಿದೆ. ನವ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದ್ದು ಇದರಲ್ಲಿ 14 ಮೀನುಗಾರರು ಇದ್ದರು.
ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಹಡಗು ಮತ್ತು ಏರ್ಕ್ರಾಪ್ಟ್ ಮೂಲಕ ಶೋಧ ಕಾರ್ಯ ನಡೆಸುತ್ತಿದ್ದಾರೆ. 14 ಜನರಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಉಳಿದವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಇಂಡಿಯನ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.
ಶೋಧದ ವೇಳೆ ಮೂವರ ಮೃತದೇಹಗಳು ಸಿಕ್ಕಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. 9 ಮಂದಿ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ.