ಚಿತ್ರದುರ್ಗ: 1989 ರಲ್ಲಿ ಅಯೋಧ್ಯೆಗೆ ತೆರಳಿದ್ದ ಜಿಲ್ಲೆಯ ಕರ ಸೇವಕರ ಕನಸು ನನಸಾಗಿದ್ದು ರಾಮಮಂದಿರ ಭೂಮಿ ಪೂಜೆ ‘ಹಿನ್ನೆಲೆಯಲ್ಲಿ ಇಂದು ಹೋಮ ಹವನ ನೆರವೇರಿಸಲಾಯಿತು.
ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ನೇತೃತ್ವದಲ್ಲಿ ಹೋಮ-ಹವನ ಕೈಗೊಳ್ಳಲಾಗಿತ್ತು. 1989 ರಲ್ಲಿ ವಿಶ್ವ ಹಿಂದೂ ಪರಿಷತ್ ಕರೆ ನೀಡದ್ದ ಕರಸೇವೆಗೆ ಚಿತ್ರದುರ್ಗದಿಂದ ಭಾಗಿಯಾಗಿದ್ದ ಸಾಕಷ್ಟು ಕರಸೇವಕರಿಗೆ ಸನ್ಮಾನ ಕೂಡ ಮಾಡಲಾಯಿತು. ಶ್ರೀ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ರಾಮ ಮಂದಿರ ನಿರ್ಮಾಣ ಕಾರ್ಯ ಯಶಸ್ವಿಯಾಗಲೆಂದು ಚಿತ್ರದುರ್ಗ ನಗರದ ಸಿದ್ದರಾರಮೇಶ್ವರ ವಸತಿ ಶಾಲೆ ಬಳಿ ಇರುವ ಶ್ರೀ ರಾಮ ದೇವಾಲಯದಲ್ಲಿ ಶ್ರೀ ರಾಮಾವತಾರ ಹಾಗೂ ಗಣ ಹೋಮ ಹಮ್ಮಿಕೊಳ್ಳಲಾಗಿತ್ತು.
![Worship at Chitradurga](https://etvbharatimages.akamaized.net/etvbharat/prod-images/kn-ctd-02-05-homa-hawana-pkg-7204336_05082020145607_0508f_1596619567_1075.jpg)
ಶ್ರೀ ರಾಮನಿಗೆ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಕಟ್ಟಿಗೆಯ ಚಿಕ್ಕ ಚಿಕ್ಕ ಚೂರುಗಳಿಂದ ಶ್ರೀ ರಾಮನ ದೇವಾಲಯವನ್ನು ನಿರ್ಮಿಸಲಾಗಿದ್ದು, ನೋಡುಗರನ್ನು ರಾಮ ಮಂದಿರ ಆಕರ್ಷಿಸುತ್ತಿತು.
![Worship at Chitradurga](https://etvbharatimages.akamaized.net/etvbharat/prod-images/kn-ctd-02-05-homa-hawana-pkg-7204336_05082020145607_0508f_1596619567_435.jpg)
ಹೋಮ ಹವನದಲ್ಲಿ ಯಾದವ ಶ್ರೀ, ಸೇವಾಲಾಲ್ ಶ್ರೀ, ಕಬೀರನಂದ ಶ್ರೀ, ಭೋವಿ ಮಠದ ಸಿದ್ದರಾಮೇಶ್ವರ ಶ್ರೀಗಳು ಭಾಗಿಯಾಗಿ ಹಿತವಚನ ನೀಡಿದರು.